ಫ್ಯಾಮಿಲಿ ವಿವಾದಗಳಿಗೆ ಅಭಿಮಾನಿಗಳು ಎಂಟ್ರಿ ಕೊಡಬಾರದು. ಅದು ಅವರ ಪರ್ಸನಲ್. ಆದರೆ ಇದು ದರ್ಶನ್ ವಿಚಾರದಲ್ಲಿ ಹಾಗಾಗುತ್ತಿಲ್ಲ. ದರ್ಶನ್ ಅಭಿಮಾನಿಗಳು ಕೌಟುಂಬಿಕ ವಿಷಯದಲ್ಲೂ ಬರುತ್ತಾರೆ. ರಿಯಾಕ್ಟ್ ಮಾಡ್ತಾರೆ. ಈಗಲೂ ಹಾಗೆಯೇ ಆಗಿದೆ. ಅದು ದರ್ಶನ್ ಅವರೇ ಕೊಟ್ಟಿರುವ ಸ್ವಾತಂತ್ರ್ಯವಾ.. ಅಥವಾ ಅಭಿಮಾನಿಗಳೇ ಪಡೆದುಕೊಂಡಿದ್ದಾ.. ಎರಡೂ ಅಲ್ಲ. ಅಭಿಮಾನಿಗಳ ಈ ಆಕ್ರೋಶವೂ ಸದ್ಯಕ್ಕೆ ಸೋಷಿಯಲ್ ಮೀಡಿಯಾಕ್ಕೇ ಸೀಮಿತ. ಇಷ್ಟಕ್ಕೂ ಇದು ಶುರುವಾಗಿದ್ದು ಹೀಗೆ..
ಗುರುವಾರ ಬೆಳಗ್ಗೆ ಕಾಟೇರ ಚಿತ್ರದ ಸಕ್ಸಸ್ ಮೀಟ್ ಇತ್ತು. ಇಡೀ ಚಿತ್ರತಂಡ ಪ್ರೆಸ್ʻಮೀಟ್ʻನಲ್ಲಿ ಭಾಗವಹಿಸಬೇಕಿತ್ತು. ಸುದ್ದಿಗೋಷ್ಠಿ ದಿಢೀರ್ ಎಂದು ರದ್ಧಾಯ್ತು. ಕಾರಣ ಹುಡುಕುತ್ತಾ ಹೋದರೆ.. ಮತ್ತದೇ ದರ್ಶನ್ ಅವರ ಕುಟುಂಬದಲ್ಲಿ ಶುರುವಾಗಿರುವ ಫ್ಯಾಮಿಲಿ ವಾರ್.
ಎಲ್ಲಿಂದ ಶುರುವಾಯ್ತು ಅನ್ನೋದನ್ನ ನೋಡೋದಾದ್ರೆ 24ನೇ ತಾರೀಕು ನಟಿ ಪವಿತ್ರ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ದರ್ಶನ್ ಜೊತೆಗೆ ತಾವು ಆಪ್ತವಾಗಿರುವ ಫೋಟೋಗಳ ವಿಡಿಯೋ ಹಂಚಿಕೊಂಡಿದ್ದರು. ಹಲವು ನಟಿಯರು ತಾವು ದರ್ಶನ್ ಜೊತೆಯಲ್ಲಿರುವ ಫೋಟೋ, ವಿಡಿಯೋ ಹಾಕಿಕೊಳ್ತಾರೆ. ಆದರೆ ಪವಿತ್ರ ಗೌಡ ಅವರ ವಿಡಿಯೋಗೆ ಕೆರಳಿದ ವಿಜಯಲಕ್ಷ್ಮಿ, ಕಾನೂನು ಕ್ರಮದ ಎಚ್ಚರಿಕೆ ಕೊಟ್ಟರು. ಅದಕ್ಕೆ ಕಾರಣ ಆ ಫೋಟೋ ಆಲ್ಬಮ್ಮಿನಲ್ಲಿ ಒಂದು ದಶಕ ಕಳೆಯಿತು, ನಮ್ಮ ಸಂಬಂಧಕ್ಕೆ 10 ವರ್ಷ ಅಂತಾ ಬರೆದುಕೊಂಡಿದ್ದ ಪವಿತ್ರಾ ಗೌಡ, ಇದು ಮುಂದುವರೆಯಲಿದೆ ಎಂದು ಕ್ಯಾಪ್ಷನ್ ಕೊಟ್ಟಿದ್ದರು.
ಪವಿತ್ರ ಗೌಡ ಪೋಸ್ಟ್ ಹಾಕಿದ ಒಂದು ಗಂಟೆಯಲ್ಲಿಯೇ ವಿಜಯಲಕ್ಷ್ಮೀ ದರ್ಶನ್ ಬೇರೊಬ್ಬರ ಗಂಡನ ಫೋಟೋವನ್ನು ಪೋಸ್ಟ್ ಮಾಡುವ ಮೊದಲು ಈಕೆಗೆ ಅರಿವಿರಬೇಕಿತ್ತು. ಇದು ಆಕೆಯ ವ್ಯಕ್ತಿತ್ವ ತೋರಿಸುತ್ತೆ ಎಂದೆಲ್ಲ ಬರೆದುಕೊಂಡಿದ್ದ ವಿಜಯಲಕ್ಷ್ಮಿ ಕಾನೂನು ಮೂಲಕ ತಕ್ಕ ಪಾಠ ಕಲಿಸುವ ಎಚ್ಚರಿಕೆ ಇತ್ತು.
ಇತ್ತ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರ ಪರ ನಿಂತಿದ್ದಾರೆ. ಸುದ್ದಿಗೋಷ್ಠಿ ನಡೆಸಿದರೆ ಆಗ ಸಹಜವಾಗಿಯೇ ಈ ಪ್ರಶ್ನೆಗಳೇ ತೂರಿಬರುತ್ತವೆ ಎಂಬ ಕಾರಣಕ್ಕೆ ಸುದ್ದಿಗೋಷ್ಠಿಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ ದರ್ಶನ್ ಅವರ ಅಭಿಮಾನಿಗಳು ಎನ್ನಿಸಿಕೊಂಡಿರೋವ್ರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ಧಾರೆ. ನಿಮ್ಮ ಜೊತೆಗೆ ನಾವಿದ್ದೇವೆ ವಿಜಿ ಅತ್ತಿಗೆ ಎಂದು ಕಾಮೆಂಟ್ ಹಾಕಿದ್ದಾರೆ. ಆ ಪೋಸ್ಟುಗಳಲ್ಲಿ ಕೆಲವಂತೂ
ಪವಿತ್ರ ಗೌಡ ಅವರನ್ನು ಇನ್ನೊಂದ್ಸಲ ನಿಮ್ಮ ತಂಟೆಗೆ ಬರದಂತೆ ರುಬ್ತೀವಿ,
ಚಪ್ಪಲಿಯಲ್ಲಿ ಹೊಡೆದಂತೆ ಪೆಟ್ಟು ಕೊಟ್ಟಿದ್ದೀರಿ..
ದರ್ಶನ್ ಅವರನ್ನ ಜೈಲಿಗೆ ಹಾಕ್ಸಿ..
ನಾನು ೨೪ ವರ್ಷದಿಂದ ಡಿ ಬಾಸ್ ಫ್ಯಾನ್. ಇದನ್ನೆಲ್ಲ ನೋಡ್ತಿದ್ದರೆ ಹಾಗೆ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ.
ಅನ್ನೋ ಫ್ಯಾನ್ಸ್ ಕೂಡಾ ಇದ್ದಾರೆ. ಏನೋ ಆಗಿದ್ದು ಆಗಿ ಹೋಯ್ತು. ಸ್ವಲ್ಪ ನೀವೇ ಹೊಂದಿಕೊಳ್ಳಿ. ಇದನ್ನೆಲ್ಲ ಸೀಕ್ರೆಟ್ ಆಗಿಟ್ಕೊಳ್ಳಿ. ಡಿ ಬಾಸ್ ಮರ್ಯಾದೆ ತೆಗೆಯೋದನ್ನೇ ಇಂಡಸ್ಟ್ರಿಯವರು ಕಾಯ್ತಿದ್ದಾರೆ. ಅದಕ್ಕೆ ಅವಕಾಶ ಕೊಡ್ಬೇಡಿ ಅಂತಾ ವಿಜಯಲಕ್ಷ್ಮಿಗೆ ಬುದ್ದಿವಾದ ಹೇಳೋವ್ರೂ ಇದ್ದಾರೆ.



