ಆಪ್ತರಕ್ಷಕ ಸಿನಿಮಾ ಬಂದು ದಶಕಗಳೇ ಕಳೆದಿವೆ. ಮಲಯಾಳಂನ ಮಣಿಚಿತ್ರತಾಳ್ ಸಿನಿಮಾ ಸೃಷ್ಟಿಸಿದ್ದ ಕ್ರೇಜ್, ನಂತರ ಹಲವು ಭಾಷೆಗಳಿಗೆ ಟ್ರಾನ್ಸ್‌ಫರ್ ಆಗಿತ್ತು. ಕನ್ನಡದಲ್ಲಿ ಆಪ್ತರಕ್ಷಕ ಸಿನಿಮಾ, ಮೂಲಚಿತ್ರವನ್ನೂ ಮೀರಿಸಿ ಸಕ್ಸಸ್ ಆಗಿತ್ತು. ವಿಷ್ಣುವರ್ಧನ್, ಸೌಂದರ್ಯ, ಪ್ರೇಮಾ, ರಮೇಶ್ ಮತ್ತು ಅವಿನಾಶ್ ಪಾತ್ರದಲ್ಲಿದ್ದ ಆಪ್ತಮಿತ್ರ, ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಸಿನಿಮಾ ನಾಗವಲ್ಲಿಯ ಬೆನ್ನು ಹತ್ತಿ, ಅದೆಷ್ಟು ಟಿವಿ ಪ್ರೋಗ್ರಾಂ ಬಂದವೋ ಲೆಕ್ಕ ಇಲ್ಲ. ಕನ್ನಡದಲ್ಲಿ ಹಿಟ್ ಆದ ನಂತರ ತಮಿಳಿಗೆ ರಜನಿಕಾಂತ್, ತೆಲುಗಿಗೆ ವೆಂಕಟೇಶ್, ಹಿಂದಿಗೆ ಅಕ್ಷಯ್ ಕುಮಾರ್.. ಇದೇ ಚಿತ್ರವನ್ನು ರೀಮೇಕ್ ಮಾಡಿದರು ಮತ್ತು ಗೆದ್ದರು.
ಟಿವಿ ರಿಯಾಲಿಟಿ ಶೋಗಳಲ್ಲಿಯಂತೂ ಆಪ್ತಮಿತ್ರದ ಯಾವುದಾದರೂ ಒಂದು ಸೀನ್ ಮರುಸೃಷ್ಟಿ ಮಾಡುವುದು ಕಡ್ಡಾಯವೇ ಆಗಿಬಿಟ್ಟಿದೆ. ಅದರಲ್ಲಿಯೂ ನಾಗವಲ್ಲಿಯನ್ನು ಹೊಡೆದೋಡಿಸುವ ಕ್ಲೈಮಾಕ್ಸ್ ದೃಶ್ಯವಂತೂ ರಿಯಾಲಿಟಿ ಶೋಗಳ ಹಾರ್ಟ್ ಫೇವರಿಟ್. ಉಳಿದಂತೆ ಅವಿನಾಶ್ ಅವರ ಡೈಲಾಗ್ ರಿಪೀಟ್ ಮಾಡ್ತಾರೆ. ಇಲ್ಲೊಂದು ಸಮಸ್ಯೆ ಇದೆ ಅನ್ನೋದು ಹಲವು ಡ್ರಾಮಾ, ಸಿನಿಮಾಗಳಲ್ಲಿ ಕಾಮಿಡಿಯಾಗಿ ಹೋಗಿದೆ.
ಒಂದು ಸಿನಿಮಾ ಬೇಸ್ ಆಗಿಟ್ಟುಕೊಂಡು ಹಲವು ಸಿನಿಮಾಗಳೂ ಬಂದಿವೆ. ಇದೀಗ ಕಿರುತೆರೆ ಧಾರಾವಾಹಿಗೂ ಆಪ್ತಮಿತ್ರ ಸ್ಟೈಲ್ ಕಾಲಿಟ್ಟಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಟಾಪ್ ಸ್ಥಾನ ಪಡೆದುಕೊಂಡಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ.
ದಿನದಿಂದ ದಿನಕ್ಕೆ ಲಕ್ಷ್ಮೀ ಬಾರಮ್ಮ ಸೀರಿಯಲ್ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮೈಮೇಲೆ ಕೀರ್ತಿ ದೆವ್ವ ಬಂದಿದೆ ಅಂಥ ಕಾವೇರಿ ಮಂತ್ರವಾದಿಯ ಮುಂದೆ ಕರೆದುಕೊಂಡು ಹೋಗಿದ್ದಾಳೆ. ಈಗ ಕಾವೇರಿಯೇ ಲಕ್ಷ್ಮೀಯನ್ನು ಬಲವಂತವಾಗಿ ಮಾಟ-ಮಂತ್ರ ಮಾಡಿಸುವವರ ಮುಂದೆ ಕರೆದು ತಂದಿದ್ದಾಳೆ. ನಿನ್ನ ದೇಹದ ಮೇಲೆ ಹಾಳಾದ ಕೀರ್ತಿಯ ದೆವ್ವ ಬಂದಿದೆ ಅನ್ನು ಬಿಡಿಸಬೇಕು ಅಂತ ಲಕ್ಷ್ಮೀ ಮುಂದೆ ಹೇಳಿ ಬಿಟ್ಟಿದ್ದಾಳೆ. ಆಗ ಏಕಾಏಕಿ ಲಕ್ಷ್ಮೀ ಮೈಮೇಲೆ ಕೀರ್ತಿ ಬಂದಿದ್ದು, ಇದನ್ನು ನೋಡಿದ ಕಾವೇರಿ ಮತ್ತೆ ಬೆಚ್ಚಿ ಬಿದ್ದಿದ್ದಾಳೆ.
ಇದೇ ಹೊತ್ತಿಗೆ ಅದೇ ಮಂಡಲದ ಬಳಿಕ ವೈಷ್ಣವ್ ಕುಟುಂಬಸ್ಥರು ಬಂದಿದ್ದಾರೆ. ಇವರ ಮುಂದೆ ಲಕ್ಷ್ಮೀ ವೈಷ್ ಬಂದಿದ್ದಾನೆ. ಅವನ ಮುಂದೆ ನೀವು ಸತ್ಯ ಹೇಳಲೇಬೇಕು. ಹೇಳಿ ಹೇಳಿ ಅಂತ ಲಕ್ಷ್ಮೀ ಕಿರುಚಾಡಿದ್ದಾಳೆ. ಆಗ ಇದನ್ನು ನೋಡಿದ ಕಾವೇರಿ ತಡವರಿಸಿದ್ದಾಳೆ. ತಾನು ತೋಡಿದ ಹಳ್ಳಕ್ಕೆ ಕಾವೇರಿ ತಾನೇ ಬಿದ್ದಿದ್ದಾಳೆ. ಈಗಲಾದರೂ ವೈಷ್ಣವ ಮುಂದೆ ತನ್ನ ಅಸಲಿ ಮುಖವಾಡ ಬಯಲು ಮಾಡುತ್ತಾಳಾ, ವೈಷ್ ಮುಂದೆ ಎಲ್ಲಾ ಸತ್ಯ ಹೇಳಿ ಬಿಡುತ್ತಾಳಾ ಅಥವಾ ಅಲ್ಲಿಯೂ ಕೂಡ ಸುಳ್ಳು ಕಥೆ ಕಟ್ಟುತ್ತಾಳಾ ಅಂತ ಮುಂದಿನ ಎಪಿಸೋಡ್ ವರೆಗೂ ಕಾಯುವಂತೆ ಮಾಡ್ತಾರೆ.
ಒಟ್ಟಿನಲ್ಲಿ ಧಾರಾವಾಹಿಗಳ ಕಥೆಯಲ್ಲಿ ವೀಕ್ಷಕರಿಗೆ ಆಸಕ್ತಿ ಹುಟ್ಟುವುದಕ್ಕೆ ಏನೇನೆಲ್ಲ ಮಾಡಬೇಕೋ ಅಷ್ಟನ್ನೂ ದಾರಾವಾಹಿಯವರು ಮಾಡ್ತಾರೆ. ಆದರೆ, ಇದೇ ಮೊದಲ ಬಾರಿಗೆ ಆಪ್ತಮಿತ್ರ ಚಿತ್ರದ ನಾಗವಲ್ಲಿ ಮಾದರಿಯ ದೃಶ್ಯ ಮಾಡಿದ್ದಾರೆ. ನಾಗವಲ್ಲಿ ಅನ್ನೋ ಹೆಸರು ಅಥವಾ ಪಾತ್ರದ ಮಾಡೆಲ್ ಇಟ್ಟುಕೊಂಡವರೆಲ್ಲ ಗೆಲ್ತಾರೆ. ಹಾಗಾದರೆ.. ಲಕ್ಷ್ಮೀ ಬಾರಮ್ಮ ಕೂಡಾ ನಂ.೧ ಆಗುತ್ತಾ..? ಸುಮ್ನೆ ಒಂದು ಕುತೂಹಲ ಅಷ್ಟೆ.



