ಕೇಂದ್ರದ ಮೋದಿ ಸರ್ಕಾರ (Narendra Modi) ಉದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ (Wave Off) ಮಾಡಿದೆ ಎಂದು ಆರೋಪಿಸುತ್ತಿದೆ (Congress) ಕಾಂಗ್ರೆಸ್. ರಾಜ್ಯ ಬಿಜೆಪಿ ನಾಯಕರಿಗೆ (BJP) ಈ ಆರೋಪಗಳಿಗೆ ಉತ್ತರ ಕೊಡಬೇಕೋ ಬೇಡವೋ ಎಂಬ ಗೊಂದಲ ಇದೆ. ವಿಷಯ ಅರ್ಥವಾಗಿಲ್ಲವೋ ಏನೋ.. ಹಾಗೆ ಆರೋಪ ಮಾಡುವಾಗಲೆಲ್ಲ ಕಾಂಗ್ರೆಸ್ ನಾಯಕರು ನೀರವ್ ಮೋದಿ(Nirav modi, choksi), ಲಲಿತ್ ಮೋದಿ, ವಿಜಯ್ ಮಲ್ಯ (Vijay Malya) ಮೊದಲಾದವರ ಉದಾಹರಣೆ ಕೊಡುತ್ತಾರೆ. ಇತ್ತೀಚೆಗೆ (Ambani) ಅಂಬಾನಿ, ಅದಾನಿಯವರ (Adani) ಸಾಲವನ್ನೂ ಮನ್ನಾ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಈ ರೀತಿ ಆರೋಪ ಮಾಡುವವರಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) , ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರೂ ಇದ್ದಾರೆ. ಉಳಿದಂತೆ ಎಲ್ಲ ನಾಯಕರೂ ಇಂಥಾ ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಸತ್ಯವೇನು?
ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ?. ಸಾಲ ಮನ್ನಾದ ಬಗ್ಗೆ ಇಬ್ಬರೂ ಮುಖಂಡರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಒಂದು ವೇಳೆ ಸಾಬೀತು ಮಾಡದೇ ಹೋದಲ್ಲಿ ಅವರೂ ರಾಜಕೀಯದಿಂದ ಹಿಂದೆ ಸರಿಯಬೇಕು ಎಂದು ಬಹಿರಂಗವಾಗಿ ಸವಾಲು ಹಾಕಿದ್ಧಾರೆ ಕೇಂದ್ರ ಸಚಿವ (Prahlad Joshi) ಪ್ರಹ್ಲಾದ್ ಜೋಶಿ.
ಯುಪಿಎ ಸರ್ಕಾರ (UPA Govt) ಆಡಳಿತದಲ್ಲಿ ಇರುವಾಗ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ಗಳ ಮೂಲಕ ಕಾಂಗ್ರೆಸ್ ಕಚೇರಿಯಿಂದ ದೂರವಾಣಿ ಕರೆ ಮಾಡಿ ತಮಗೆ ಬೇಕಾದವರಿಗೆ ಅತಿ ಹೆಚ್ಚು ಸಾಲ ಕೊಡಿಸಿದ್ದಾರೆ. ಆದರೆ, ಅವರು ಸಾಲದ ಹಣವನ್ನು ಹಿಂತಿರುಗಿಸಿಲ್ಲ. ದೇಶದಲ್ಲಿ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಾಲ ವಾಪಸ್ ಮಾಡಲಾಗದೆ ಕೆಲವರು ದೇಶ ಬಿಟ್ಟು ಓಡಿ ಹೋಗಿದ್ದಾರೆ. 40 ಸಾವಿರ ಕೋಟಿಯಷ್ಟುಸಾಲವನ್ನು ಈಗಾಗಲೇ ವಸೂಲಿ ಮಾಡಲಾಗಿದೆ. ಸಾಲ ನೀಡಲು ಪತ್ರ ನೀಡಿದವರು, ಫೋನ್ ಮಾಡಿದವರ ಹೆಸರು ಹೊರ ಬರುವುದು ಎಂದು ಹೆದರಿ ಕಾಂಗ್ರೆಸ್ನವರು ಓಡಿ ಹೋದ ವಂಚಕರಿಗೆ ದೇಶಕ್ಕೆ ಬರದಂತೆ ಸಹಾಯ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ ಪ್ರಹ್ಲಾದ್ ಜೋಶಿ (Prahlad Joshi).
ಉದ್ಯಮಿಗಳ ಸಾಲ ಮನ್ನಾ ಮಾಡಲಾಗಿದೆಯೇ..?
ಜೋಶಿಯವರ ಮಾತಿನಲ್ಲಿ ಸತ್ಯವಿದೆ. ಉದ್ಯಮಿಗಳು ಓಡಿ ಹೋಗಿರುವುದು ಸತ್ಯ. ಆದರೆ ಅವರ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಸಾಲ ವಸೂಲಾತಿ ಮಾಡಿ. ಈ ರೀತಿ ವಸೂಲಾಗಿರುವ ಸಾಲ 40 ಸಾವಿರ ಕೋಟಿಗೂ ಹೆಚ್ಚು. ಮಲ್ಯ, ನೀರವ್ ಮೋದಿ(Nirav Modi) , ಚೋಕ್ಸಿ (Choksi) ಸೇರಿದಂತೆ ಹಲವರ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಅಲ್ಲದೆ ದೇಶಭ್ರಷ್ಟರಾಗಿರುವ ಆರೋಪಿ ಉದ್ಯಮಿಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳೂ ಚಾಲ್ತಿಯಲ್ಲಿವೆ.
ಇನ್ನೂ ಒಂದು ವಿಷಯವೆಂದರೆ ಕಳೆದ ವರ್ಷ ಭಾರತದ ಬ್ಯಾಂಕುಗಳಲ್ಲಿನ ವಸೂಲಿಯಾಗದ ಸಾಲದ (NPA) ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣಕ್ಕೆ ಇಳಿಕೆಯಾಗಿದೆ. ಇಷ್ಟಕ್ಕೂ ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದು 9 ವರ್ಷವಾಗಿದೆ. 9 ವರ್ಷದ ಅವಧಿಯಲ್ಲಿ ಯಾವ ಬ್ಯಾಂಕುಗಳೂ ಅದನ್ನು ಎನ್`ಪಿಎ ಅಂದರೆ ವಸೂಲಿಯಾಗದ ಸಾಲ (NPA) ಎಂದು ಲಿಸ್ಟಿಗೆ ಸೇರಿಸುವುದಿಲ್ಲ. ಅಷ್ಟೇ ಅಲ್ಲ, ಮೋದಿ ಪ್ರಧಾನಿಯಾದ ಮೇಲೆ ವಸೂಲಿಯಾಗದ (NPA) ಸಾಲವನ್ನು, ಸಾಲಗಾರರ ಆಸ್ತಿ ವಶಕ್ಕೆ ತೆಗೆದುಕೊಂಡು ಮಾರಾಟ ಮಾಡುತ್ತಿರುವುದೂ ಹೊಸದು. ಹೀಗಾಗಿಯೇ ಎನ್`ಪಿಎ (NPA) ಪ್ರಮಾಣ ಕಡಿಮೆಯಾಗಿದೆ. ಸುಸ್ತಿದಾರರ ಸಂಖ್ಯೆಯೂ ಇಳಿಕೆಯಾಗಿದೆ.



