ರೋಹಿಣಿ ಸಿಂಧೂರಿ ಅವರೀಗ ಕೋರ್ಟ್ ಮೆಟ್ಟಿಲೇರಿದ್ದಾರೆ. 1 ಕೋಟಿಯ ಮಾನನಷ್ಟ ಮೊಕದ್ದಮೆಯ ಎಚ್ಚರಿಕೆ ಕೊಟ್ಟಿದ್ದಾರೆ. ರೂಪಾ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಎಲ್ಲ ಮೆಸೇಜ್‍ಗಳನ್ನೂ ಡಿಲೀಟ್ ಮಾಡಬೇಕು. ಡಿಲೀಟ್ ಮಾಡದೇ ಇದ್ದರೆ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಎದುರಿಸಬೇಕು. ಇದು ರೋಹಿಣಿ ಸಿಂಧೂರಿ ಕೋರ್ಟಿನಲ್ಲಿ ಹೂಡಿರುವ ದೂರು.
ರೋಹಿಣಿಯವರ ಪತಿ ಸುಧೀರ್ ರೆಡ್ಡಿ ಬಾಗಲಕುಂಟೆ ಠಾಣೆಯಲ್ಲಿ ದೂರು ಕೊಟ್ಟಿದ್ದು, ತಮ್ಮ ಪತ್ನಿಯ ಫೋನ್ ಹ್ಯಾಕ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅವರದ್ದು ಐಫೋನ್, ಹ್ಯಾಕ್ ಮಾಡೋಕೆ ಸಾಧ್ಯವಿಲ್ಲ ಎನ್ನವುದು ಕೆಲವರ ವಾದ. ಹ್ಯಾಕ್ ಮಾಡುವ ಮನಸ್ಸು ಮಾಡಿದರೆ, ಟೆಕ್ನಾಲಜಿ ಗೊತ್ತಿದ್ದರೆ ಯಾವುದೂ ಅಸಾಧ್ಯವಲ್ಲ. ಇಷ್ಟಕ್ಕೂ ದೂರು ನೀಡಿರುವ ಸುಧೀರ್ ರೆಡ್ಡಿ ಕೂಡಾ ಸಾಮಾನ್ಯರಲ್ಲ. ಸಾಫ್ಟ್‍ವೇರ್ ಎಂಜಿನಿಯರ್. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದವರು ಮದುವೆಯ ನಂತರ ಇಂಡಿಯಾಗೇ ಶಿಫ್ಟ್ ಆಗಿದ್ದಾರೆ. ಅವರೇ ಹೇಳಿರುವ ಪ್ರಕಾರ ರೋಹಿಣಿಯವರ ಸಿಮ್ ಹ್ಯಾಕ್ ಆಗಿದೆ. ಅವರ ಲಾಜಿಕ್ ಕೂಡಾ ಚೆನ್ನಾಗಿದೆ.
+91 ಮತ್ತು ಹ್ಯಾಕಿಂಗ್ ಸ್ಟೋರಿ
ರೋಹಿಣಿಯವರ ಫೋನ್‍ನಲ್ಲಿ ಮೆಸೇಜಸ್ ಡಿಲೀಟೆಡ್ ಎಂದು ರೂಪಾ ಪೋಸ್ಟ್ ಹಾಕಿದ್ದರಲ್ಲ. ಅದರಲ್ಲಿ ಕೆಲವು ಮೆಸೇಜ್ ಡಿಲೀಟ್ ಆಗಿದ್ದವು. ಒಂದು ಮೆಸೇಜ್ ಮಾತ್ರ ಉಳಿದಿತ್ತು. ಮ್ಯಾಡ್ ಮ್ಯಾಡ್ ಬ್ಯೂಟಿ.. ಎಂದಿತ್ತು. ಆ ಪೋಸ್ಟಿನಲ್ಲಿ ರೂಪಾ ಅವರು ನಗ್ನಚಿತ್ರಗಳಿವೆ ಎಂದೆಲ್ಲ ಆರೋಪ ಮಾಡಿದ್ದರು. ಆ ಪೋಸ್ಟಿನ ಮೇಲೆ ರೋಹಿಣಿಯವರ ಫೋನ್ ನಂಬರ್ ಕೂಡಾ ಇತ್ತು. ಆದರೆ ಅಲ್ಲಿ +91 ಇರಲಿಲ್ಲ.


ಮೆಸೇಜ್‍ನಲ್ಲಿ +91 ಇಲ್ಲ ಎಂಬುದಷ್ಟೇ ಅಲ್ಲ, ಯು ಎಂದೂ ಇದೆ. ಯು ಎಂದರೆ ರೂಪಾ ಹಾಕಿರುವ ಪೋಸ್ಟಿನ ಪ್ರಕಾರ ಅದು ರೋಹಿಣಿಯವರ ಮೆಸೇಜ್. ರೋಹಿಣಿಯವರಂತೂ ತಮ್ಮ ಮೊಬೈಲ್‍ನ್ನು ರೂಪಾ ಕೈಗೆ ಕೊಟ್ಟು ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ ಎಂದಿರುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಕ್ಲೋನ್ ಮಾಡಿ ಹ್ಯಾಕ್ ಮಾಡಿದ್ದಾರಾ? ಇದನ್ನೇ ಸುಧೀರ್ ರೆಡ್ಡಿ ಹೇಳುತ್ತಿರುವುದು. ಸಿಮ್ ಕಾರ್ಡ್ ಕ್ಲೋನ್ ಮಾಡಿ ಹ್ಯಾಕ್ ಮಾಡಿದರೆ ನಂಬರ್‍ಗಳ ಡೇಟಾ/ಹೆಸರು ಸೇವ್ ಅಗಿರುವುದಿಲ್ಲ ಎನ್ನುವ ವಾದವಿದೆ.(ಎಕ್ಸ್‍ಪರ್ಟ್‍ಗಳು ಅದನ್ನೂ ಮಾಡುತ್ತಾರೆ) ಸುಧೀರ್ ರೆಡ್ಡಿ ಹೇಳುತ್ತಿರುವ ವಾದ ಇದೆ.
ರೋಹಿಣಿ ಸಿಂಧೂರಿಯವರ ಕ್ಷಮೆ ಕೇಳಬೇಕಾಗುತ್ತಾ?





