ಇಂತಾದ್ದೊಂದು ಪ್ರಶ್ನೆ ಅಭಿಮಾನಿ ದೇವರುಗಳಲ್ಲಿದೆ. ರಾಜ್ (Dr.Rajkumar) ಮತ್ತು ಪಾರ್ವತಮ್ಮ (Dr. Parvathamma Rajkumar) ನಿಧನದ ಮಾತು ಬೇರೆ. ವಯಸ್ಸಾಗಿತ್ತು ಎಂದು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಅದಾದ ಮೇಲೆ ನಡೆಯುತ್ತಿರುವ ಅವಘಡಗಳಿವೆಯಲ್ಲ, ಅವುಗಳಿಗೆ ಕೊನೆಯೇ ಇಲ್ಲ ಎನ್ನಬೇಕು.
ರಾಘವೇಂದ್ರ ರಾಜ್`ಕುಮಾರ್`ಗೆ (Raghavendra Rajkumar) ಸ್ಟ್ರೋಕ್ ಆಗಿದ್ದು, ಶಿವಣ್ಣ (Dr.Shiva Rajkumar) ಮಗಳ ಅನಾರೋಗ್ಯ, ಸ್ವತಃ ಶಿವಣ್ಣ (Dr.Shiva Rajkumar) ಒಮ್ಮೆ ಅಸ್ವಸ್ಥರಾಗಿದ್ದು, ಭಜರಂಗಿ 2 ಶೂಟಿಂಗ್ ಸೆಟ್ಟಿನಲ್ಲಿ ಪದೇ ಪದೇ ನಡೆದ ಬೆಂಕಿ ಘಟನೆಗಳು, ಪುನೀತ್ ರಾಜ್`ಕುಮಾರ್ (Dr.Puneeth Rajkumar) ಅಕಾಲಿಕ ಸಾವು.. ಇವೆಲ್ಲವೂ ನೇರವಾಗಿ ರಾಜ್ ಕುಟುಂಬದಲ್ಲಿಯೇ ನಡೆದ ದುರಂತಗಳು. ಇನ್ನು ರಾಜ್ ಕುಟುಂಬಕ್ಕೆ ಹತ್ತಿರವಾದವರ, ಸಂಬಂಧಿಗಳ ವಿಷಯಕ್ಕೆ ಬಂದರೆ ಶ್ರೀಮುರಳಿ ಕಾಲಿಗೆ ಆಪರೇಷನ್ ಆಗಿದ್ದು, ವಿಜಯ್ ರಾಘವೇಂದ್ರ ಪತ್ನಿ ಹಠಾತ್ ಸಾವು.. ಇನ್ನೂ ಇಂತಹ ಹಲವು ಘಟನೆಗಳಿವೆ. ಇವೆಲ್ಲ ಏಕೆ ರಾಜ್ ಕುಟುಂಬದವರಿಗೇ ಆಗುತ್ತೆ..? ಇದು ಅಭಿಮಾನಿಗಳನ್ನೂ ಕಾಡುತ್ತಿರೋ ಪ್ರಶ್ನೆ.
ಈ ಕುರಿತು ಅಷ್ಟಮಂಗಲ ಪ್ರಶ್ನೆ (Ashtamangala) ಹಾಕಲು ಸಿದ್ಧವಾಗಿದ್ದಾರೆ ಈಡಿಗ ಸಮುದಾಯದ ಸ್ವಾಮೀಜಿ ಪ್ರಣವಾನಂದ ಶ್ರೀಗಳು. ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಳ (Ashtamangala) ಪ್ರಶ್ನೆ ಹಾಕಿ ಕೇಳಬೇಕು. ನಾನು ಈ ಬಗ್ಗೆ ಶಿವರಾಜ್ ಕುಮಾರ್ ಅವರ ಜೊತೆಗೆ ಮಾತಾಡಿದ್ದೇನೆ. ಮನೆಯಲ್ಲಿ ಸ್ಪಂದನಾ ಸಾವಿನ ನಂತರ 11 ದಿನಗಳ ಕಾಲ ವಿವಿಧ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಈ ಎಲ್ಲ ಕ್ರಿಯೆಗಳು ಪೂರ್ಣಗೊಂಡ ನಂತರ 41 ದಿನಗಳು ಪೂರೈಸಿದಾಗ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ (Ashtamangala) ಕೇಳುತ್ತೇವೆ. ರಾಜ್ ಕುಟುಂಬಕ್ಕೆ ಯಾಕೆ ಈ ರೀತಿಯಲ್ಲಿ ಅಕಾಲ ಮೃತ್ಯು ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳಲು ಮುಂದಾಗುತ್ತೇವೆ. ಕೇರಳ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಳ ಪ್ರಶ್ನೆ ಕೇಳುವ ಮುಂದಾಳತ್ವವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.
ಅಪ್ಪು ಮತ್ತು ಸ್ಪಂದನ ಸಣ್ಣ ವಯಸ್ಸಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿಂದೆ ರಾಜ್ ಕುಮಾರ್ ಕುಟುಂಬದಲ್ಲಿ ಪುನೀತ್ ರಾಜ್ಕುಮಾರ್ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೆ, ಈಗ ಮತ್ತದೇ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಸಣ್ಣ ವಯಸ್ಸಿನಲ್ಲಿ ಸ್ಪಂದನಾ ಮೃತಪಟ್ಟಿದ್ದಾರೆ. ಇಂತಹ ಅಕಾಲ ಮೃತ್ಯು ಸಂಭವಿಸುತ್ತಿರುವುದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ (Ashtamangala) ಎನ್ನುವುದು ಪ್ರಣವಾನಂದ ಶ್ರೀಗಳ ಮಾತು. ಇದೆಲ್ಲ ಪ್ರಶ್ನೆ ಉದ್ಭವವಾಗಿರುವುದು ಸ್ಪಂದನಾ ಸಾವಿನಿಂದ ಎನ್ನುವುದು ವಿಶೇಷ. ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದವರೇ ಇನ್ನೂ ದುಃಖದಿಂದ ಹೊರಬಂದಿಲ್ಲ.
ಇಡೀ ಕುಟುಂಬಕ್ಕೆ ಹಿರಿಯನ ಸ್ಥಾನದಲ್ಲಿರುವ ಶಿವಣ್ಣ, ಇಂತಹ ಸಂದರ್ಭದಲ್ಲಿ ಧೈರ್ಯ ಹೇಳುವ ಜವಾಬ್ದಾರಿ ಹೊರಬೇಕು. ಆದರೆ ದುರಂತಗಳು ನಡೆದ ಸಂದರ್ಭದಲ್ಲಿ ಅವರಿಗಿಂತ ಕಿರಿಯರೇ ತಾವೇ ಧೈರ್ಯ ತಂದುಕೊಂಡು ಶಿವಣ್ಣ ಅವರಿಗೆ ಸಾಂತ್ವನ ಹೇಳಬೇಕು. ಬೇರೆ ವೇಳೆ ತಾನು ಗಟ್ಟಿಯಾಗಿದ್ದೇನೆ ಎನ್ನುವ ಶಿವಣ್ಣ, ಇಂತಹ ಸಂದರ್ಭದಲ್ಲಿ ಅಕ್ಷರಶಃ ಮಗುವಾಗಿ ಬಿಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಅಷ್ಟಮಂಗಳ ಪ್ರಶ್ನೆ ಉತ್ತರ ಕೊಡುತ್ತದೋ.. ಇಲ್ಲವೋ.. ಕಾದು ನೋಡಬೇಕು.



