ವಿನಯ್ ರಾಜ್ ಕುಮಾರ್ ಫಿಯಾನ್ಸಿ ಯಾರು.. ದೊಡ್ಮನೆಯ ಈಗಿನ ಹೊಸ ದೊಡ್ಡ ಸೊಸೆ ಯಾರು.. ಹಲವರಿಗೆ ಉತ್ತರ ಕೊಟ್ಟಿದ್ಧಾರೆ ಸ್ಯಾಂಡಲ್ ವುಡ್ ಕ್ವೀನ್, ಮೋಹಕತಾರೆ ರಮ್ಯಾ. ರಮ್ಯಾ ಅವರು ವಿನಯ್ ಅವರಿಗಾಗಿ ಒಂದು ರಿಂಗ್ ಸೆಲೆಕ್ಟ್ ಮಾಡಿದ್ದಾರೆ. ಅದು ನಿಶ್ಚಿತಾರ್ಥದ ಉಂಗುರದಂತೆಯೇ ಇದೆ. ಆಕ್ಚುವಲಿ ಏನಾಗಿದೆ ಅಂದ್ರೆ..
ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಅವರು ಜೊತೆಗೆ ಸೇರಿ ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ ವಿನಯ್, ರಮ್ಯಾಗೆ ಮೆಸೇಜ್ ಮಾಡಿ ಬೇಗ ಬರುವಂತೆ ಹೇಳುತ್ತಾರೆ. ಅಲ್ಲಿ ರಿಂಗ್ ಕೊಡಿಸುವ ಬಗ್ಗೆ ಹೇಳ್ತಾರೆ. ನಿನಗೆ ಯಾಕೆ ರಿಂಗ್ ಕೊಡಿಸಬೇಕು ಅನ್ನಿಸ್ತು ಅಂದಾಗ ವಿನಯ್ ಹೇಳೋದು ʻʻಅವಳನ್ನು ಮೀಟ್ ಮಾಡಿ 3 ವರ್ಷ ಆಯ್ತಲ್ಲ. ಅದಕ್ಕೆ ಈ ಬಾರಿ ಚೆನ್ನಾಗಿರೋದು ಏನಾದರೂ ಕೊಡೋಣʼʼ ಅಂತ ಹೇಳುತ್ತಾರೆ. ಕೊನೆಗೆ ರಮ್ಯಾ ಅವರೇ ರಿಂಗ್ ಸೆಲೆಕ್ಟ್ ಮಾಡುತ್ತಾರೆ.. ಬಳಿಕ ಅಂಗಡಿ ಮಾಲಕ ಇಬ್ಬರಿಗೂ ಶುಭ ಕೋರುತ್ತಾನೆ. ಆಗ ರಮ್ಯಾ ಅವರು ಅವರಿಗೆ ಒಕೆ ಬಟ್ ನನಗ್ಯಾಕೆ.. ಎಲ್ಲರೂ ಹಾಗೆಯೇ ಅಂದು ಕೊಳ್ತಾರೆ ಬಟ್ ನಾವು ಒಳ್ಳೆ ಫ್ರೆಂಡ್ಸ್… ಎಂದು ಹೇಳುವ ಮೂಲಕ ಸಂಬಂಧಗಳ ಅನುಬಂಧ ವಜ್ರದಂತಿರಬೇಕು ಎಂದು ವಿಡಿಯೋ ಕೊನೆಗೊಳ್ಳುತ್ತದೆ. ಈ ನಡುವೆ ಉಂಗುರ ಫಿಟ್ ಆಗದೇ ಇದ್ದರೆ, ಅವಳನ್ನೇ ಕರೆದುಕೊಂಡು ಬರುತ್ತೇನೆ ಎನ್ನುತ್ತಾರೆ ವಿನಯ್.
ಪ್ರಶ್ನೆ ಏನು ಅಂದ್ರೆ.. ಆ ಅವಳು ಯಾರು..? ರಮ್ಯಾ ಕೈಗೆ ಹಾಕಿ ತೆಗೆದುಕೊಂಡ ರಿಂಗ್, ಅವಳಿಗೆ ಕೊಡ್ತಾರೆ ಅಂದ್ರೆ.. ಆ ಅವಳು ಯಾರು..? ಅವಳು ಯಾರು ಅನ್ನೋದು ರಮ್ಯಾಗೂ ಗೊತ್ತು. ಆ ಅವಳು ಯಾರು..? ಅವಳು ರೆಡಿ ಇದ್ದರೆ ಹೆಸರು ಹೇಳೋಕೇನು..?
ಈ ವಿಡಿಯೋ ವೈರಲ್ ಆಗಿದ್ದಕ್ಕೆ ಬೇರೆಯದ್ದೇ ಕಾರಣ ಇದೆ. ಇತ್ತೀಚೆಗಷ್ಟೇ ರಮ್ಯಾ ಮತ್ತು ವಿನಯ್ ಅವರ ಮಧ್ಯೆ ಡೇಟಿಂಗ್ ನಡೀತಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದ ರಮ್ಯಾ ʻವಿನಯ್ ನನಗೆ ತಮ್ಮ ಇದ್ದ ಹಾಗೆʼ ಎಂದು ಸ್ಪಷ್ಟನೆ ಕೊಟ್ಟಿದ್ದರು. ದೊಡ್ಮನೆಯವರ ಜೊತೆ ಇವತ್ತಿಗೂ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವ ರಮ್ಯಾ, ವಿನಯ್ ಜೊತೆ ಆಗಾಗ್ಗೆ ಸುತ್ತಾಡುತ್ತಲೇ ಇರುತ್ತಾರೆ. ಇದೀಗ ಬಂದಿರುವ ಸುದ್ದಿ ಏನು ಎಂದರೆ ವಿನಯ್ ಅವರು ಅವಳಿಗಾಗಿ ಒಂದು ರಿಂಗ್ ಸೆಲೆಕ್ಟ್ ಮಾಡಿದ್ದಾರೆ. ಆ ಅವಳು ಯಾರು ಎನ್ನುವುದೇ ಇಲ್ಲಿ ಸಸ್ಪೆನ್ಸ್.
ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳಲ್ಲಿ ವಿನಯ್ ಅವರೇ ದೊಡ್ಡವರು. ಯುವ ಚಿಕ್ಕವರು. ಹಾಗೆ ನೋಡಿದರೆ ಶಿವಣ್ಣ ಹಾಗೂ ಪುನೀತ್ ಇಬ್ಬರಿಗೂ ಇರುವುದು ಹೆಣ್ಣು ಮಕ್ಕಳೇ. ಸೊಸೆಯಂದಿರನ್ನು ಕರೆತರಬೇಕಿರುವುದು ರಾಘವೇಂದ್ರ. ರಾಘವೇಂದ್ರ ಅವರು ತಮ್ಮ ಮಗ ಯುವ ರಾಜ್ ಕುಮಾರ್ ಅವರಿಗೆ ಮದುವೆಯನ್ನೂ ಮಾಡಿದ್ದರು. ಅದೀಗ ಅದೀಗ ಡಿವೋರ್ಸ್ ಹಂತಕ್ಕೆ ಹೋಗಿದೆ. ವಿನಯ್, ಈಗಲೂ ಅವಿವಾಹಿತರೇ. ಹೀಗಾಗಿ.. ವಿನಯ್ ಮದುವೆ ಫಿಕ್ಸ್ ಆಯ್ತಾ.. ರಮ್ಯಾ ಮೇಡಂ.. ವಿನಯ್ ಮದುವೆ ಆಗ್ತಿರೋ ಹುಡುಗಿ ಯಾರು ಹೇಳಿ ಪ್ಲೀಸ್ ಎಂದು ಕೇಳ್ತಿದ್ದಾರೆ ಫ್ಯಾನ್ಸ್.



