ಸಿಟಿ ಲೈಟ್ಸ್. ದುನಿಯಾ ವಿಜಯ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ. ಈ ಸಿನಿಮಾದ ಹೀರೋ ವಿನಯ್ ರಾಜ ಕುಮಾರ್. ನಾಯಕಿ ದುನಿಯಾ ವಿಜಯ್ ಮಗಳು ಮೋನಿಷಾ. ಈ ಸಿನಿಮಾ ಚಿತ್ರೀಕರಣಕ್ಕಾಗಿ ದುನಿಯಾ ವಿಜಯ್ ಮಧ್ಯರಾತ್ರಿಯಲ್ಲಿ ಮೆಜೆಸ್ಟಿಕ್ ಸುತ್ತ ಮುತ್ತ ರೌಂಡ್ಸ್ ಹಾಕಿದ್ದಾರೆ. ವಿನಯ್ ಮತ್ತು ಮೊನಿಷಾ ಪ್ರಧಾನ ಪಾತ್ರದಲ್ಲಿದ್ದು, ಮೆಜೆಸ್ಟಿಕ್ ಸುತ್ತ ಮುತ್ತ ಚಿತ್ರೀಕರಣಗೊಂಡಿದೆ. ಅದನ್ನು ಮಧ್ಯರಾತ್ರಿಯಲ್ಲಿ ವಿಜಯ್ ಸೈಲೆಂಟ್ ಆಗಿ, ಜನರಿಗೆ ಗೊತ್ತಾಗದಂತೆ ಚಿತ್ರೀಕರಿಸಿದ್ದಾರಂತೆ.
ಮಗಳ ಹುಟ್ಟುಹಬ್ಬದ ದಿನ ಮಗಳು ಚಿತ್ರೀಕರಣದಲ್ಲಿರೋ ಒಂದಿಷ್ಟು ದೃಶ್ಯಗಳ ಟೀಸರ್ ರಿಲೀಸ್ ಮಾಡಿದ್ದಾರೆ.
“ಜನರಿಗೆ ಗೊತ್ತಾಗದ ರೀತಿಯಲ್ಲಿ ‘ಸಿಟಿ ಲೈಟ್ಸ್’ ಸಿನಿಮಾ ಶೂಟಿಂಗ್ ಮಾಡಲಾಗಿದೆ. ನಾನು ಮತ್ತು ಕೇವಲ ಇಬ್ಬರು ಕ್ಯಾಮರಾಮನ್‌ಗಳು ಮೆಜೆಸ್ಟಿಕ್‌ನಲ್ಲಿ ಮೂರು ರಾತ್ರಿ ಚಿತ್ರೀಕರಣ ಮಾಡಿದ್ದೇವೆ. ಜನರಿಗೆ ಇದು ಗೊತ್ತಾಗದ ಕಾರಣ ಸನ್ನಿವೇಶಗಳು ಚೆನ್ನಾಗಿ ಶೂಟ್ ಆಗಿವೆ. ಸುಮಾರು 25 ದಿನಗಳ ಶೂಟಿಂಗ್ ಪೂರ್ಣಗೊಂಡಿದ್ದು, ನೋಡುಗರಿಗೆ ಈ ಚಿತ್ರ ಬೇರೆಯದ್ದೇ ಫೀಲ್ ನೀಡಲಿದೆ. ಈ ಟೀಸರ್ ಈ ಸಿನಿಮಾ ಎಷ್ಟು ನೈಜವಾಗಿ ಬರಲಿದೆ ಅನ್ನೋದನ್ನು ತೋರಿಸಿದ್ದು, ಇದರ ಬಹುತೇಕ ಸೀನ್‌ಗಳು ರಾತ್ರಿಯದ್ದೇ ಆಗಿವೆʼʼ ಎಂದು ವಿವರ ಕೊಟ್ಟಿದ್ದಾರೆ ದುನಿಯಾ ವಿಜಯ್.
ಮೆಜೆಸ್ಟಿಕ್‌ನಲ್ಲಿ ಮಧ್ಯರಾತ್ರಿ ದುನಿಯಾ ವಿಜಯ್ ಜತೆಗೆ ಕ್ಯಾಮರಾಮನ್ ಹರ್ಷಕುಮಾರ್ ಗೌಡ ಮತ್ತವರ ಜತೆಗೆ ಇಬ್ಬರು ಕ್ಯಾಮರಾ ಸಹಾಯಕರಷ್ಟೇ ಇದ್ದು, ನೈಜ ಸನ್ನಿವೇಶಗಳನ್ನು ಸೆರೆಹಿಡಿದಿದ್ದಾರೆ. ಅವರ ಮಗಳು ಮೋನಿಷಾ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ದೇವಿಯ ವಿಗ್ರಹವನ್ನು ಹೊತ್ತುಕೊಂಡು ಚಾಟಿಯಲ್ಲಿ ಹೊಡೆದುಕೊಳ್ಳುವ ಸಮುದಾಯದವರ ಕಥೆ ಹೇಳ್ತಿದ್ದಾರೆ ದುನಿಯಾ ವಿಜಯ್. ಚಿತ್ರದ ನಾಯಕಿ ಮೋನಿಷಾ ಪರಿಚಯಿಸೋ ಈ ಒಂದು ಟೀಸರ್ ಹಿನ್ನೆಲೆಯಲ್ಲಿ ಒಳ್ಳೆ ಮ್ಯೂಸಿಕ್ ಇದೆ. ಚರಣ್ ರಾಜ್ ಸಂಗೀತ ಈ ಹಾಡು ಇಂಟ್ರಸ್ಟಿಂಗ್ ಆಗಿಯೇ ಇದೆ. ಕೇಳುಗರಿಗೆ ಡೈರೆಕ್ಟರ್ ವಿಜಯ್ ಕುಮಾರ್ ಅಭಿರುಚಿ ಏನು ಅನ್ನೋದು ತೋರಿಸುತ್ತದೆ.
ಅಯ್ಯೋ.. ಶಿವನೇ.. ಹೆಣ್ಣಾಗಿ ಹುಟ್ಟಬಾರದು.. ಎಂದು ಹಿನ್ನೆಲೆಯಲ್ಲಿ ಬರುವ ಹಾಡು, ಚಿತ್ರದ ಕಥೆಯ ಸುಳಿವೊಂದನ್ನು ಬಿಟ್ಟು ಕೊಡುತ್ತಿದೆ. ಚಿತ್ರಕ್ಕೆ ವಿಜಯ್ ಅವರೂ ಒಬ್ಬ ನಿರ್ಮಾಪಕರಾಗಿದ್ದು, ವಿಕ್ರಂ ಆರ್ಯ ಎನ್ನುವವರು ಜೊತೆಗಿದ್ದಾರೆ. ವಿಜಯ್ ಅವರ ಬ್ಯಾನರಿನಲ್ಲೇ ಸಿನಿಮಾ ನಿರ್ಮಾಣವಾಗುತ್ತಿದೆ. ದುನಿಯಾ ವಿಜಯ್ ಅವರ ಫೇವರಿಟ್ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಸಂಗೀತ ನೀಡಿದ್ದು, ಹರೀಶ್ ಕುಮಾರ್ ಗೌಡ ಅವರ ಕ್ಯಾಮೆರಾ ನಿರ್ವಹಣೆ ಇದೆ. ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ದುನಿಯಾ ವಿಜಯ್ ಅವರದ್ದೇ.
ಅಂದಹಾಗೆ ಮೊನಿಶಾ ಅವರ ಈ ದೃಶ್ಯಗಳ ಚಿತ್ರೀಕರಣ ನಡೆದಿರುವುದು ಮೆಜೆಸ್ಟಿಕ್ ಸುತ್ತಮುತ್ತ. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ರಾತ್ರಿ ಹೊತ್ತು ಓಡೋಡೊಕೆ ಗಂಡು ಮಕ್ಕಳೇ ಹೆದರಿಕೊಳ್ತಾರೆ, ಇನ್ನು ಹೆಣ್ಣು ಮಕ್ಕಳಂತೂ ಅಪರಾತ್ರಿಯಲ್ಲಿ ಆ ಕಡೆ ತಲೆನೇ ಹಾಕಲ್ಲ. ಹಾಗಂತ ಮೆಜೆಸ್ಟಿಕ್ ಅಷ್ಟು ಭಯಾನಕ ಸ್ಥಳ ಅಂತಲ್ಲ, ಅದು ಮೊದಲಿನಿಂದಲೂ ಜನರ ಕಲ್ಪನೆಯಲ್ಲಿ ಭಯ ಪಡುವ ಜಾಗವಾಗಿದೆಯಷ್ಟೇ. ಆದರೆ ವಿಜಯ್ ಅವರು ಇಂತಹ ರಿಸ್ಕ್ ತೆಗೆದುಕೊಳ್ಳೋದಕ್ಕೆ ಫೇಮಸ್.



