ನಾಲ್ಕನೇ ಕ್ಲಾಸಿಗೆ ಏಕ್`ದಂ ಎಂಟ್ರಿ. ಅದಕ್ಕೂ ಮುನ್ನ ಕುರಿ, ದನ ಕಾಯುತ್ತಿದ್ದ ಹುಡುಗ. ಮೇಷ್ಟರೊಬ್ಬರ ಕೃಪೆಗೆ ಬಿದ್ದ, ವಿದ್ಯೆ ತಲೆಗೆ ಹತ್ತಿತು. ಓದಿ ಓದಿ ಲಾಯರ್ ಆದ(Siddaramaiah). ನಂಜುಂಡಸ್ವಾಮಿ (Prof.Nanunada Swamy) ಪರಿಚಯವಾಯ್ತು. ರೈತ ಹೋರಾಟಗಾರನಾದ. ಅಲ್ಲಿಂದಲೇ ರಾಮಕೃಷ್ಣ ಹೆಗಡೆಯವರ (Ramakrishna Hegade) ಕಣ್ಣಿಗೆ ಬಿದ್ದು, ರಾಜಕೀಯಕ್ಕೆ ಬಂದು ಶಾಸಕನಾಗಿದ್ದೂ ಆಯ್ತು. ಸಮಾಜವಾದಿ..ಜನತಾದಳ.. ಜಾತ್ಯತೀತ ಜನತಾದಳ.. ಕೊನೆಗೆ ದೇವೇಗೌಡರನ್ನು ಎದುರು ಹಾಕಿಕೊಂಡು ಕಾಂಗ್ರೆಸ್ಸಿಗೆ ಬಂದವರು, ಈಗ ಎರಡನೇ ಬಾರಿ ಸಿಎಂ ಆಗಿದ್ದಾರೆ.
ದೇವರಲ್ಲಿ ವಿಶೇಷ ನಂಬಿಕೆಗಳಿಲ್ಲ. ಆದರೆ ಹೆಂಡತಿ ಕರೆದುಕೊಂಡು ಹೋದರೆ ಹೋಗ್ತಾರೆ. ಸಿಎಂ ಆಗಿದ್ದಾಗ ಒಬ್ಬ ಮಗನನ್ನು ಕಳೆದುಕೊಂಡ ಸಿದ್ದರಾಮಯ್ಯ ಅವರಿಗೆ ಈಗ ಇರುವ ವಾರಸುದಾರ ಮತ್ತು ಭರವಸೆ ಡಾ.ಯತೀಂದ್ರ ರಾಮಯ್ಯ ಮಾತ್ರ. ರಾಕೇಶ್ ಅವರ ಮಕ್ಕಳನ್ನೂ ನೋಡಿಕೊಳ್ಳುತ್ತಿರುವ ಸಿದ್ದರಾಮಯ್ಯ, (Siddaramaiah) ಅದಾಗಲೇ ಮೊಮ್ಮಗನನ್ನು ಉತ್ತರಾದಿಕಾರಿ ಮಾಡುವ ಉತ್ಸಾಹದಲ್ಲಿದ್ದಾರೆ. ಬಡತನ.. ಹೋರಾಟ.. ಸಾಧನೆ.. ನೋವುಗಳು.. ಎಲ್ಲವೂ ಇರುವ ಸಿದ್ದರಾಮಯ್ಯನವರ (Siddaramaiah) ಲೈಫ್ ಒಂದು (Siddaramaiah Biopic) ಬಯೋಪಿಕ್`ಗೆ ಬೇಕಾಗುವ ಎಲ್ಲ ಸರಕುಗಳನ್ನೂ ಇಟ್ಟುಕೊಂಡಿದೆ. ಹೀಗಾಗಿಯೇ.. ಸಿದ್ದರಾಮಯ್ಯ ಲೈಫ್ ಸ್ಟೋರಿ ಸಿನಿಮಾ (Siddaramaiah life story cinema) ಆಗುತ್ತಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ಅವರ ಬಯೋಪಿಕ್ ಲೀಡರ್ ರಾಮಯ್ಯಗೆ ಕಳೆದ 7-8 ತಿಂಗಳಿನಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸತ್ಯ ರತ್ನಂ ಡೈರೆಕ್ಟರ್ ಆಗಿದ್ದು, ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಸಿನಿಮಾ ಮಾಡುವ ಸಿದ್ಧತೆ ನಡೆಯುತ್ತಿದೆ. ಎರಡು ಭಾಗಗಳಲ್ಲಿ ಸಿನಿಮಾ ಬರಲಿದ್ದು, ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ. ಪ್ಟ್ ಕೇಳಿ ಓಕೆ ಎಂದಿರುವ ವಿಜಯ್ ಸೇತುಪತಿ, (Vijay Sethupathi) ಸದ್ಯ ಸಖತ್ ಬ್ಯುಸಿ ಇದ್ದಾರೆ. ಹಾಗಾಗಿ, ಅವರ ಡೇಟ್ಸ್ ಇನ್ನೂ ಫೈನಲ್ ಆಗಿಲ್ಲ ಎನ್ನಲಾಗಿದೆ. ಹಾಗಾಗಿ, ಅವರ ಡೇಟ್ಸ್ಗೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ಶೂಟಿಂಗ್ ಮಾಡಲು ನಿರ್ಮಾಪಕರು ರೆಡಿ ಇದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ.
ಪಾರ್ಟ್ 1ರಲ್ಲಿ ಸಿದ್ದರಾಮಯ್ಯ ಅವರ ಬಾಲ್ಯ ಮತ್ತು ಯೌವ್ವನದ ದಿನಗಳವರೆಗೆ ತೋರಿಸಲಾಗುತ್ತದೆ. ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ನಂಜುಂಡಸ್ವಾಮಿ ಅವರ ಜೊತೆಗಿನ ಹೋರಾಟಗಳು, ಲಾಯರ್ ಆಗಿ ಕೆಲಸ ಮಾಡುತ್ತಿದ್ದ ವಿವರಗಳೆಲ್ಲ ಮೊದಲ ಭಾಗದಲ್ಲಿ ಬರಲಿವೆ. ಆ ಪಾತ್ರವನ್ನು ಯಾರು ಮಾಡಬಹುದು ಎಂಬುದು ಫೈನಲ್ ಆಗಿಲ್ಲ.
ಹಿರಿಯ ರಾಮಯ್ಯ ಪಾತ್ರಕ್ಕೆ ಅಂದರೆ ಲಾಯರ್ ಸೇರಿದಂತೆ ನಂತರದ ಕಥೆಗೆ ವಿಜಯ್ ಸೇತುಪತಿ (Vijay Sethupathi) ಎಂಟ್ರಿಯಾಗಲಿದೆ. ಹಯತ್ ಪೀರ ಮತ್ತು ಚನ್ನಪ್ಪ ಹಲಳ್ಳಿ ನಿರ್ಮಾಣ ಮಾಡಲಿರುವ ಲೀಡರ್ ರಾಮಯ್ಯ ಚಿತ್ರಕ್ಕೆ ಗಾಯಕ ಶಶಾಂಕ್ ಶೇಷಗಿರಿ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.



