ಮಾರುತಿ ಕಾರ್, ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ್ದು ಎಂಬ ವಾತಾವರಣ ಇತ್ತೀಚಿನವರೆಗೂ ಇತ್ತು. ಇದೀಗ ಮಾರುಕಟ್ಟೆಯಲ್ಲಿ ಸ್ವಲ್ಪ ಸ್ವಲ್ಪವೇ ಚೇಂಜ್ ಆಗುತ್ತಿದೆ. ಮಾರುತಿ ಅಷ್ಟೇ ಅಲ್ಲ, ಇತರೆ ಕಂಪೆನಿಗಳ ಕಾರುಗಳೂ ಪೈಪೋಟಿ ಕೊಡ್ತಿವೆ. ಆದರೆ, ಮಾರುತಿ ದೇಶದ ನಂ.1 ಕಾರ್ ಎನ್ನುವುದರಲ್ಲಿ ಅನುಮಾನ ಇಲ್ಲ. ದೇಶದ ಶೇ.40ಕ್ಕಿಂತ ಹೆಚ್ಚು ಕಾರುಗಳು ಮಾರುತಿ ಕಂಪೆನಿಯವರದ್ದು. ಅಂದರೆ ಇಂತಹ ಕಾರುಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಕಾರಿನ ಮೇಲಲ್ಲ, ಕಾರಿನಲ್ಲಿರುವ ಒಂದು ವಿಶೇಷ ಲೋಹದ ಮೇಲೆ.
ಮಾರುತಿ ಸುಝುಕಿ ಈಕೋ ಕಾರ್ ಕ್ಯಾಟಲಿಸ್ಟಿಕ್ ಕನ್ವರ್ಟರ್ (Maruti Suzuki Eeco car catalytic converter) ಈ ಮಾರುತಿ ಕಾರಿನಲ್ಲಿ ಚಿನ್ನದಷ್ಟೇ ಬೆಲೆಬಾಳುವ ಭಾಗವಿದೆ. ಇದು ನಿಜಕ್ಕೂ ದುಬಾರಿ.
ಈ ಲೋಹಗಳನ್ನು ಮಾಲಿನ್ಯ ಕಡಿಮೆ ಮಾಡುವ ಉಪಕರಣಗಳಲ್ಲಿ ಬಳಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕಳ್ಳರು ಕೆಲವೇ ನಿಮಿಷಗಳಲ್ಲಿ ಇದನ್ನು ಹೊರತೆಗೆದು, ಸ್ಕ್ರ್ಯಾಪ್ ವಿತರಕರಿಗೆ ಮಾರುತ್ತಾರೆ. ಮುಂದೆ ಅವರಿಗೆ ಅದು ದೊಡ್ಡ ಲಾಭವನ್ನೇ ತಂದುಕೊಡುತ್ತದೆ.
ಮಾರುತಿ ಸುಝುಕಿ ಈಕೋ ಕಾರಿನಲ್ಲಿ (maruthi Suzuki eco) ಕಾರಿನಲ್ಲಿ ಸೈಲೆನ್ಸರ್ ಮತ್ತು ವೇಗವರ್ಧಕ ಇದ್ಯಲ್ಲ, ಆ ಸೈಲೆನ್ಸರಿನಲ್ಲಿ ಪ್ಲಾಟಿನಂ, ಪಲ್ಲಾಡಿಯಂ ಹಾಗೂ ರೋಡಿಯಂ ಅನ್ನೋ ಲೋಹಗಳಿವೆ. ಇಂಡಸ್ಟ್ರಿಯಲ್ ಏರಿಯಾಗಳಲ್ಲಿ ಈ ಮೂರು ಲೋಹಗಳ ಪೈಕಿ ಪಲ್ಲಾಡಿಯಂ ಲೋಹಕ್ಕೆ ಸಖತ್ ಡಿಮ್ಯಾಂಡ್ ಇದೆ. ಪಲ್ಲಾಡಿಯಂ ಲೋಹದ ಧೂಳಿಗೆ 10 ಗ್ರಾಂಗೆ 3ರಿಂದ 6 ಸಾವಿರ ರೂ. ಸಿಗುತ್ತದೆ. ಒಂದು ಸೈಲೆನ್ಸರ್ ಕದ್ದು ಕೈಗಾರಿಕೆ ಪ್ರದೇಶಗಳಲ್ಲಿ ಕಳ್ಳತನದಲ್ಲಿ ಮಾರಿದರೆ ಮಿನಿಮಮ್ 50 ಸಾವಿರ ಸಿಗುತ್ತಂತೆ. ಅಲ್ಲದೆ ಈ ಸೈಲೆನ್ಸರುಗಳಲ್ಲಿ ಇರೋ ಲೋಹಗಳಷ್ಟೇ ಅಲ್ಲ, ಇಂತಹ ಧೂಳನ್ನು ವಿಶೇಷವಾಗಿ ಮಾರುತಿ ಸುಝುಕಿ ಈಕೋ ಕಾರಿನ ಸೈಲೆನ್ಸರುಗಳು ಸುಲಭವಾಗಿ ತೆಗೆಯುತ್ತವಂತೆ. ಹೀಗಾಗಿ ಈಗ ಮಾರುತಿ ಸುಝುಕಿ ಕಾರಿನ ಸೈಲೆನ್ಸರುಗಳಿಗೆ ಸಖತ್ ಬೇಡಿಕೆ ಬಂದಿದೆ. ಕಳ್ಳರಿಗೂ ಒಂದು ಕಾಲ ಬಂದಿದೆ.
ಏಕೆಂದರೆ ಇದು ಇರೋದು ಕಾರಿನ ಸೈಲೆನ್ಸರ್ ಮತ್ತು ವೇಗವರ್ಧಕಗಳಲ್ಲಿ. ಈ ಯಂತ್ರಗಳು ಅಂದ್ರೆ ಮೆಷಿನ್ನುಗಳು ಕಾರ್ಬನ್ ಡೈ ಆಕ್ಸೈಡ್, ಮಾನಾಕ್ಸೈಡ್, ಹೈಡ್ರೋಕಾರ್ಬನ್, ನೈಟ್ರೋಜನ್ ಆಕ್ಸೈಡ್‌ಗಳನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಎಂಜಿನ್ನಿನ ಸ್ಪೀಡ್ ಹೆಚ್ಚುತ್ತದೆ. ಜೊತೆಗೆ ಕರ್ಕಶ ಶಬ್ಧವೂ ಕಂಟ್ರೋಲಿಗೆ ಬರುತ್ತದೆ.
ಹೀಗಾಗಿಯೇ ಇವುಗಳನ್ನು ಕದ್ದು ಮಾರಿದರೆ, ಲಾಭ ಹೆಚ್ಚಂತೆ. ಆದರೆ ಪ್ರಾಕ್ಟಿಕಲ್ ಆಗಿ ಈ ರೀತಿಯ ಕನ್ವರ್ಟರ್ ಮತ್ತು ಸೈಲೆನ್ಸರ್ ಯಾವ ರೀತಿ ಕೆಲಸ ಮಾಡುತ್ತವೆ ಎಂಬ ಮಾಹಿತಿ ಇಲ್ಲ. ಆದರೆ ಡಿಮ್ಯಾಂಡ್ ಇರುವುದಂತೂ ಹೌದು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?
ಅಂದಹಾಗೆ ಇತ್ತೀಚೆಗೆ ಗುಜರಾತಿನ ಅಹಮದಾಬಾದಿನಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ರಸ್ತೆ ಬದಿ ನಿಲ್ಲಿಸಿದ್ದ ಇಕೋ ಮಾರುತಿ ಕಾರಿನ ಈ ಕನ್ವರ್ಟರ್ ಮತ್ತು ಸೈಲೆನ್ಸರ್ ಕದ್ದುಕೊಂಡು ಹೋಗಿದ್ದರು. ಇನ್ನೋವಾ ಕಾರಿನಲ್ಲಿ ಬಂದವರು, ಈಕೋ ಮಾರುತಿ ಕಾರಿನ ಒಂದು ಬಿಡಿಯಂತ್ರದ ಕಳ್ಳತನ ಮಾಡಿದ್ದೇಕೆ ಎಂದು ಅನುಮಾನಗೊಂಡ ಪೊಲೀಸರು ಕಳ್ಳರ ಬೆನ್ನು ಬಿದ್ದರು. ಅಂತಿಮವಾಗಿ ಕಳ್ಳರು ಸಿಕ್ಕಾಗ ಇಡೀ ಮೆಟಲ್ ಧೂಳಿನ ಸಂಚು ಹೊರಬಿದ್ದಿದೆ. ಎಲ್ಲೆಲ್ಲಿ ಯಾವ ಹುತ್ತವೋ.. ಯಾವ ಕಾರಿನಲ್ಲಿ ಯಾವ ಮೆಟಲ್ ಇದೆಯೋ.. ಬಲ್ಲವರಾರು.,? ಅಂದಹಾಗೆ ಕಳ್ಳರಿಗೂ ಒಂದು ಎಚ್ಚರಿಕೆ. ಇದಕ್ಕೆ ಗುಜರಾತಿನ ಕೆಲವು ಉದ್ಯಮಗಳಲ್ಲಿ ಮಾತ್ರವೇ ಬೇಡಿಕೆ ಇರೋ ಮೆಷಿನ್. ಎಲ್ಲ ಕಡೆ ಅಲ್ಲ.



