ಒಂದು ವರ್ಷದ ಬಳಿಕ ಆಹಾರ ಇಲಾಖೆ ಹೊಸ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಒಪ್ಪಿಗೆ ನೀಡಿದೆ. ಹೀಗಾಗಿ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿಸಲ್ಲಿಸಲು ಜನ ಮುಗಿಬೀಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇದು ಸಾದ್ಯವಾಗಿದೆಯೇ ಎಂದು ನೋಡಿದರೆ ಇಲ್ಲ ಎಂದೇ ಹೇಳಬೇಕು.
ಸದ್ಯ ಆಹಾರ ನಾಗಾರೀಕ ವೆಬ್ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆದರೆ ಸರ್ವರ್ ಸಮಸ್ಯೆ.
ಬಿಪಿಎಲ್, ಎಪಿಎಲ್, ತುರ್ತು ಆರೋಗ್ಯ ಸಂಬಂಧ ಬಿಪಿಎಲ್ ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಿದೆ. ಇದರ ಜೊತೆಗೆ ರೇಷನ್ ಕಾರ್ಡ್ಗಳ ತಿದ್ದುಪಡಿಗೂ ಅವಕಾಶ ನೀಡಿದ್ದು, ಬೆಂಗಳೂರು ಒನ್ ಸೆಂಟರ್ಗಳಿಗೆ ಫಲಾನುಭವಿಗಳು ಆಗಮಿಸುತ್ತಿದ್ದಾರೆ. ಆದರೆ ಸರ್ವರ್ ಸಮಸ್ಯೆ.
ಒಂದು ವರ್ಷದ ಬಳಿಕ ರೆಷಾನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಅನುಮತಿ ಕೊಟ್ಟಿರುವ ಕಾರಣ ಫಲಾನುಭವಿಗಳು ಬೆಂಗಳೂರು ಒನ್ ಸೆಂಟರ್ಗಳಿಗೆ ಧಾವಿಸುತ್ತಿದ್ದಾರೆ. ಆದರೆ ವೆಬ್ಸೈಟ್ ಒಪನ್ ಆಗುತ್ತಿದೆ. ಅದರೆ ಯಾವುದೇ ಕಮಾಂಡ್ ತೆಗೆದುಕೊಳ್ಳುತ್ತಿಲ್ಲ. ಅಂದ್ರೆ ಅರ್ಜಿ ಮಾತ್ರ ರವಾನೆಯಾಗುತ್ತಿಲ್ಲ. ಹೀಗಾಗಿ ಆಹಾರ ನಾಗಾರೀಕ ಸರಬರಾಜು ಇಲಾಖೆಯ ವಿರುದ್ದ ಜನ ಆಕ್ರೋಶಗೊಳ್ಳುತ್ತಿದ್ದಾರೆ.
ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟಿದ್ದೇವೆ ಎಂದು ಹೇಳಿ ಜನರನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಏನಯ ಮಾಡುತ್ತಿದ್ದಾರೆ. ಪರ್ಮಿಷನ್ ಕೊಟ್ಟಿದ್ದಾರೆ ಅಂತ ಎಸಿ ರೋಮ್‌ನಲ್ಲಿ ಸುಮ್ಮನೆ ಕುಳಿತುಕೊಂಡರೆ ಇಲ್ಲಿನ ಸಮಸ್ಯಗಳನ್ನು ಬಗೆಹರಿಸುವುದು ಯಾರು? ತಿದ್ದಪಡಿಗೆ ಒಂದು ವಾರ ಅಲೆದಿದ್ದೇವೆ. ಇದೀಗ ಅರ್ಜಿ ಸಲ್ಲಿಸಲು ಅಲೆದಾಡುವ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಮ್ಮ ಸಮಸ್ಯೆಗಳನ್ನು ಯಾರು ಆಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಸಚಿವರನ್ನು ಪ್ರಶ್ನೆ ಮಾಡಿದರೆ ಸಚಿವರ ಪ್ರಕಾರ ಎಲ್ಲವೂ ಸರಿ ಇದೆ. ಎಲ್ಲೋ ಒಂದೆರಡು ಕಡೆ ಪ್ರಾಬ್ಲಂ ಆಗಿರಬಹುದಷ್ಟೇ, ಎಲ್ಲ ಎಲ್ಲ 100% ಸರಿ ಇದೆ ಎನ್ನುತ್ತಾರೆ.
ಮುಖ್ಯಮಂತ್ರಿಗಳನ್ನು ಕೇಳೋಣ ಎಂದರೆ ಸಿದ್ದರಾಮಯ್ಯ ಕೊಡುವ ಉತ್ತರ ನೀನೇನ್ ರೇಷನ್ ಕಾರ್ಡ್ ಆಫೀಸರಾ ಎಂದು ಕೇಳಿದರೆ ಏನು ಹೇಳೋದು..?
ಒಟ್ಟಿನಲ್ಲಿ ಸಚಿವರು ಉತ್ತರ ಕೊಡಲ್ಲ. ಅಧಿಕಾರಿಗಳು ಕೆಲಸ ಮಾಡಲ್ಲ. ಆನ್ ಲೈನ್ʻನಲ್ಲಿಯೇ ಮಾಡ್ಕೊಳ್ಳೋಣ ಅಂದ್ರೆ ಸರ್ವರ್ ಪ್ರಾಬ್ಲಮ್ಮು. ಅವಧಿ ಏನೂ ಹೆಚ್ಚಿಲ್ಲ. ಕೆಲವೇ ದಿನಗಳಷ್ಟೇ.
ಸರ್ಕಾರ ಕೊಟ್ಟಿದ್ದೇವೆ ಎಂದು ಹೇಳಿದಂತೆಯೂ ಆಯ್ತು, ಕೊಡದೇ ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆಯೂ ಆಯ್ತು ಎನ್ನುವುದು ಜನಸಾಮಾನ್ಯರ ಅಳಲು.



