ಸಮೀಕ್ಷೆಗಳು ಸುಳ್ಳಾಗಿವೆ. ನಿಖರತೆ ಇರಲಿ, ಫಲಿತಾಂಶದ ಹತ್ತಿರಕ್ಕೆ ಇರುವ ಒಂದೇ ಒಂದು ಸಮೀಕ್ಷೆಯೂ ಇಲ್ಲ. ಚುನಾವಣಾ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳೆಲ್ಲವೂ ಅಟ್ಟರ್ ಫ್ಲಾಪ್. ಇಂತಹ ಸಂದರ್ಭದಲ್ಲಿಯೇ ಕೆಲವು ಜ್ಯೋತಿಷಿಗಳ ಭವಿಷ್ಯದ ಲೆಕ್ಕವೂ ಅಷ್ಟೇ ಇಂಟ್ರೆಸ್ಟಿಂಗ್. ಏಕೆಂದರೆ.. ಕೆಲವರ ಭವಿಷ್ಯ ನಿಜವಾಗಿದೆ. ಕೆಲವರದ್ದು ಸುಳ್ಳಾಗಿದೆ.
ಸತ್ಯ ಭವಿಷ್ಯ ನುಡಿದ ಜ್ಯೋತಿಷಿಗಳು :
ರುದ್ರ ಕರನ್ ಪ್ರತಾಪ್ ಎಂಬ ಜ್ಯೋತಿಷಿ ʻಮೋದಿಯವರಿಗೆ ಈ ಬಾರಿ ಅತಿದೊಡ್ಡ ಚಾಲೆಂಜ್ ಎದುರಾಗಲಿದೆ. ಅತ್ಯಂತ ಪ್ರಬಲ ಪೈಪೋಟಿಯನ್ನು ಎದುರಿಸಿಯೂ ಮೋದಿ ಗೆಲ್ಲಲಿದ್ಧಾರೆ. ಆದರೆ, ದಕ್ಷಿಣದಲ್ಲಿ ಕರ್ನಾಟಕ ದೊಡ್ಡ ನಷ್ಟ ಮಾಡಲಿದೆ. ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಖಾತೆ ತೆರೆಯಬಹುದು. ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗೆ ಗೆಲ್ಲುವ ಸಾಧ್ಯತೆ ಕಡಿಮೆ. ಆದರೆ, ದೆಹಲಿಯಲ್ಲಿ ಬಿಜೆಪಿ ನಿರಾಯಾಸವಾಗಿಯೇ ಗೆಲ್ಲುತ್ತೆ. 2024ರ ರಿಸಲ್ಟ್ ಅಂತೂ ಬರುವುದಿಲ್ಲ. ಕಾಂಗ್ರೆಸ್ ಪ್ರಬಲವಾಗಲಿದೆ ಎಂದಿದ್ದರು. ಅವರು ಹೇಳಿದಂತೆಯೇ ಆಗಿದೆ.
ಸುಳ್ಳಾದ ಭವಿಷ್ಯವಾಣಿಗಳು :
ಇನ್ನು ಕುಂಡಲಿ ಜ್ಯೋತಿಷಿ ಕೆ.ಎನ್. ಸಿನ್ಹಾ, ಅನಿರುದ್ಧ್ ಕುಮಾರ್ ಮಿಶ್ರಾ, ಕರ್ನಾಟಕದ ಹಲವು ಜ್ಯೋತಿಷಿಗಳು.. ಪ್ರಕಾಶ್ ಅಮ್ಮಣ್ಣಾಯ, ಬಸವರಾಜ್ ಗುರೂಜಿ ಮೊದಲಾದವರು ಹೇಳಿದ ಭವಿಷ್ಯಗಳು ಸುಳ್ಳಾಗಿವೆ. ನೊಣವಿನಕೆರೆಯ ಭವಿಷ್ಯಕಾರನೊಬ್ಬ ಹೇಳಿದ್ದ ಕಾಂಗ್ರೆಸ್ ಗೆಲುವು ಹಾಗೂ ಮಹಿಳಾ ಪ್ರಧಾನಿಯ ಕಥೆಯೂ ಸುಳ್ಳಾಗಿದೆ.
ತೆಲುಗಿನಲ್ಲಿ ವಿಚಿತ್ರ ಬೆಳವಣಿಗೆ :
ತೆಲುಗು ಚಿತ್ರರಂಗದಲ್ಲಿ ವೇಣು ಸ್ವಾಮಿ ಎಂಬ ಜ್ಯೋತಿಷಿ ಇದ್ಧಾರೆ. ಈತ ಎಷ್ಟು ಫೇಮಸ್ ಎಂದರೆ.. ಚಿತ್ರರಂಗದ ಸ್ಟಾರ್ ನಟ ನಟಿಯರು ಈತನ ಹತ್ತಿರವೇ ಭವಿಷ್ಯ ಕೇಳ್ತಾರೆ. ಅಷ್ಟೇ ಅಲ್ಲ, ಗೃಹ ಪ್ರವೇಶ, ಮದುವೆ, ಬ್ರೇಕಪ್, ಸಿನಿಮಾ ಸಕ್ಸಸ್, ಫ್ಲಾಪ್.. ಎಲ್ಲದಕ್ಕೂ ಈತನ ಆಶೀರ್ವಾದ ಪಡೆಯುತ್ತಾರೆ. ಈತ ಇದೀಗ ಮುಕ್ತಾಯವಾಗಿರುವ ಚುನಾವಣೆಗಳ ಬಗ್ಗೆಯೂ ಭವಿಷ್ಯ ಹೇಳಿದ್ದು, ಅವುಗಳಲ್ಲಿ ಒಂದು ನಿಜವಾಗಿದ್ದರೆ, ಮತ್ತೊಂದು ಸುಳ್ಳಾಗಿದೆ.
ನಿಜವಾದ ಭವಿಷ್ಯ ಏನೆಂದರೆ.. ಮೋದಿ ಪ್ರಭಾವ ಕುಸಿಯುತ್ತದೆ. ಆದರೆ, ಅವರೇ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು. ಸುಳ್ಳಾಗಿರುವುದು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್ರ ಪಕ್ಷ ಮತ್ತೆ ಗೆಲ್ಲುತ್ತದೆ, ಮತ್ತೆ ಜಗನ್ ಸಿಎಂ ಆಗುತ್ತಾರೆ ಎಂದು ಹೇಳಿದ್ದು.
‘ನರೇಂದ್ರ ಮೋದಿ ಪ್ರಭಾವ ಗತ್ತುತ್ತದೆ ಎಂದಿದ್ದೆ. ಜಗನ್ ಮತ್ತೆ ಗೆಲ್ಲುತ್ತಾರೆ ಎಂದಿದ್ದೆ. ನನಗೆ ಇರುವ ವಿದ್ವತ್, ನಾನು ಕಲಿತ ವಿದ್ಯೆಗಳ ಆಧಾರದಲ್ಲಿ ಈ ಭವಿಷ್ಯವನ್ನು ನಾನು ನುಡಿದಿದ್ದೆ. ನನ್ನ ಭವಿಷ್ಯದಲ್ಲಿ ಮೊದಲನೆಯದು ನಿಜವಾಗಿದೆ. ಮೋದಿಯವರ ಫ್ರಭಾವ ತಗ್ಗಿರುವುದು ಫಲಿತಾಂಶದಿಂದ ಗೊತ್ತಾಗುತ್ತಿದೆ. ನಾನು ಜಾತಕಗಳನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯ ಹೇಳಿದ್ದೆ. ನಾನು ಹೇಳಿದ ಭವಿಷ್ಯ ಈ ಬಾರಿ ತಪ್ಪಾಗಿದೆ. ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ನಾನು ನಂಬುವ ವೆಂಕಟೇಶ್ವರ ಸ್ವಾಮಿ ಮತ್ತು ಕಾಮಾಕ್ಯ ದೇವಿಯ ಕ್ಷಮೆ ಕೇಳುತ್ತೇನೆ. ನಾನು ಹೇಳಿರುವುದು ಸುಳ್ಳಾಗಿದೆಯಾದ್ದರಿಂದ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದ್ಧಾರೆ. ವಿಡಿಯೋ ಮೂಲಕ ಕ್ಷಮೆ ಕೇಳಿದ್ಧಾರೆ.
ನಾನು, ಆಂಧ್ರ ರಾಜಕೀಯದ ಬಗ್ಗೆ ಹೇಳಿರುವ ಭವಿಷ್ಯ ತಪ್ಪಾಗಿರುವ ಕಾರಣ, ಇಂದಿನಿಂದ ರಾಜಕೀಯ ಹಾಗೂ ಸಿನಿಮಾ ವ್ಯಕ್ತಿಗಳ ಬಗ್ಗೆ ಎಲ್ಲಿಯೂ ಭವಿಷ್ಯ ನುಡಿಯುವುದಿಲ್ಲ, ಜಾತಕ ವಿಶ್ಲೇಷದಿರುವ ನಿರ್ಧಾರ ತಳೆದಿದ್ದೇನೆ. ನಾನು ಈ ಬಾರಿ ಜಗನ್ ಹಾಗೂ ಚಂದ್ರಬಾಬು ನಾಯ್ಡು ಅವರ ಜಾತಕಗಳನ್ನು ವಿಶ್ಲೇಷಣೆ ಮಾಡುವುದರಲ್ಲಿ ಎಡವಿದ್ದೇನೆ. ನ್ನು ಮುಂದೆ ಯಾವುದೇ ರಾಜಕೀಯ ಅಥವಾ ಸಿನಿಮಾ ವ್ಯಕ್ತಿಗಳ ಭವಿಷ್ಯವನ್ನು ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ.



