ಎರಡೂವರೆ ವರ್ಷ ಸಿಎಂ ಸಿದ್ಧರಾಮಯ್ಯ ಸಿಎಂ. ಎರಡೂವರೆ ವರ್ಷ ಡಿಕೆ ಶಿವಕುಮಾರ್..ಇಂಥಾದ್ದೊಂದು ಅಧಿಕಾರ ಹಸ್ತಾಂತರ ಒಪ್ಪಂದ ಅಗಿತ್ತಾ.. ಆಗಿರಲಿಲ್ವಾ.. 2023ರಲ್ಲಿ ಆಕ್ಚುವಲಿ ಏನಾಗಿತ್ತು.. ರಿಸಲ್ಟ್ ಬಂದ ಮೇಲೆ ಏನೇನು ಮಾತುಕತೆ ಆಗಿತ್ತು ಎಂಬ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿಗಳು ಹೊರಬಿದ್ದಿವೆ. ಆ ಮಾಹಿತಿಗಳ ಪ್ರಕಾರ ಡಿಕೆ ಸುರೇಶ್ ಅವರ ತಲೆ ಮೇಲೆ ಕೈಇಟ್ಟು ಸಿದ್ದರಾಮಯ್ಯ ಪ್ರಾಮಿಸ್ ಮಾಡಿದ್ರಂತೆ. ಅಷ್ಟೇ ಅಲ್ಲ..
ಕಳೆದ ವಾರ ದೆಹಲಿಗೆ ಹೋಗಿದ್ದಾಗ ಡಿಕೆ ಸುರೇಶ್ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಇದೇ ಪ್ರಶ್ನೆ ಕೇಳಿಂದ್ರಂತೆ. ಇದಕ್ಕೆ ಸಿದ್ದರಾಮಯ್ಯ ಸರಿಯಾಗಿ ಮುಖಕ್ಕೆ ಮುಖ ಕೊಟ್ಟು ಮಾತನಾಡಿಲ್ಲ ಎನ್ನುತ್ತದೆ ಒಂದು ಮೂಲ. ಸಿದ್ದರಾಮಯ್ಯ ಅವರ ಬಣದವರ ಪ್ರಕಾರ ಸಿದ್ದರಾಮಯ್ಯ ಮಾತನಾಡಿದ್ದಾರೆ. ಆದರೆ.. ನಾನ್ ರೆಡಿ ಇದ್ದೀನಪ್ಪ, ಶಾಸಕರು ಒಪ್ಪಬೇಕಲ್ಲ ಎಂದು ವಾದಿಸಿದ್ದಾರೆ. ಇದು ಸಿದ್ದರಾಮಯ್ಯ ಬಣದವರು ಕೊಟ್ಟಿರುವ ಮಾಹಿತಿ.
ಅದಾದ ನಂತರ ಡಿಕೆ ಸುರೇಶ್ ಖರ್ಗೆ ಅವರ ಬಳಿ ʻʻಖರ್ಗೆ ಸಾರ್.. ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಯ ವಿಷಯದಲ್ಲಿ ಒಂದು ಅಮೈಕಲ್ ಅಗ್ರಿಮೆಂಟ್ ಆಯ್ತಲ್ಲ. ಆಗ ನೀವು, ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರೂ ಇದ್ರಿ. ನಿಮ್ಮ ಮಧ್ಯೆ ಏನಾಯ್ತು.. ಏನಾಗಿತ್ತು.. ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಲಿ, ಆನಂತರ ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತ ಒಂದು ʻಅಮೈಕಬಲ್ ಸೆಟ್ಲ್‌ಮೆಂಟ್ʼ ಆಗಿತ್ತಲ್ವಾ.. ಆ ಮಾತುಕತೆಯ ನಂತರ ಸಿದ್ದರಾಮಯ್ಯ ಅವರು ʻʻನನ್ನ ನೆತ್ತಿಯ ಮೇಲೆ ಕೈ ಇಟ್ಟು ಏನು ಪ್ರಾಮಿಸ್ಸು ಮಾಡಿದ್ರು?ʼʼ ಎಂದು ಹೇಳಿದ್ರಲ್ವ.. ʻʻಯೇ ಸುರೇಶ್, ಎರಡೂವರೆ ವರ್ಷ ಆದ ಕೂಡ್ಲೇ ಸಿಎಂ ಹುದ್ದೆ ಬಿಟ್ಟು ಕೊಡ್ತೀನಿ. ಬೇಕಿದ್ರೆ ಇನ್ನೂ ಒಂದು ವಾರ ಮುಂಚೆಯೇ ಬಿಟ್ಟು ಕೊಡ್ತೀನಿʼ ಅಂತ ಹೇಳಿರಲಿಲ್ವಾ? ಇದಾದ ನಂತರವೇ ತಾನೇ ನೀವು ಈ ಕುರಿತು ರಾಹುಲ್ ಗಾಂಧಿಯವರಿಗೆ ವಿವರಿಸಿದ್ದು? ಈ ವಿಷಯವನ್ನು ಇವತ್ತು ವರಿಷ್ಠರು ಯಾರೂ ಮಾತನಾಡದಿದ್ದರೆ ನಾವೇನು ಮಾಡಬೇಕು? ಶಿವಕುಮಾರ್ ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ ತಾನೇ? ಹೀಗಾಗಿ ಅವರಿಗೆ ನ್ಯಾಯ ಕೊಡಿಸಿʼʼ ಎಂದು ಕೇಳಿದ್ದಾರೆ.
ಆಗ ಖರ್ಗೆ ಸಾಹೇಬ್ರು ಸ್ವಲ್ಪ ದಿನ ಸುಮ್ನರ್ರೀ.. ಮುಂದಿನ ತಿಂಗಳು ಸಂಸತ್ ಅಧಿವೇಶನ ಶುರು ಆಗುತ್ತೆ. ರಾಹುಲ್ ಗಾಂಧಿನೂ ಫಾರಿನ್ನಿಂದ ಬರ್ತಾರೆ. ಆಗ ಸಿದ್ದರಾಮಯ್ಯ ಅವರೂ ಬರಲಿ. ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ” ಎಂದಿದ್ದಾರೆ. ಆದರೆ ಅವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತಿನಿಂದ ಸಮಾಧಾನಗೊಳ್ಳದ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಕುದಿಯುತ್ತಾ ವಾಪಸ್ಸಾಗಿದ್ದಾರೆ.
ಅದಾದ್ಮೇಲೆ ಶುರುವಾಗಿರೋದೇ ಈ ನಂಬರ್ ಗೇಮು. ಡಿಕೆ ಶಿವಕುಮಾರ್ ಟೆನ್ಷನ್ ಏನಂದ್ರೆ.. ಏನೇ ಹರಸಾಹಸ ಮಾಡಿದ್ರೂ.. ಬೆಂಬಲಿಗರ ಸಂಖ್ಯೆ 50 ದಾಟ್ತಿಲ್ಲ ಅನ್ನೋದು. ಆದರೆ.. ಒಂದ್ ವಿಷಯ ಗೊತ್ತಿರಲಿ. ಈ ಹಿಂದೆ ದೇವರಾಜ ಅರಸು ಅವರೂ ಸಿಎಂ ಆಗಿದ್ದಾಗ ಹೀಗೇ ಆಗಿತ್ತು. ಯಾವಾಗ ಹೈಕಮಾಂಡ್.. ಗುಂಡೂರಾವ್ ಅವರಿಗೆ ಸಪೋರ್ಟ್ ಮಾಡ್ತಿದೆ ಅಂಥಾ ಗೊತ್ತಾಯ್ತೊ.. ದೇವರಾಜ ಅರಸು ಅವರ ಹತ್ತಿರ ಒಬ್ಬನೇ ಒಬ್ಬ ಎಂಎಲ್‌ಎ ಇರಲಿಲ್ಲ. ಎಲ್ಲ ವಿಥ್ ಇನ್ ಮಿನಿಟ್‌ನಲಿಲ ಗುಂಡೂರಾವ್ ಅಂದ್ರೆ..ಈಗ ದಿನೇಶ್ ಗುಂಡೂರಾವ್ ಇದ್ದಾರಲ್ಲ.. ಅವರ ತಂದೆಯ ಟೀಂಗೆ ಶಿಫ್ಟ್ ಆಗಿದ್ರು. ಈಗಲೂ ಅಷ್ಟೇ.. ಹೈಕಮಾಂಡ್ ಹೇಳಿದ್ರೆ.. ಒಂದು ನಿಮಿಷದಲ್ಲಿ ಎಲ್ಲ ಚೇಂಜ್ ಆದ್ರೂ ಆಶ್ಚರ್ಯ ಇಲ್ಲ.



