ರಾಜ್ʻಕುಮಾರ್. ಅದು ಅವರ ಮೂಲ ಹೆಸರಲ್ಲ. ಮುತ್ತುರಾಜ್ ಎನ್ನುವುದು ರಾಜ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. ತಾಯಿ ಲಕ್ಷ್ಮಮ್ಮ. ಮುತ್ತತ್ತಿರಾಯನ ಹರಕೆಯಿಂದ ಹುಟ್ಟಿದ ಎನ್ನುವ ನಂಬಿಕೆಯಿಂದಾಗಿ ಮುತ್ತುರಾಜ್ ಎಂಬ ಹೆಸರನ್ನಿಟ್ಟರಂತೆ. ಆ ಹೆಸರನ್ನು ಬದಲಿಸಿದ್ದು ಹೆಚ್.ಎಲ್.ಎನ್. ಸಿಂಹ. ಬೇಡರ ಕಣ್ಣಪ್ಪ ಚಿತ್ರದಲ್ಲಿ. ಮುಂದೆ ಆಗಿದ್ದು ಇತಿಹಾಸ.
ಆ ಹೆಸರಿನ ಮಹಾತ್ಮೆ ಇಡೀ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ.. ಕರ್ನಾಟಕಕ್ಕೇ ಹರಡಿದೆ. ಡಾ.ರಾಜ್ ಮಕ್ಕಳು ಹಾಗೂ ಮೊಮ್ಮಕ್ಕಳು ತಮ್ಮ ಹೆಸರಿನ ಮುಂದೆ ರಾಜ್ ಕುಮಾರ್ ಹೆಸರು ಇಟ್ಟುಕೊಂಡಿದ್ದಾರೆ. ಶಿವ ರಾಜ್ʻಕುಮಾರ್, ರಾಘವೇಂದ್ರ ರಾಜ್ʻಕುಮಾರ್, ಪುನೀತ್ ರಾಜ್ʻಕುಮಾರ್, ವಿನಯ್ ರಾಜ್ʻಕುಮಾರ್, ಯುವ ರಾಜ್ʻಕುಮಾರ್.. ಹೀಗೆ.. ಇದೀಗ ರಾಮ್ ಕುಮಾರ್ ಮಗ ಧಿರೇನ್ ಕೂಡಾ ತಮ್ಮ ಹೆಸರಿನ ಮುಂದೆ ರಾಜ್ʻಕುಮಾರ್ ಹೆಸರು ಇಟ್ಟುಕೊಳ್ಳುತ್ತಿದ್ದಾರೆ.
ಧಿರೇನ್ ರಾಮ್ ಕುಮಾರ್ ಹೆಸರು ಬದಲಿಸಿಕೊಂಡಿದ್ದು ಇನ್ನು ಮುಂದೆ ಅವರ ಹೆಸರು ಧಿರೇನ್ ಆರ್.ರಾಜ್ʻಕುಮಾರ್. ಧಿರೇನ್ ಅವರ ಡಾ.ರಾಜ್ ಅವರ ಕುಟುಂಬದ ಕುಡಿಯೇ. ಆದರೆ.. ಮಗಳ ಮಗ. ಡಾ.ರಾಜ್ ಅವರ ಮಗಳು ಪೂರ್ಣಿಮಾ ಅವರನ್ನು ಮದುವೆಯಾಗಿದ್ಧಾರೆ. ಪಾರ್ವತಮ್ಮನವರು ಸ್ಥಾಪಿಸಿದ ಬ್ಯಾನರುಗಳಲ್ಲಿ ಪೂರ್ಣಿಮಾ ಕಂಬೈನ್ಸ್ ಕೂಡಾ ಒಂದು.
ಶಿವ 143 ಚಿತ್ರದ ಮೂಲಕ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟ ಧಿರೇನ್ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಇದೀಗ ಹೆಸರು ಬದಲಿಸಿದ್ಧಾರೆ. ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗ ತಾತನ ಹೆಸರು ಇಟ್ಟುಕೊಳ್ಳಿ ಎಂದು ಅರ್ಚಕರು ಸಲಹೆ ನೀಡಿದ್ದರು. ನನಗೂ ಸರಿ ಎನಿಸಿತು. ಅದಕ್ಕೆ ಒಂದು ಸಂದರ್ಭ ಬೇಕಿತ್ತು. ಈ ಸಿನಿಮಾ ಮೂಲಕ ಹೆಸರು ಬದಲಾಯಿಸಿಕೊಂಡಿದ್ದೇನೆ. ತಾತನ ಹೆಸರಿನ ಜೊತೆ ಮುಂದುವರಿಯುತ್ತೇನೆ. ಈ ಹೆಸರಿನಲ್ಲಿ ತೂಕ ಇದೆ, ಏಳಿಗೆ ಇದೆ. ಇದರಿಂದ ಪಾಸಿಟಿವ್ ಆಗಿ ಒಂದು ಹೊಸ ಅಧ್ಯಾಯ ಆರಂಭ ಆಗಿದೆ ಎಂದು ಧೀರೇನ್ ಆರ್.ರಾಜ್ʻಕುಮಾರ್ ಹೇಳಿದ್ದಾರೆ.
ಧೀರೇನ್ ಆರ್. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ಕೆಆರ್ಜಿ ಸ್ಟುಡಿಯೋಸ್’ ಒಂದು ಹೊಸ ಸಿನಿಮಾ ಘೋಷಿಸಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳ ಮಕ್ಕಳು ತಮ್ಮ ಹೆಸರಿನ ಮುಂದೆ ತಂದೆಯವರ ಕುಟುಂಬದ ಸರ್ʻನೇಮ್ ಬಳಸುವುದು ವಾಡಿಕೆ. ಆದರೆ.. ರಾಮ್ʻಕುಮಾರ್ ಮಗ ತಾಯಿಯ ತಂದೆಯ ಹೆಸರನ್ನೇ ಬಳಸುತ್ತಿದ್ಧಾರೆ.
ಅಂದಹಾಗೆ.. ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್ ಈಗಲೂ ರಾಮ್ ಕುಮಾರ್ ಹೆಸರನ್ನೇ ಬಳಸುತ್ತಿದ್ಧಾರೆ. ಅವರಿನ್ನೂ ಹೆಸರು ಬದಲಿಸಿಲ್ಲ.
ತಂದೆಯ ಹೆಸರನ್ನು ಬಳಸಿಕೊಂಡಿರುವವರಲ್ಲಿ ದರ್ಶನ್ (ತೂಗುದೀಪ), ಅಭಿಷೇಕ್ (ಅಂಬರೀಷ್), ಅಮೃತಾ (ಪ್ರೇಮ್), ತರುಣ್ (ಸುಧೀರ್).. ಮೊದಲಾದವರಿದ್ಧಾರೆ. ಲಿಸ್ಟ್ ತುಂಬಾ ದೊಡ್ಡದು. ಹೆಸರನ್ನು ನೀವೂ ಸೇರಿಸಬಹುದು.



