ರವಿಚಂದ್ರನ್ (V Ravichandran), ಮೇಘನಾ ಗಾಂವ್ಕರ್ (Meghana Gaovkar), ದಿಗಂತ್ (Diganth), ಧನ್ಯಾ ರಾಮ್`ಕುಮಾರ್ ಒಟ್ಟಿಗೇ ನಟಿಸುತ್ತಿರುವ ಚಿತ್ರ ದ ಜಡ್ಜ್`ಮೆಂಟ್. ವಿ.ರವಿಚಂದ್ರನ್ ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವುಗಳಲ್ಲಿ ಒಂದು ದ ಜಡ್ಜ್`ಮೆಂಟ್ (The Judgement) . ಜಿ9 ಕಮ್ಯೂನಿಕೇಷನ್ ಮೀಡಿಯಾ & ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ‘ಕ್ರೇಜಿಸ್ಟಾರ್’ ರವಿಚಂದ್ರನ್ (crazy star) ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ದಿ ಜಡ್ಜ್ಮೆಂಟ್’ ಚಿತ್ರದ ಮಧ್ಯಾಂತರ, ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಇತ್ತೀಚಿಗೆ ಮೈಸೂರು ರಸ್ತೆಯಲ್ಲಿ ಇರುವ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ನಡೆಯಿತು.
ವಿ ರವಿಚಂದ್ರನ್, ದಿಗಂತ್, ಧನ್ಯಾ ರಾಮ್ ಕುಮಾರ್ (Dhanya Ramkumar), ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ರಂಗಾಯಣ ರಘು, ಟಿ ಎಸ್ ನಾಗಾಭರಣ, ಬಾಲಾಜಿ ಮನೋಹರ್, ಸುಜಯ್ ಶಾಸ್ತ್ರಿ, ಜಗದೀಶ್ ಮಲ್ನಾಡ್, ರವಿಶಂಕರ್ ಗೌಡ, ಅರವಿಂದ್ ಕುಪ್ಳೀಕರ್ ಮೊದಲಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ..
ದ ಜಡ್ಜ್‍ಮೆಂಟ್ ಸ್ಟೋರಿ ಲೀಗಲ್ ಥ್ರಿಲ್ಲರ್ (legal thriller) ಕಥೆ ಒಳಗೊಂಡಿದ್ದು, ಇದೇ ಮೊದಲ ಬಾರಿಗೆ ರವಿಚಂದ್ರನ್ ಮತ್ತು ದಿಗಂತ್ ಒಟ್ಟಿಗೇ ನಟಿಸುತ್ತಿದ್ದಾರೆ. ರಾಜ್ಯಾಂಗ, ನ್ಯಾಯಾಂಗದ ಸುತ್ತ ನಡೆಯುವ ಘಟನೆಗಳನ್ನು ಬಳಸಿಕೊಂಡು ಕಾಲ್ಪನಿಕ ಕಥೆ ಹೆಣೆಯಲಾಗಿದೆ. ಈ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಎಂದು ನಿರ್ದೇಶಕ ಗುರುರಾಜ ಕುಲಕರ್ಣಿ ತಿಳಿಸಿದ್ದಾರೆ.



