ದರ್ಶನ್ ಮತ್ತು ವಿಜಯಲಕ್ಷ್ಮಿ ಮ್ಯಾರೇಜ್ ಆನಿವರ್ಸರಿ ಆಚರಿಸಿಕೊಂಡಿದ್ದಾರೆ. ಆ ವಿವಾಹ ವಾರ್ಷಿಕೋತ್ಸವದ ಸಡಗರ ದೃಶ್ಯಗಳನ್ನು ನೋಡಿ ಅಭಿಮಾನಿಗಳು ರೋಮಾಂಚಿತರಾಗುತ್ತಿದ್ದಾರೆ. ದರ್ಶನ್ ಅವರನ್ನು ಅಣ್ಣಾ, ಡಿ ಬಾಸ್, ಯಜಮಾನ್ರು ಎಂದೆಲ್ಲ ಕರೆಯೋ ಅಭಿಮಾನಿಗಳು, ವಿಜಯಲಕ್ಷ್ಮಿ ಅವರನ್ನು ಮಾತ್ರ ಬಾಯ್ತುಂಬಾ ಅತ್ತಿಗೆ ಎಂದೇ ಕರೆಯುತ್ತಾರೆ. ಅಂತಹ ಅಭಿಮಾನಿಗಲಿಗೆ ದರ್ಶನ್ – ವಿಜಯಲಕ್ಷ್ಮೀ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ವಿಡಿಯೋ ನೋಡಿ, ಸಂಭ್ರಮಪಟ್ಟಿದ್ದರೆ ಆಶ್ಚರ್ಯವೇನೂ ಇಲ್ಲ. 22ನೇ ಮ್ಯಾರೇಜ್ ಆನಿವರ್ಸರಿ ಅದು.
ಆದರೆ ಈ ವಿಡಿಯೋ ನೋಡಿದವರಿಗೆ ಮತ್ತೆ ಮತ್ತೆ ನೆನಪಾಗುವುದು ಇದೇ ಜೋಡಿಯ 21ನೇ ವರ್ಷದ ಆನಿವರ್ಸರಿ ಸೆಲಬ್ರೇಷನ್. ಕಂಟಕ ಶುರುವಾಗಿದ್ದೇ ಅಲ್ಲಿಂದ. 2024ರಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಮದುವೆಯ ವಾರ್ಷಿಕೋತ್ಸವವನ್ನು ವಿದೇಶದಲ್ಲಿ ಸೆಲಬ್ರೇಟ್ ಮಾಡಿಕೊಂಡಿದ್ದರು. ಆ ವಿಡಿಯೋವನ್ನು ವಿಜಯಲಕ್ಷ್ಮಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅದು ವೈರಲ್ ಆಗಿತ್ತು.
ಹಾಗೆ ಆ ವಿಡಿಯೋ ವೈರಲ್ ಆಗಿದ್ದೇ ತಡ.. ಇತ್ತ ನಟಿ, ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ ಕೆರಳಿ ಹೋಗಿದ್ದರು. ಪವಿತ್ರ ಗೌಡ ಅವರು ಅಲ್ಲಿಂದಲೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಾಗೂ ದರ್ಶನ್ ಅವರ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದು, ವಿಜಯಲಕ್ಷ್ಮಿ ಆ ಪೋಸ್ಟಿಗೆ ಕೌಂಟರ್ ಕೊಟ್ಟಿದ್ದು.. ಎಲ್ಲವೂ ಶುರುವಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣ.. ಒಂದು ರೀತಿಯಲ್ಲಿ ಶುರುವಾಗಿದ್ದೇ ಅಲ್ಲಿಂದ. ದರ್ಶನ್ 2ನೇ ಬಾರಿಗೆ ಜೈಲಿಗೆ ಹೋಗುವುದಕ್ಕೆ ಕಾರಣವಾಗಿದ್ದೂ ಅದೇ. ಆದರೆ.. ಈ ಬಾರಿ ಹಾಗಾಗದಿರಲಿ.. ಮತ್ತೊಂದು ದುರಂತ, ಸಂಕಟ ಎದುರಾಗದೇ ಇರಲಿ ಎನ್ನುವುದು ಅಭಿಮಾನಿಗಳ ಹಾರೈಕೆ.
ಅಂದಹಾಗ್ 2003ರ ಮೇ 19 ರಂದು ಮದುವೆಯಾದ ವಿಜಯಲಕ್ಷ್ಮೀ ಹಾಗೂ ದರ್ಶನ್ ಅವರೀಗ ಮದುವೆಯಾಗಿತ್ತು. 22 ವರ್ಷದ ಹಿಂದೆ ಧರ್ಮಸ್ಥಳದ ವಸಂತ್ ಮಹಲ್‌ನಲ್ಲಿ ದರ್ಶನ್ – ವಿಜಯಲಕ್ಷ್ಮೀ ಮದುವೆಯಾಗಿದ್ದರು. 19-05-2003 ರಂದು ಬೆಳಗ್ಗೆ 9.10 ರಿಂದ 9.50 ರವರೆಗಿದ್ದ ಶುಭ ಮಿಥುನ ಲಗ್ನದಲ್ಲಿ ನಡೆದಿದ್ದ ಮದುವೆ ಅದು.
ಮ್ಯಾರೇಜ್ ಆನಿವರ್ಸರಿ ಪ್ರಯುಕ್ತ ಪತ್ನಿ ವಿಜಯಲಕ್ಷ್ಮಿಗಾಗಿ ಬಾಲಿವುಡ್‌ನ ʻಬಾಬಿʼ ಚಿತ್ರದ ಎವರ್ ಗ್ರೀನ್ ಸಾಂಗ್ ‘ಮೇ ಶಾಯರ್ ತೋ ನಹೀ’ ಹಾಡು, ದರ್ಶನ್ ಅಭಿನಯಿಸಿದ್ದ ʻಲಂಕೇಶ್ ಪತ್ರಿಕೆʼ ಚಿತ್ರದ ಎಂದೋ ಕಂಡ ಕನಸು.., ವಾಮನ ಚಿತ್ರದ ಮುದ್ದು ಮುದ್ದು ರಾಕ್ಷಸಿ.. ಹೀಗೆ ಹಲವು ಹಾಡುಗಳನ್ನು ಹಾಡಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಜೊತೆಗೆ ರೊಮ್ಯಾಂಟಿಕ್ ಆಗಿ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮೀ ಜೊತೆಯಾಗಿ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ.
ಈಗ 21ನೇ ಮ್ಯಾರೇಜ್ ಆನಿವರ್ಸರಿಯ ಸವಿ ನೆನಪುಗಳು ಹಾಗೂ ಕಹಿ ನೆನಪುಗಳೂ ಕಾಡುತ್ತಿವೆ. ಏಕೆಂದರೆ ಆಗಲೂ ದರ್ಶನ್ ಮತ್ತು ವಿಜಯಲಕ್ಷ್ಮಿ ಜೋಡಿ ಮ್ಯಾರೇಜ್ ಆನಿವರ್ಸರಿ ಸೆಲಬ್ರೇಟ್ ಮಾಡಿತ್ತು. ಅದು ಮರುಕಳಿಸದೇ ಇರಲಿ.. ಈ ಬಾರಿಯ ಸಂಭ್ರಮದ ಮೇಲೆ ಕಾಗೆ ಕಣ್ಣು ಗೂಬೆ ಕಣ್ಣು ಪವಿತ್ರಾ ಕಣ್ಣು ಬೀಳದೇ ಇರಲಿ ಎನ್ನುತ್ತಿದ್ದಾರೆ ಫ್ಯಾನ್ಸ್.