ಲೂಸ್ ಮಾದ ಯೋಗಿ (loose mada yogi) ಮತ್ತೊಮ್ಮೆ ದೊಡ್ಮನೆ (dodmane) ಹೀರೋ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ (Puneeth Rajkumar) ಅಭಿಮಾನಿಯಾಗಿದ್ದ ಯೋಗಿ (Dunia yogi), ಪುನೀತ್ ಅವರೊಂದಿಗೆ ಹುಡುಗರು (Hudugaru) ಹಾಗೂ ಯಾರೇ ಕೂಗಾಡಲಿ (Yare koogadalli) ಚಿತ್ರದಲ್ಲಿ ಸೆಕೆಂಡ್ ಹೀರೋ ಆಗಿ ನಟಿಸಿದ್ದರು. ಅಷ್ಟೇ ಅಲ್ಲ, ಶಿವಣ್ಣ (Shiva rajkumar) ಜೊತೆ ಭಜರಂಗಿ (Bhajaranig) ಚಿತ್ರದಲ್ಲಿ ಸ್ಪೆಷಲ್ ಹಾಡಿನಲ್ಲಿ ಹಾಗೂ ಮಾಸ್ ಲೀಡರ್ (Mass leader) ಚಿತ್ರದಲ್ಲಿ ಪೋಷಕ ನಟನಾಗಿ ನಟಿಸಿದ್ದರು. ಇದೀಗ ದೊಡ್ಮನೆ ಹುಡುಗ ವಿನಯ್ ಜೊತೆ ನಟಿಸುತ್ತಿದ್ದಾರೆ. ಗ್ರಾಮಾಯಣದಲ್ಲಿ (Gramayana).
ಗ್ರಾಮಾಯಣ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ವಿನಯ್ ರಾಜಕುಮಾರ್ (Vinay Rajkumar) ಹೀರೋ ಆಗಿರುವ ಚಿತ್ರಕ್ಕೆ ಮತ್ತೆ ಚಾಲನೆ ಸಿಕ್ಕಿ ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ. ಇದೀಗ ಚಿತ್ರಕ್ಕೆ ಲೂಸ್ ಮಾದ ಯೋಗಿ ಸೇರ್ಪಡೆಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಅದೊಂದು ಪ್ರಮುಖ ಪಾತ್ರವಾಗಿದ್ದರೂ, ಪಾತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ.
ಗ್ರಾಮಾಯಣ ಸಿನಿಮಾ ಮೂರ್ನಾಲ್ಕು ವರ್ಷಗಳ ಹಿಂದೆ ಶುರುವಾಗಿತ್ತು. ಮಧ್ಯೆ ಕೋವಿಡ್ ಹಾಗೂ ನಿರ್ಮಾಪಕರ ಅಕಾಲಿಕ ಸಾವಿನಿಂದಾಗಿ ನಿಂತು ಹೋಗಿತ್ತು. ಚಿತ್ರವನ್ನು ಖ್ಯಾತ ನಿರ್ಮಾಪಕ ಕೆ.ಪಿಶ್ರೀಕಾಂತ್ (KP Shrikanth) ಅವರು ಲಹರಿ ಫಿಲ್ಮ್ಸ್ (Lahari films) ಮನೋಹರ್ ನಾಯ್ಡು (Manohar naidu) ಜೊತೆಗೆ ಸೇರಿ ಆರಂಭಿಸಿದ್ದಾರೆ. ಗ್ರಾಮಾಯಣ ಚಿತ್ರಕ್ಕೆ ನಾಯಕಿಯಾಗಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ (megha Shetty) ಆಯ್ಕೆಯಾಗಿದ್ದಾರೆ. ದೇವನೂರು ಚಂದ್ರು ಅವರ ಚೊಚ್ಚಲ ನಿರ್ದೇಶನದ ಗ್ರಾಮಾಯಣ ಸಿನಿಮಾ ಇದೀಗ ಶೂಟಿಂಗ್ ಶುರು ಮಾಡಿದೆ.
ದೇವನೂರು ಚಂದ್ರು ಅವರ ಪ್ರಕಾರ ಯೋಗಿ ಅವರದ್ದು ಖಳನಾಯಕನ ಪಾತ್ರವೂ ಅಲ್ಲ, ಪೋಷಕ ನಟನ ಪಾತ್ರವೂ ಅಲ್ಲ. ಅವರು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.ಯೋಗಿ ಅವರು ಗ್ರಾಮಾಯಣದ ಸಂಪೂರ್ಣ ಸ್ಕ್ರಿಪ್ಟ್ ಕೇಳಿದ್ದಾರೆ. ಯೋಗಿ ಅವರ ಪಾತ್ರದ ತೂಕವೇ ಬೇರೆ ಅನ್ನೋದು ಚಂದ್ರು ಅವರ ಆತ್ಮವಿಶ್ವಾಸ.
ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ವಿನಯ್ ಹಳ್ಳಿ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮಾಯಣದಲ್ಲಿ ಖ್ಯಾತ ನಟರಾದ ಅಪರ್ಣಾ (Aparna) ಮತ್ತು ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



