ನಮ್ಮ ತೆರಿಗೆ ನಮ್ಮ ಹಕ್ಕು. ಇಂಥಾದ್ದೊಂದು ಅಭಿಯಾನ ಹಮ್ಮಿಕೊಂಡಿರೋ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅದೇನೇ ಹೇಳಿದರೂ.. ಇದೊಂದು ಪೊಲಿಟಿಕಲ್ ಅಸ್ತ್ರ ಅನ್ನೋದ್ರಲ್ಲಿ ಅನುಮಾನ ಇಲ್ಲ. ಕರ್ನಾಟಕದಲ್ಲಿ ದೆಹಲಿ ಚಲೋ ಮಾಡಿದ ಇದೇ ಕಾಂಗ್ರೆಸ್, ಕೇರಳದಲ್ಲಿ ಇದೇ ವಿಷಯಕ್ಕೆ ರಾಜ್ಯ ಸರ್ಕಾರದ ಪರ ಇಲ್ಲ. ಅಲ್ಲಿರೋದೇನೂ ಬೇರೆಯವರಲ್ಲ. ಎಡಪಕ್ಷದ ಸರ್ಕಾರ. ಕೇರಳದಲ್ಲಿ ಗುದ್ದಾಡುತ್ತಿದ್ದರೂ.. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಇಂಡಿಯಾ ಒಕ್ಕೂಟದಲ್ಲಿಯೇ ಇವೆ. ಹೀಗಿದ್ದರೂ.. ಎಡಪಕ್ಷಗಳ ತೆರಿಗೆ ಹಾಗೂ ಅನುದಾನ ಹಂಚಿಕೆ ತಾರತಮ್ಯ ವಾದಕ್ಕೆ ನೋ ಎಂದಿರೋ ಕಾಂಗ್ರೆಸ್, ದೆಹಲಿಗೆ ಹೋಗ್ತಿಲ್ಲ. ಆದರೆ.. ಅದೇ ವಾದವನ್ನ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ದೆಹಲಿ ಚಲೋ ಮಾಡಿದೆ. ಜಂತರ್ ಮಂತರ್ʻನಲ್ಲಿ ಪ್ರತಿಭಟನೆ ಮಾಡಿದೆ. ಆದರೆ.. ಇದಕ್ಕೆ ಉತ್ತರ ಕೊಟ್ಟಿರುವ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ಮೋದಿಯವರ ಉತ್ತರದಲ್ಲಿ ಅಂಕಿ ಅಂಶಗಳ ಸ್ಪಷ್ಟನೆಯಲ್ಲಿ ಗೊಂದಲವೇ ಹೆಚ್ಚಾಗಿದೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1 ಲಕ್ಷ 87 ಸಾವಿರ ಕೋಟಿ ರು. ನಷ್ಟ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುವ ರಾಜ್ಯ ಕರ್ನಾಟಕ. ಹೀಗಿದ್ದೂ, ನಮಗೆ ಯಾಕೆ ಈ ತಾರತಮ್ಯ ಯಾಕೆ ಅನ್ನೋದು ಸಿದ್ದರಾಮಯ್ಯ ಪ್ರಶ್ನೆ. ವರ್ಷಕ್ಕೆ ನಾವು 4 ಲಕ್ಷ 30 ಸಾವಿರ ಕೋಟಿ ರು.ಗಳನ್ನು ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ಕೊಡುತ್ತಿದ್ದೇವೆ. ಆದರೆ, ನಮಗೆ ವಾಪಸ್ ಬರುವುದು 50 ಸಾವಿರ ಕೋಟಿ ಮಾತ್ರ. ಅಂದರೆ, ನಾವು ಕೇಂದ್ರಕ್ಕೆ ನೂರು ರು. ತೆರಿಗೆ ರೂಪದಲ್ಲಿ ಕೊಟ್ಟರೆ, ಕೇಂದ್ರ ನಮಗೆ ಕೇವಲ 12-13 ರು. ಮಾತ್ರ ಕೊಡುತ್ತಿದೆ. 15ನೇ ಹಣಕಾಸು ಆಯೋಗದಿಂದಾಗಿ ತೆರಿಗೆಯೊಂದರಲ್ಲೇ ನಮಗೆ 62,098 ಕೋಟಿ ಅನ್ಯಾಯವಾಗಿದೆ. ಈ ಅನ್ಯಾವನ್ನು ನಾವು ಪ್ರಶ್ನಿಸಬಾರದಾ? ಅಂತಾರೆ ಸಿದ್ದರಾಮಯ್ಯ.
ಬರಗಾಲ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯ ತೀವ್ರ ಬರ ಎದುರಿಸುತ್ತಿದ್ದರೂ, ಎನ್‌ಡಿಆರ್‌ಎಫ್‌ನಿಂದ ಈವರೆಗೂ ನಮಗೆ ಒಂದೇ ಒಂದು ಪೈಸೆ ಪರಿಹಾರ ಧನ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಅನ್ನೋದು ಅವರ ವಾದ.
ಮಿಕ್ಕ ವಿಷಯಗಳನ್ನೆಲ್ಲ ಪಕ್ಕಕ್ಕಿಡಿ. ಇಲ್ಲಿ ಅಂಕಿ ಅಂಶಗಳನ್ನಷ್ಟೇ ತೆಗೆದುಕೊಂಡರೆ.. ಅದಕ್ಕೆ ಕೇಂದ್ರ ಕೊಟ್ಟಿರುವ ಉತ್ತರ ನಿರಾಸೆಯನ್ನೇ ಮೂಡಿಸುತ್ತೆ. ಅಂಕಿ ಅಂಶಗಳ ಪ್ರಶ್ನೆಗೆ ಅಂಕಿ ಅಂಶಗಳ ಮೂಲಕವೇ ಉತ್ತರ ಕೊಡಬೇಕು. ಆದರೆ.. ನರೇಂದ್ರ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಇಬ್ಬರೂ ಕಾಂಗ್ರೆಸ್ ದೇಶ ಒಡೆಯುವ ಪ್ರಯತ್ನ ಮಾಡುತ್ತಿದೆ. ಬರಗಾಲ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯ ತೀವ್ರ ಬರ ಎದುರಿಸುತ್ತಿದ್ದರೂ, ಎನ್‌ಡಿಆರ್‌ಎಫ್‌ನಿಂದ ಈವರೆಗೂ ನಮಗೆ ಒಂದೇ ಒಂದು ಪೈಸೆ ಪರಿಹಾರ ಧನ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲಎಂದು ಮೋದಿ ಹೇಳುತ್ತಿದ್ದಾರೆ. ನಮ್ಮ ತೆರಿಗೆ, ನಮ್ಮ ಹಣ’ ಎಂಬ ಭಾಷೆಯನ್ನು ಬಳಸಲಾಗುತ್ತಿದೆ. ಇದೆಂತಹ ಭಾಷೆ? ದೇಶವನ್ನು ಒಡೆಯಲು ಇಂತಹ ಭಾವನೆಗಳನ್ನು ವ್ಯಕ್ತಪಡಿಸಬೇಡಿ. ಇದು ದೇಶದ ಭವಿಷ್ಯಕ್ಕೆ ಅತ್ಯಂತ ಅಪಾಯಕಾರಿ. ಇಡೀ ದೇಶವನ್ನು ಜತೆಯಾಗಿ ಒಯ್ಯಲು ಪ್ರಯತ್ನಿಸಿ ಎಂದು ಸಲಹೆ ಮಾಡಿದ್ದಾರೆ.
ಇತ್ತ ನಿರ್ಮಲಾ ಸೀತಾರಾಮನ್, ಸಚಿವ ಪ್ರಹ್ಲಾದ್ ಜೋಶಿಯವರ ಜೊತೆಗೂಡಿ ಸುದ್ದಿಗೋಷ್ಠಿ ಮಾಡಿ ಕಾಂಗ್ರೆಸ್ ಹೇಳಿರುವುದೆಲ್ಲ ಸುಳ್ಳು. ಹಣ ಕೊಟ್ಟಿದ್ದೇವೆ ಎಂದು ಒಂದಷ್ಟು ಅಂಕಿ ಅಂಶಗಳನ್ನೇನೋ ಹೇಳಿದ್ಧಾರೆ. ಆ ಅಂಕಿ ಅಂಶಗಳನ್ನೆಲ್ಲ ಒಟ್ಟಾಗಿ ಗುಡ್ಡೆ ಹಾಕಿದರೆ.. ಸಿದ್ದರಾಮಯ್ಯ ಕೊಟ್ಟ ಲೆಕ್ಕದಂತೆಯೇ ಇರುತ್ತೆ. ಅಂದಹಾಗೆ ಕರ್ನಾಟಕಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹಂಚಿಕೆ ಅನ್ಯಾಯವಾಗಿದೆ ಎಂದೇ ಅರ್ಥ ಧ್ವನಿಸುತ್ತೆ. ಉದಾಹರಣೆಗೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಕೊಟ್ಟಿಲ್ಲ ಎನ್ನುವ ಪ್ರಶ್ನೆಗೆ ಉತ್ತರವನ್ನೇ ಕೊಡಲ್ಲ.
ಎಲ್ಲವುಗಳನ್ನೂ ಕೇವಲ ಭಾವನಾತ್ಮಕ ಹೇಳಿಕೆಯಿಂದ ನಿರ್ಧಾರ ಮಾಡಬಾರದು. ಕರ್ನಾಟಕ ರಾಜ್ಯ ಸರ್ಕಾರ ಅದೇನೇ ಗ್ಯಾರಂಟಿ ಬಜೆಟ್ ಕೊಟ್ಟರೂ.. ಅದಕ್ಕೆ ಕಡಿವಾಣ ಹಾಕುವ ಅಸ್ತ್ರವೂ ಕಾಂಗ್ರೆಸ್ ಬಳಿ ಇದೆ ಅಲ್ಲವೇ.. ಅಂದರೆ.. ಯೋಜನೆಗಳಿಗೆ ಹಣ ಹಂಚಿಕೆ ಮಾಡುವಾಗ, ಆ ಯೋಜನೆಯ ಹಣವನ್ನು ಅದೇ ಯೋಜನೆಗೆ ಬಳಸಬೇಕು ಎಂಬ ನಿರ್ಬಂಧ ವಿಧಿಸುವ ಅವಕಾಶ ಕೇಂದ್ರದ ಎದುರು ಇದೆ.



