ಅಪ್ಪಟ ಸಿನಿಮಾದಂತೆಯೇ ನಡೆದು ಹೋಗಿದೆ. ಸಿನಿಮಾಗಳಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ ಯಾರೋ ಒಬ್ಬರು ಬಂದು ನಿಲ್ಸಿ ಎಂದು ಕೂಗಿ.. ಮದುವೆ ನಿಲ್ಲಿಸುವಂತೆ.. ಅಥವಾ ಹೀರೋಯಿನ್ ತಾಳಿ ಕಟ್ಟುವ ವೇಳೆ ಕೈ ಅಡ್ಡ ಇಟ್ಟು ಸ್ಟಾಪ್ ಎನ್ನುವಂತೆ.. ಆಗಿ ಹೋಗಿದೆ. RCB ಕ್ಯಾಪ್ಟನ್, ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಸ್ಮೃತಿ ಮಂಧಾನ ಮದುವೆಗೆ ಕೊನೆಯ ಕ್ಷಣದಲ್ಲಿ.. ಇನ್ನೇನು ಸಪ್ತಪದಿ ತುಳಿಯುವ ಹಂತದಲ್ಲಿ ಬ್ರೇಕ್ ಬಿದ್ದಿದೆ. ಇಲ್ಲಿ ನೆನಪಾಗುತ್ತಿರುವು ಪುನೀತ್ ರಾಜ್ ಕುಮಾರ್ ಅವರ ಆಕಾಶ್ ಸಿನಿಮಾ. ಇಷ್ಟಕ್ಕೂ ಬ್ರೇಕ್ ಬಿದ್ದಿದ್ದು ಏಕೆ ಎಂದರೆ.. ಸದ್ಯಕ್ಕೆ ಹೊರ ಬರ್ತಿರೋದು ಅವನು ಮಾಡಿದ ಮೋಸದ ಕಥೆ.
ಮೇರಿ ಡಿಕೋಸ್ಟಾ ಎಂಬ ಮಹಿಳೆ ಜೊತೆ ಪಾಲಾಶ್ ಮುಚ್ಚಲ್ ಫ್ಲರ್ಟ್ ಮಾಡಿರುವ ಚಾಟ್ ಮೆಸೇಜ್ ಲೀಕ್ ಆಗಿವೆ. ಈ ಮೇರಿ ಡಿಕೋಸ್ಟಾ ಯಾರು ಎಂದರೆ ಸ್ಪಾ ನಡೆಸುವ ಹುಡುಗಿ. ಆಕೆಯ ಜೊತೆ ಮದುವೆ ಫಿಕ್ಸ್ ಆದ ನಂತರವೂ ಮಾತನಾಡಿದ್ದಾನಂತೆ ಮುಚ್ಚಲ್. ಮುಚ್ಚಲ್, ಮ್ಯೂಸಿಕ್ ಡೈರೆಕ್ಟರ್. ದೊಡ್ಡ ಸ್ಟಾರ್ ಏನಲ್ಲ. ಇನ್ನೂ ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆ. ದೊಡ್ಡ ಹಿಟ್ ಕೊಟ್ಟೂ ಇಲ್ಲ. ಆದರೆ ಸಿನಿಮಾ ಬರ್ಡ್. ಚಾಟ್‌ಗಳಲ್ಲಿ ಸ್ಮೃತಿ ಮಂಧಾನ ಅಲ್ಲಿ.. ನೀನೇನು ಇಲ್ಲಿ ಎನ್ನುತ್ತಾ ಲಾಂಗ್ ಡಿಸ್ಟೆನ್ಸ್ ಬಗ್ಗೆ ಮಾತನಾಡ್ತಾರೆ ಮೇರಿ ಡಿಕೋಸ್ಟಾ. ಅದನ್ನು ಬಿಟ್ಟು ಮೇರಿ ಡಿಕೋಸ್ಟಾ ಬ್ಯೂಟಿಯ ಬಗ್ಗೆ ಹೊಗಳಿ ಅಟ್ಟಕ್ಕೇರಿಸುತ್ತಾನೆ ಮುಚ್ಚಲ್. ಇದೆಲ್ಲವೂ ಲೀಕ್ ಆಗಿ ಮುಚ್ಚಲ್ ಜೊತೆ ಸ್ಮೃತಿ ಮಂಧಾನ ಬ್ರೇಕಪ್ ಮಾಡಿಕೊಂಡಿರಬಹುದು ಎಂಬುದು ಕೂಡಾ ಒಂದು ಸಾಧ್ಯತೆ ಅಷ್ಟೆ.
ಮದುವೆ ನಡೆಯಬೇಕಿದ್ದ ಕೆಲವೇ ಗಂಟೆಗಳ ಮುನ್ನ ಮದುವೆ ಬ್ರೇಕ್ ಆಗಿರುವ ಕಾರಣ ಇಷ್ಟೆಲ್ಲ ಕುತೂಹಲ. RCB ಕ್ಯಾಪ್ಟನ್, ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ಸ್ಮೃತಿ ಮಂಧಾನ ಮದುವೆ ಸಡನ್ ಆಗಿ ಮುಂದಕ್ಕೆ ಹೋಗಿದೆ ಅಥವಾ ಕ್ಯಾನ್ಸಲ್ ಆಗಿದೆ. ಮೊದಲಿಗೆ ಮದುವೆ ಪೋಸ್ಟ್ ಪೋನ್ ಅಂದಾಗ ಸ್ಮೃತಿ ತಂದೆ ಶ್ರೀನಿವಾಸ್ ಅವರಿಗೆ ಹಾರ್ಟ್ ಅಟ್ಯಾಕ್ ಎಂದಾಗ.. ಏನೋ ಅನಾಹುತವಾಗಿದೆ ಎಂದುಕೊಂಡಿದ್ದರು. ಮದುವೆ ಮುಂದೂಡಿದ ವಿಷಯಕ್ಕೆ ಯಾರಿಗೂ ಅಚ್ಚರಿ ಆಗಲಿಲ್ಲ. ಏಕೆಂದರೆ ಬಹುತೇಕರಿಗೆ ಸ್ಮೃತಿ ಮಂಧಾನಗೆ ತಮ್ಮ ತಂದೆಯ ಜೊತೆ ಇರುವ ಅಟ್ಯಾಚ್‌ಮೆಂಟ್ ಎಂಥದ್ದು ಎಂಬುದು ಗೊತ್ತಿತ್ತು. ಸ್ಮೃತಿಗೆ ತಂದೆ.. ಕೇವಲ ತಂದೆಯಲ್ಲ. ಗುರು, ಡ್ರೈವರ್, ಫ್ರೆಂಡ್, ಮೆಂಟರ್, ಕೋಚ್.. ಎಲ್ಲವೂ ಆಗಿದ್ದರು. ಬೇಸರದಿಂದ ಇದ್ದಾಗ, ಖಿನ್ನತೆಯಿಂದ ಬಳಲಿದಾಗ ಡಾಕ್ಟರ್ ಆಗಿದ್ದರು. ಇದನ್ನು ಸ್ಮೃತಿ ಹಲವು ಕಡೆ ಹೇಳಿಕೊಂಡಿದ್ದ ಕಾರಣ ಸಹಜವಾಗಿಯೇ ಸುಮ್ಮನಾಗಿದ್ದರು. ಆದರೆ.. ಅದಾದ ಮೇಲೆ ಹೊರಬಿದ್ದ ಕಥೆಯೇ ಚೀಟಿಂಗ್ ಸ್ಟೋರಿ.
ಅದನ್ನು ಮೀಡಿಯಾಗಳು ಹುಡುಕೋಕೆ ಕಾರಣವೂ ಇದೆ. ಸ್ಮೃತಿ ಮಂಧಾನ ಪಾಲಾಶ್ ಮುಚ್ಚಲ್ ಅವರ ಜೊತೆ ಇದ್ದ ವಿಡಿಯೋಗಳನ್ನೆಲ್ಲ ಡಿಲೀಟ್ ಮಾಡಿದ್ದಾರೆ. ಪ್ರಪೋಸ್ ಮಾಡುವ, ಹಳದಿ ಸಂಭ್ರಮದಲ್ಲಿ ಮಿಂದೇಳುವ, ಜೊತೆಗಿದ್ದ ಗೆಳತಿಯರು ರೇಗಿಸುವ, ಗೋಳಾಡಿಸುವ.. ಒಟ್ಟಾರೆ ಸಂಭ್ರಮದ ವಿಡಿಯೋಗಳನ್ನೆಲ್ಲ ತೆಗೆದುಹಾಕಿದ್ದಾರೆ. ವಿಶೇಷ ಅಂದ್ರೆ, ಸ್ಮೃತಿ ಅವರಷ್ಟೇ ಅಲ್ಲ.. ಶ್ರೇಯಾಂಕಾ ಪಾಟೀಲ್, ಜೆಮಿಮಾ ರೋಡ್ರಿಗಸ್, ಅರುಂಧತಿ ರೆಡ್ಡಿ, ರಾಧಾ ಯಾದವ್.. ಅವರ ಪೇಜಿನಿಂದಲೂ ವಿಡಿಯೋ ಡಿಲೀಟ್ ಆಗಿದೆ. ಸಂಥಿಂಗ್ ಈಸ್ ರಾಂಗ್ ಎಂದು ಅನಿಸಿದ್ದೇ ಆಗ. ಮದುವೆ ಮುಂದೂಡುವುದಕ್ಕೆ ಕಾರಣ ಸ್ಮೃತಿ ತಂದೆಗೆ ಹಾರ್ಟ್ ಅಟ್ಯಾಕ್ ಎನ್ನುವುದು ಆಗಿರಲಿಕಿಲ್ಲ ಎನ್ನಿಸಿದ್ದೇ ಆಗ. ಅದಾದ ಮೇಲೆ ಇಷ್ಟೆಲ್ಲ ಕಥೆ ಆಚೆ ಬಂದಿದೆ. ಸದ್ಯದ ಮಟ್ಟಿಗೆ ಮದುವೆ ಕ್ಯಾನ್ಸಲ್ ಆಗಿದೆ. ಮುಂದೂಡಿಕೆ ಅಲ್ಲ. ಅಷ್ಟೇ.



