ಎಸ್ ನಾರಾಯಣ್. ಕಲಾ ಸಾಮ್ರಾಟ್ ಎಂದೇ ಬಿರುದು ಪಡೆದ ನಿರ್ದೇಶಕ. ತಮ್ಮ ಸಿನಿಮಾಗಳಲ್ಲಿ ಹೆಣ್ಣುಗಳ ಬಗ್ಗೆ ಗೌರವ ಕೊಡುವ, ವರದಕ್ಷಿಣೆ ವಿರುದ್ಧ ಸಂದೇಶ ಸಾರಿರುವ ನಟರೂ ಹೌದು. ಇಂತಹ ನಿರ್ದೇಶಕರೀಗ ತಮ್ಮ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಎದುರಿಸ್ತಾ ಇದ್ದಾರೆ. ಡಾ.ರಾಜ್, ವಿಷ್ಣು, ರಾಘವೇಂದ್ರ ರಾಜ್ ಕುಮಾರ್, ಶಿವಣ್ಣ, ಪುನೀತ್, ಸುದೀಪ್, ದರ್ಶನ್, ಗಣೇಶ್, ದುನಿಯಾ ವಿಜಯ್, ವಿನೋದ್ ರಾಜ್, ಜಗ್ಗೇಶ್, ವಿಜಯ್ ರಾಘವೇಂದ್ರ, ಶ್ರೀಮುರಳಿ, ರಾಮ್ ಕುಮಾರ್, ಚರಣ್ ರಾಜ್, ರಘುವೀರ್, ರವಿಚಂದ್ರನ್, ಶಶಿಕುಮಾರ್, ಶ್ರೀನಗರ ಕಿಟ್ಟಿ, ಆದಿತ್ಯ.. ಹೀಗೆ ಕನ್ನಡ ಚಿತ್ರರಂಗದಲ್ಲಿರುವ ಎಲ್ಲ ಸ್ಟಾರ್ ನಟರು, ಅಲ್ಲದವರು ಎಲ್ಲರಿಗೂ ಸಿನಿಮಾ ಮಾಡಿರುವ ನಿರ್ದೇಶಕ. ಅಂತಹ ನಿರ್ದೇಶಕರ ಮೇಲೆ ವರದಕ್ಷಿಣೆ ಕಿರುಕುಳ ಹಿಂಸೆಯ ದೂರು ಕೊಟ್ಟಿರುವುದು ನಾರಾಯಣ್ ಅವರ ಪುತ್ರ ಪವನ್ ಪತ್ನಿ ಪವಿತ್ರಾ.
ಆಕೆಯ ಆರೋಪಗಳಿಗೆ ಎಸ್ ನಾರಾಯಣ್ ಕೊಟ್ಟಿರುವ ಉತ್ತರಗಳಲ್ಲೇ.. ಅವರ ಮನೆ ಹೇಗೆ ಬದಲಾಯ್ತು ಎಂಬ ಉತ್ತರಗಳೂ ಇವೆ. ಎಸ್ ನಾರಾಯಣ್ ಪ್ರತಿಕ್ರಿಯೆಗಳನ್ನೇ ನೋಡಿ.
ನನ್ನ ಮನೆ ಯಾವತ್ತೂ ಚಂದನವನ. ನಗು ನಗುತಾ ಇದ್ದೀವಿ. ಒಬ್ಬರನ್ನ ಒಬ್ಬರು ತಮಾಷೆ ಮಾಡಿಕೊಂಡು ಇದ್ವಿ. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುತ್ತಿದ್ದೇವು. ಈ ಮಹಾತಾಯಿ ಮನೆಗೆ ಬಂದ ಮೇಲೆ ಇದೆಲ್ಲಾ ಹಾಳು ಆಯಿತು. ಈಯಮ್ಮ ಬಂದ ಮೇಲೆ ಊಟಕ್ಕೆ ತಟ್ಟೆ ತೆಗೆದುಕೊಂಡು ಗಂಡನ ಕರೆದುಕೊಂಡು ರೂಮ್ಗೆ ಹೋಗುತ್ತಿದ್ದರು.
ಏನಾದರೂ ಸಲಹೆ ಹೇಳಿದರೆ, ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುತ್ತಿದ್ದರು. ಇದರಿಂದ ನಾವು ತುಂಬಾ ಭಯ ಬಿದ್ದಿದ್ದೇವು. ಅವರಿಗೆ ಮೊದಲಿನಿಂದ ಅಂತಹದ್ದು ಇತ್ತಂತೆ. ಸಣ್ಣ ಸಣ್ಣದಾದ ವಿಷಯಕ್ಕೂ ಡೆತ್ನೋಟ್ ಬರೆದಿಟ್ಟಿದ್ದಾರೆ. ಇಂತಹ ಸಣ್ಣ ಸಣ್ಣದಕ್ಕೆ ಜಗಳ ಆಗಿದ್ದಕ್ಕೆ ಮನೆಯಲ್ಲಿ ಗಲಾಟೆ ಆಗ್ತಾ ಇತ್ತು.
ನಾನು ಹೇಳಿದ್ದನ್ನ ಕೇಳಿಸಿಕೊಳ್ಳುವುದಕ್ಕೆ ಯಾರಿಗೂ ಇಷ್ಟ ಇಲ್ಲ. ಎಲ್ಲರೂ ಹೈ ಟೆಂಪರ್ ಅಲ್ಲಿ ಇರುತ್ತಾರೆ. ಯಾರು ಕೇಳಿಸಿಕೊಳ್ಳುವುದಿಲ್ಲ. ನಾವು ಬದುಕಿ ಬಾಳಿದ್ದನ್ನ ಅನುಭವ ಹೇಳಿದರೆ ಕೇಳಲ್ಲ. ತಮ್ಮ ಇಷ್ಟದಂತೆ ಇರುತ್ತಾರೆ. ನನ್ನ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಶ್ನೆ ಮಾಡಲು ಯಾರಿಗೂ ಹಕ್ಕಿಲ್ಲ. ನನ್ನ ಮನೆಯಲ್ಲಿ ನಿತ್ಯ ಅನ್ನ ದಾಸೋಹ ಇದ್ದಂತೆ ಇರುತ್ತದೆ. ನನ್ನವರು ಎಂದು ಯಾರೇ ಬಂದರು ಮನೆಯಲ್ಲಿ ಊಟ ಮಾಡಿ ಹೋಗ್ತಾರೆ. ಇವರು ಮದುವೆಗೂ ಮೊದಲು ಬ್ಯಾಂಕ್ ಬ್ಯಾಲೆನ್ಸ್ ನೋಡಿ ನನ್ನ ಮನೆಗೆ ಬಂದ್ರಾ?
ಮನೆಯಿಂದ ಆಚೆ ಹೋದ ಮೇಲೆ ಗಂಡ ಕೆಲಸಕ್ಕೆ ಹೋಗುತ್ತಿಲ್ಲ ಎಂದು ಹೇಳಿ ಮನೆಯನ್ನು ತಾನೇ ನಡೆಸಿಕೊಂಡು ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಮೊದಲು ಇವರಿಬ್ಬರು ಲವ್ ಮಾಡಿ ಮದುವೆ ಆಗಿರೋದು. ಇವರು ಲವ್ ಮಾಡುವಾಗ ಇವೆಲ್ಲ ಪ್ರಶ್ನೆ ಮಾಡಿಕೊಳ್ಳಬೇಕು. ಏನು ಕೆಲಸ ಮಾಡುತ್ತಾನೆ, ತಿಂಗಳಿಗೆ ಎಷ್ಟು ಸಂಪಾದನೆ ಮಾಡುತ್ತಾನೆ ಎನ್ನುವುದು ಕ್ಲಾರಿಟಿ ಪಡೆಯಬೇಕು.
ನಾನು ಯಾಕೆ ಹಣ ಕೇಳಲಿ. ಸೊಸೆಯ ತಂದೆ ಅವರ ನಂಬರ್ ಕೊಡುತ್ತೇನೆ, ಅವರ ಬಳಿಯೇ ಮಾತನಾಡಿ. ಮದುವೆ ನಾನು ಮಾಡಿದ್ದೇನಾ ಅವರು ಮಾಡಿದ್ದಾರಾ ಎನ್ನುವುದು ಗೊತ್ತಾಗುತ್ತದೆ. ಮಗಳು ಚೆನ್ನಾಗಿ ಇರಲಿ ಎಂದು ತಂದೆ ಬಯಸುವುದು ಸಾಮಾನ್ಯ. ಅವರ ಮದುವೆ ಕಾರ್ಡ್ ನೋಡಿ ಏನೆಲ್ಲಾ ಬರಿಸಿದ್ದೇನೆ ಎಂದು ಗೊತ್ತಾಗುತ್ತದೆ. ಅವರು ಮಾಡಿದ ಎಲ್ಲ ಅವಮಾನಗಳನ್ನ ಸಹಿಸಿಕೊಂಡು ಇದ್ದೀವಿ. ನಮ್ಮನ್ನು ನೋಯಿಸುವುದು ಯಾವ ನ್ಯಾಯ?ಅಷ್ಟು ಅದ್ಧೂರಿಯಾಗಿ ಮದುವೆ ಮಾಡಿದ್ದೇನೆ.
ಸಮಸ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಕೊರ್ಟ್ನಲ್ಲಿವೆ. ಹೆಚ್ಚು ಹೇಳುವುದಕ್ಕೆ ಆಗಲ್ಲ. 14 ತಿಂಗಳಿನಿಂದ ನಮ್ಮ ಜೊತೆ ಸೊಸೆ ಇಲ್ಲ. ಮಗು ಅವರ ಬಳಿ ಇದ್ದಿದ್ದರಿಂದ ಅವರ ಬಳಿ ತುಂಬಾ ಕೆಳಗಿಳಿದು ಹೋಗಿದ್ದೆವು. ನಮ್ಮ ಜಗಳದಲ್ಲಿ ಮಗು ಏನು ತಪ್ಪು ಮಾಡಿತ್ತು. ತಾಯಿ ನೂರು ಸಮಸ್ಯೆ ಬಂದರೂ ಮಗುವಿಗಾಗಿ ತ್ಯಾಗ ಮಾಡಬೇಕು. ಆದರೆ ಹಾಗೇ ಮಾಡಲಿಲ್ಲ. ಮಗುವಿಗಾಗಿ ತಂದೆ ಅವರ ಮನೆ ಬಳಿ ಹೋಗಿದ್ದಾಗ ಹೊರಗೆ ನಿಲ್ಲಿಸಿದಾಗ ಅವಾಚ್ಯ ಶಬ್ಧಗಳಿಂದ ಬೈದಿದ್ದಾರೆ. ನಿಂದಿಸಿ, ಅವಮಾನ ಮಾಡಿ ವಾಪಸ್ ಕಳಿಸಿದ್ದಾರೆ.
ಆ ಹೆಣ್ಣುಮಗುವಿನ ಸಮಸ್ಯೆ ಹೊರಗೆ ಬರಬಾರದು. ಯಾವುದೇ ಹೆಣ್ಣು ಮಗುವನ್ನ ನೋಯಿಸಲು ನಾನು ಇಷ್ಟ ಪಡಲ್ಲ. ಕಾನುನು ಹೋರಾಟಕ್ಕೆ ಅವರೇ ನಮ್ಮನ್ನು ಎಳೆದು ಬಿಟ್ಟಿದ್ದಾರೆ. ಕೋರ್ಟಿನಲ್ಲೇ ಉತ್ತರ ಕೊಡುತ್ತೇನೆ.
ಇದು ಎಸ್ ನಾರಾಯಣ್ ಅವರ ವಾದ.



