ರಾಜ್ಯದ ಬೊಕ್ಕಸ ತುಂಬಿಸುವುದಕ್ಕೆ ರಾಜ್ಯ ಸರ್ಕಾರಕ್ಕೆ ಪದೇ ಪದೇ ಕಾಡುವ.. ಕಾಣುವ.. ಏಕೈಕ ಥೈಲಿ.. ಹಣದ ಚೀಲ ಎಂದರೆ.. ಅದು ಮದ್ಯಪಾನ. ಅದು ಬಿಟ್ಟರೆ ಮತ್ತೇನಿದೆ. ಈಗ ಜೂನ್ 4ಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಬರಲಿದೆ. ಆ ಫಲಿತಾಂಶದಲ್ಲಿ ಯಾರೇ ಗೆಲ್ಲಲಿ.. ಸೋಲಲಿ.. ಕುಡುಕರಿಗೆ ಡಬಲ್ ಶಾಕ್ ಕಟ್ಟಿಟ್ಟ ಬುತ್ತಿ. ರಾಜ್ಯ ಸರ್ಕಾರ ಮತ್ತೊಮ್ಮೆ ಮದ್ಯದ ದರ ಏರಿಕೆಗೆ ಸಜ್ಜಾಗಿದೆ ಎಂಬ ಮಾಹಿತಿಗಳಿವೆ. ಕಳೆದ ಏಳೆಂಟು ತಿಂಗಳಲ್ಲಿ ಮದ್ಯದ ದರ ಹೆಚ್ಚಳದ ಪ್ರಮಾಣ ಅಂದಾಜು 40 ರೂ.ಗಳ ಗಡಿ ದಾಟಿದೆ. ಕಂಪ್ಲೀಟ್ ಲೆಕ್ಕ ಇಲ್ಲಿದೆ.
ರಾಜ್ಯದಲ್ಲಿ ಮದ್ಯದ ಬ್ರಾಂಡ್‌ಗಳನ್ನು ಬೆಲೆಯ ಅನುಸಾರ 18 ಸ್ಲಾಬ್ʻಗಳಾಗಿ ವಿಂಗಡಿಸಲಾಗಿದೆ. ಒಂದರಿಂದ ಐದನೇ ಸ್ಲಾಬ್ʻವರೆಗಿನ ಮದ್ಯಗಳ ಮಾರಾಟದಿಂದ ಶೇ. 75ರಷ್ಟು ಆದಾಯ ಬರುತ್ತದೆ. ಆರರಿಂದ 12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳಿಂದ ಶೇ. 20ರಷ್ಟು ಮತ್ತು 13ರಿಂದ 18ರವರೆಗಿನ ಸ್ಪ್ಯಾಬ್‌ಗಳ ಪ್ರೀಮಿಯಂ ವಿದೇಶಿ ಮದ್ಯಗಳಿಂದ ಶೇ. 5ರಷ್ಟು ಆದಾಯ ಬರುತ್ತದೆ. ಆದಾಯದ ಲೆಕ್ಕಾಚಾರದಲ್ಲೇ ಸರಕಾರ ಎರಡರಿಂದ ಐದನೇ ಸ್ಪ್ಯಾಬ್‌ವರೆಗಿನ ಮದ್ಯಗಳ ಬೆಲೆಯನ್ನು ಶೇ. 7ರಿಂದ 8ರಷ್ಟು ಹೆಚ್ಚಳ ಮಾಡಲಿದೆ.
ಎಷ್ಟು ಹೆಚ್ಚಳ ಆಗಬಹುದು..?
| ಸ್ಪ್ಯಾಬ್ | ಈಗಿನ ದರ | ಹೆಚ್ಳಳ ಸಾಧ್ಯತೆ |
| ಮೊದಲನೇ ಸ್ಪ್ಯಾಬ್ | 63.14 ರೂ | ಹೆಚ್ಚಳ ಸಾಧ್ಯತೆಯಿಲ್ಲ |
| ಎರಡನೇ ಸ್ಪ್ಯಾಬ್ | 80ರೂ.ನ ಬ್ರಾಂಡ್ | ತಲಾ 5 ರೂ. ಹೆಚ್ಚಳ |
| ಮೂರನೇ ಸ್ಪ್ಯಾಬ್ | 99.50 ರೂ. | 105 ರೂ. |
| ನಾಲ್ಕನೇ ಸ್ಪ್ಯಾಬ್ | 122.50 ರೂ | 130 ರೂ. |
ಹೊರ ರಾಜ್ಯಗಳಲ್ಲಿದುಬಾರಿ ಬೆಲೆಯ ಮದ್ಯಗಳ ಬೆಲೆ ಕರ್ನಾಟಕಕ್ಕಿಂತಲೂ ಕಡಿಮೆ ಇದೆ. ಈ ಮದ್ಯಗಳ ಮಾರಾಟ ಹೆಚ್ಚಿಸುವ ನಿಟ್ಟಿನಲ್ಲಿಸರಕಾರ ಇವುಗಳ ಬೆಲೆ ಇಳಿಕೆ ಮಾಡಲಿದೆ. ಆರರಿಂದ 12ನೇ ಸ್ಪ್ಯಾಬ್‌ವರೆಗಿನ ಸೆಮಿ ಪ್ರೀಮಿಯಂ ಮದ್ಯಗಳ ಬೆಲೆಯಲ್ಲಿಶೇ 10ರಷ್ಟು, 12ರಿಂದ 18ನೇ ಸ್ಪ್ಯಾಬ್‌ವರೆಗಿನ ವಿದೇಶಿ ಅಥವಾ ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯಲ್ಲಿ ಶೇ 12ರಿಂದ 15ರಷ್ಟು ಇಳಿಕೆ ಮಾಡುವ ಸಾಧ್ಯತೆಯಿದೆ. ಹೊರ ರಾಜ್ಯಗಳಲ್ಲಿನ ಮದ್ಯದ ದರಪಟ್ಟಿ ಆಧರಿಸಿ ಹೊಸದಾಗಿ ಬೆಲೆ ನಿಗದಿ ಮಾಡಲಾಗುತ್ತದೆ.
ಬಿಯರ್ ಎಷ್ಟಾಗಲಿದೆ..?
2023ರ ವಿಧಾನಸಭಾ ಚುನಾವಣೆ ನಂತರ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರಕಾರ ಮೂರು ಬಾರಿ ಬಿಯರ್ ದರ ಹೆಚ್ಚಿಸಿದೆ. ಅಧಿಕಾರಕ್ಕೆ ಬಂದ ತಕ್ಷಣ ಬಿಯರ್ ಮೇಲೆ ಶೇ 20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆಗ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದ ಬಿಯರ್ ಕಂಪೆನಿಗಳು ಒಂದು ಬಾಟಲಿ ಮೇಲೆ ಕನಿಷ್ಠ ೧೦ ರೂ. ಹೆಚ್ಚು ಮಾಡಿದ್ದವು.
ಅದಾದ ಮೇಲೆ ಫೆಬ್ರವರಿಯಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇ 185ರಿಂದ 195ಕ್ಕೆ ಹೆಚ್ಚಳ ಮಾಡಿತ್ತು. ಇದರೊಂದಿಗೆ ಎಇಡಿ ಶೇ 10ರಷ್ಟು ಹೆಚ್ಚಳವಾಗಿತ್ತು. ಆಗ ಬಿಯರ್ ಬೆಲೆ 8 ರೂ.ಗಳಿಂದ 15 ರೂ.ಗಳವರೆಗೆ ಏರಿಕೆಯಾಗಿತ್ತು. ಒಟ್ಟಿನಲ್ಲಿ ಕಳೆದ ಏಳೆಂಟು ತಿಂಗಳ ಅವಧಿಯಲ್ಲಿ ಬಿಯರ್ ಬೆಲೆ ಪ್ರತಿ ಬಾಟಲ್‌ಗೆ ಸುಮಾರು 40 ರೂ.ವರೆಗೆ ಹೆಚ್ಚಳವಾಗಿದೆ.



