ಸ್ವಾಮೀಜಿ ಅರೆಸ್ಟ್ ಆದ್ರೆ ಸತ್ಯ ಹೊರಬರುತ್ತೆ
ದೊಡ್ಡ ದೊಡ್ಡ ಹೆಸರುಗಳು ಹೊರಬರುತ್ತೆ
ಸ್ವಾಮೀಜಿ ಸಿಕ್ಕಿ ಹಾಕ್ಕೊಳ್ಳಿ, ಗೊತ್ತಾಗುತ್ತೆ
ಇಂದಿರಾ ಕ್ಯಾಂಟೀನ್ದು ಬಿಲ್ ಪೆಂಡಿಂಗ್ ಇದೆ
ಅದಕ್ಕೋಸ್ಕರ ಈ ಷಡ್ಯಂತ್ರ ಮಾಡ್ತಿದ್ದಾರೆ
ಸ್ವಾಮೀಜಿ ಸಿಗಲಿ ಸತ್ಯ ಹೊರಗೆ ಬರುತ್ತೆ
ಉದ್ಯಮಿ ಗೋವಿಂದ ಬಾಬು (Govinda babu poojari) ಪೂಜಾರಿಗೆ 5 ಕೋಟಿ ವಂಚನೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿ ಈಗ ಜೈಲಿನಲ್ಲಿರುವ ಚೈತ್ರಾ ಕುಂದಾಪುರ (Chaithra Kundapura) ಅವರ ಈ ಹೇಳಿಕೆ ಸಂಚಲನವನ್ನೇ ಸೃಷ್ಟಿಸಿದೆ. ಇದೊಂದು ಹೇಳಿಕೆಯ ಮೂಲಕ ಎ1 ಆರೋಪಿ ಚೈತ್ರಾ ಕುಂದಾಪುರ (A1 Chaithra Kundapura) ಇಡೀ ಕೇಸ್ಗೆ ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಜೆಪಿ ಟಿಕೆಸ್ ವಂಚನೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈ ಪೈಕಿ ಚೈತ್ರಾ ಕುಂದಾಪುರ ಅವರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ವಿಚಾರಣೆಗಾಗಿ ಪೊಲೀಸರು ಚೈತ್ರಾ (Chaithra Kundapura) ಅವರನ್ನು ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಕರೆದುಕೊಂಡು ಬಂದಾಗ, ಮಾಧ್ಯಮಗಳ (Media) ಎದುರು ಈ ಹೇಳಿಕೆ ನೀಡಿದ್ದಾರೆ ಚೈತ್ರಾ ಕುಂದಾಪುರ.
ಸ್ವಾಮೀಜಿ ಅರೆಸ್ಟ್ ಆಗ್ಲಿ ಎಲ್ಲಾ ಸತ್ಯ ಹೊರಗಡೆ ಬರುತ್ತದೆ. ದೊಡ್ಡದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಭಯಾಕ ಟ್ವಿಸ್ಟ್ ನೀಡಿದ್ದಾರೆ.
ಅನುಮಾನ ಏಕೆ?
ಇಂದಿರಾ ಕ್ಯಾಂಟಿನ್ (Indira Canteen) ಬಿಲ್ ಗಾಗಿ ಈ ಪ್ಲಾನ್ ಮಾಡಲಾಗಿದೆ ಎಂದು ಚೈತ್ರಾ ಕುಂದಾಪುರ ಆರೋಪಕ್ಕೆ ಕಾರಣ, ಬಿಜೆಪಿ ಟಿಕೆಟ್ ಆಸೆಗಾಗಿ 5 ಕೋಟಿ ರೂ. ಕಳೆದುಕೊಂಡ ಉದ್ಯಮಿ ಗೋವಿಂದ ಬಾಬು ಪೂಜಾರಿ ರಾಜ್ಯದಲ್ಲಿ ಚೆಫ್ ಟಾಕ್ (Cheff talk) ಎಂಬ ಕ್ಯಾಟರಿಂಗ್ ಸಂಸ್ಥೆ ನಡೆಸುತ್ತಿದ್ದಾರೆ. 2017 ರಿಂದ ಗೋವಿಂದ ಬಾಬು ಪೂಜಾರಿ ಇಂದಿರಾ ಕ್ಯಾಂಟಿನ್ ಗುತ್ತಿಗೆ ಪಡೆದು ನಡೆಸುತ್ತಿದ್ದಾರೆ. 98 ಇಂದಿರಾ ಕ್ಯಾಂಟೀನ್ಗಳ ಗುತ್ತಿಗೆ ಪಡೆದಿದ್ದಾರೆ. ಇಂದಿರಾ ಕ್ಯಾಂಟೀನ್ ವಿಷಯದಲ್ಲಿ ಗೋವಿಂದ ಬಾಬುಗೆ ಸರ್ಕಾರದಿಂದ ಅಂದಾಜು 35 ಕೋಟಿ ರೂಪಾಯಿ ಹಣ ಬರಬೇಕಿತ್ತು. ಸರ್ಕಾರದಿಂದ ಸುಮಾರು 35 ಕೋಟಿ ರೂ. ಹಣ ಬಿಡುಗಡೆ ಮಾಡುವುದಕ್ಕಾಗಿ (Hindu activist) ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಲಾಕ್ ಮಾಡಿಸು ಎಂದು ಡೀಲ್ ಕೊಟ್ಟಿದ್ದಾರೆಯೇ ಎಂಬ ಅನುಮಾವೂ ಕೂಡ ಕಂಡುಬರುತ್ತಿದೆ.
ಇಂದಿರಾ ಕ್ಯಾಂಟೀನ್ ಬಾಕಿಗೂ, ಪ್ರಕರಣಕ್ಕೂ ಸಂಬಂಧ ಇಲ್ಲ
ಉದ್ಯಮಿ ಗೋವಿಂದ ಬಾಬು ಅವರ ಪ್ರಕಾರ ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ಇಂದಿರಾ ಕ್ಯಾಂಟೀನ್ ವಿಚಾರ ಇಲ್ಲಿ ಬರಲ್ಲ. ಅವರು ಮೋಸ ಮಾಡಿರುವುದು ರಾಜಕೀಯ ವಿಚಾರವಾಗಿ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸತ್ಯಾಸತ್ಯತೆ ಹೊರಗೆ ಬರಲಿ. ನನ್ನ ಬಳಿಯಿರೋ ಎಲ್ಲಾ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಅವರು ನಮಗೆ ಪ್ಲ್ಯಾನ್ ಮಾಡಿ ಮೋಸ ಮಾಡಿದ್ದಾರೆ. ಅವರು ಯಾವ ಪಕ್ಷದವರೇ ಆಗಿರಲಿ, ಇನ್ನೊಂದು ಬಾರಿ ಇಂತಹ ಮೋಸ ಆಗಬಾರದು. ಇಂತಹವರಿಗೆ ಶಿಕ್ಷೆ ಆಗಲೇ ಬೇಕು ಎಂದಿದ್ದಾರೆ. ಏಕೆಂದರೆ ಇಂದಿರಾ ಕ್ಯಾಂಟೀನ್ ಬಿಸಿನೆಸ್ ನನ್ನ ಒಟ್ಟಾರೆ ಉದ್ಯಮಕ್ಕೆ ಹೋಲಿಸಿದರೆ ಕೇವಲ ಶೇ.10ರಷ್ಟು ಮಾತ್ರ. ಅಲ್ಲದೆ ಅದನ್ನು ಸರ್ಕಾರ ಕೊಡಲೇಬೇಕು, ಕೊಡುತ್ತದೆ. ಅದರಲ್ಲೇನೂ ಸಮಸ್ಯೆ ಇಲ್ಲ ಎಂದಿದ್ದಾರೆ.
ಬಿಬಿಎಂಪಿ (BBMP) ಅಧಿಕಾರಿಗಳು, ಗೃಹ ಸಚಿವ ಪರಮೇಶ್ವರ್ (Home minister Parameshwar) ಕೂಡಾ ಈ ಕಥೆಯನ್ನು ನಿರಾಕರಿಸಿದ್ದು, ಚೈತ್ರಾ ಕುಂದಾಪುರ ಕೇವಲ ಪ್ರಕರಣದ ದಿಕ್ಕು ತಪ್ಪಿಸಲು ಈ ಹೇಳಿಕೆ ಕೊಟ್ಟಿದ್ದಾರೆ ಎಂದಿದ್ದಾರೆ.



