ಧರ್ಮಸ್ಥಳದಲ್ಲಿ ಸಾಮೂಹಿಕವಾಗಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಅನಾಮಿಕನ ಹೇಳಿಕೆ ಮೇಲೆ ಒಂದು ಎಸ್‌ಐಟಿ ಟೀಂ ರಚನೆಯಾಗಿದೆ. ಅದಕ್ಕೆ ಐಪಿಎಸ್ ಅಧಿಕಾರಿಗಳು, ಫೊರೆನ್ಸಿಕ್ ತಜ್ಞರು, ಸುಮಾರು 200 ಪೊಲೀಸ್ ಪೇದೆಗಳ ತಂಡ.. ಎಲ್ಲವೂ ರಚನೆಯಾಗಿ.. ಹಗಲೂ ಇರುಳೂ ಕೆಲಸ ಮಾಡ್ತಾ ಇದೆ.
ಅಂದಹಾಗೆ ಧರ್ಮಸ್ಥಳ ವಿರೋಧಿ ಹೋರಾಟದಲ್ಲಿ ಇರುವವರು ತಿಮ್ಮರೋಡಿ, ಮಟ್ಟಣ್ಣವರ್, ಬಾಲನ್, ವಿಮಲಾ, ಸಮೀರ್.. ಮೊದಲಾದವರು. ಬಹುತೇಕ ಕಮ್ಯುನಿಸ್ಟರು. ಚಿತ್ರರಂಗದಲ್ಲಿ ಅಹಿಂಸಾ ಚೇತನ್, ಪ್ರಕಾಶ್ ರಾಜ್ ಅವರಿದ್ದಾರೆ. ಇತ್ತ ಧರ್ಮಸ್ಥಳ ಪರವಾಗಿ ನಿಂತಿರುವವರಲ್ಲಿ ನಟರೂ ಆಗಿರುವ ಕಿರಿಕ್ ಕೀರ್ತಿ, ವಸಂತ ಗಿಳಿಯಾರ್ ಮೊದಲಾದವರಿದ್ದಾರೆ. ಇನ್ನು ರಾಜಕೀಯವಾಗಿ ಪ್ರಕರಣ ಇಂಟ್ರೆಸ್ಟಿಂಗ್ ಆಗುತ್ತಿದೆ.
ಕಾಂಗ್ರೆಸ್ಸಿನಲ್ಲಿ ಹೆಗ್ಗಡೆ ಪರ ಇರುವವರು :
ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿ ನಾಯಕ ಎಂದೆನಿಸಿಕೊಂಡಿರುವ ಜನಾರ್ದನ ಪೂಜಾರಿಯವರೇ ʻʻಮನುಷ್ಯ ಸತ್ತ ನಂತರ ದೇಹವನ್ನು ದೇವಸ್ಥಾನದ ವಠಾರಗಳಲ್ಲಿ ಹೂಳುವುದು ಭಾರತದ ಸಂಸ್ಕೃತಿ. ಮುಸ್ಲಿಮರೇ ನಿಮ್ಮ ಮಸೀದಿಯಲ್ಲಿ, ಕ್ರೈಸ್ತರೇ ನಿಮ್ಮ ಚರ್ಚ್‌ನಲ್ಲಿ ಶವಗಳನ್ನು ಹೂತಿಟ್ಟಿಲ್ಲವೇ?. ಸಿದ್ದರಾಮಯ್ಯನವರೇ, ಧರ್ಮಸ್ಥಳದ ಹೆಸರನ್ನು ಹಾಳು ಮಾಡುತ್ತಿರುವಾಗ ನೀವೇನು ಮಾಡುತ್ತಿದ್ದೀರಿ? ವೀರೇಂದ್ರ ಹೆಗ್ಗಡೆಯವರೇ, ನೀವು ಹೆದರಬೇಡಿ, ಇದನ್ನು ಧೈರ್ಯವಾಗಿ ಎದುರಿಸಿ, ನಿಮ್ಮ ಜೊತೆ ನಾನು, ಕುದ್ರೋಳಿ ದೇವಸ್ಥಾನ ಇದೆ. ಧರ್ಮಸ್ಥಳವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.. ಮೋದಿಯವರೇ, ನೀವು, ನಿಮ್ಮ ಸರ್ಕಾರ ಏನು ಮಾಡುತ್ತಿದೆ?. ಧರ್ಮಸ್ಥಳಕ್ಕೆ ಬಂದು ಅಲ್ಲಿ ನಿಂತು ಭಾಷಣ ಮಾಡಿ.. ಎಂದು ಗುಡುಗಿದ್ದಾರೆ.
ಇನ್ನು ಮತ್ತೊಬ್ಬ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಅವರುʻʻಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಜನಪರ ಕೆಲಸ ಮಾಡುತ್ತ ಬಂದಿದ್ದಾರೆ. ಸರ್ಕಾರ ಮಾಡುವ ಕೆಲಸ ಸ್ವಹಿತಾಸಕ್ತಿಯಿಂದ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ನಡೆಯುತ್ತಿದೆ. ಆರೋಪ ಮಾಡಿದವರು ತೋರಿಸಿದ ಜಾಗದಲ್ಲಿ ಏನು ಸಿಕ್ಕಿಲ್ಲ. ಯಾವುದೇ ಶವ ಆಗಲಿ, ಅವಶೇಷವಾಗಲಿ ಸಿಕ್ಕಿಲ್ಲ. ಇದರ ಹಿಂದೆ ಏನೋ ಪಿತೂರಿ ಇದೆ ಅಂತಾ ಗೊತ್ತಾಗುತ್ತಿದೆ. ದಯಮಾಡಿ ಸರ್ಕಾರ ಈ ಬಗ್ಗೆ ಪರಿಶೀಲನೆ ಮಾಡಬೇಕು. ಧರ್ಮಸ್ಥಳ ರಾಜ್ಯದ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಪಿತೂರಿ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕುʼʼ ಎಂದು ಆಗ್ರಹಿಸಿದ್ಧಾರೆ.
ಸಚಿವ ದಿನೇಶ್ ಗುಂಡೂರಾವ್ ಅವರು ʻಕಮ್ಯುನಿಸ್ಟರ ಎಡಪಂಥದವರ ಒತ್ತಡದಿಂದಾಗಿ ಎಸ್‌ಐಟಿ ರಚನೆ ಮಾಡಬೇಕಾಯಿತುʼ ಎಂದು ಹೇಳಿ ಪರೋಕ್ಷವಾಗಿ ಧರ್ಮಸ್ಥಳ ಪರ ನಿಂತಿದ್ದಾರೆ. ಡಿಕೆ ಶಿವಕುಮಾರ್ ಅವರು ಧರ್ಮಸ್ಥಳದ ಜೊತೆ ನಾನಿದ್ದೇನೆ ಎಂದಿದ್ದಾರೆ. ಆದರೆ.. ಎಸ್‌ಐಟಿ ತನಿಖೆ ಆಗಲಿ ಬಿಡಿ ಎಂದಿದ್ದಾರೆ. ಸಿಎಂ ಸಿದ್ಧರಾಮಯ್ಯ, ಹೋಮ್ ಮಿನಿಸ್ಟರ್ ಪರಮೇಶ್ವರ್ ನಿಲುವು ಗೊತ್ತಾಗುತ್ತಿಲ್ಲ. ಅಷ್ಟೇ.
ಆದರೆ.. ಬಿಜೆಪಿಯಲ್ಲಿ ಗೊಂದಲಗಳಿಲ್ಲ.ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಸುನಿಲ್ ಕುಮಾರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಟಿ ರವಿ, ಪ್ರತಾಪ್ ಸಿಂಹ, ಅಶ್ವತ್ಥ್ ನಾರಾಯಣ್, ಯಡಿಯೂರಪ್ಪ.. ಹಾಗೂ ಮಲೆನಾಡು, ಕರಾವಳಿ ಭಾಗದ ಬಹುತೇಕ ನಾಯಕರು ಬಹಿರಂಗವಾಗಿಯೇ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಯಿಂದ ಹೊರದಬ್ಬಿಸಿಕೊಂಡಿರುವ ಯತ್ನಾಳ್, ಈಶ್ವರಪ್ಪನವರೂ ಧರ್ಮಸ್ಥಳ ಪರ ಇದ್ದಾರೆ.
ಜೈನ ಮುನಿಗಳಾದ ಗುಣಧರನಂದಿ, ಸಿದ್ಧಸೇನ ಮುನಿಶ್ರೀ ಮೊದಲಾದವರು, ವಿಶ್ವ ಹಿಂದೂ ಪರಿಷತ್ ಕೂಡಾ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ಪರ ನಿಂತು ಬೆಂಬಲ ಘೋಷಿಸಿ ಆಗಿದೆ.



