ವೇದ, ಉಪನಿಷತ್ತು, ಭಗವದ್ಗೀತೆಗಳಲ್ಲಿ ಬ್ರಹ್ಮಾಂಡ ರಹಸ್ಯವೇ ಅಡಗಿದೆ. ಪುರಾತನ ಸಂಸ್ಕತ ಗ್ರಂಥಗಳಲ್ಲಿ ಎಲ್ಲ ವಿಜ್ಞಾನದ ರಹಸ್ಯಗಳೂ ಇದ್ದವು. ಅವುಗಳು ನಮಗೆ ಗೊತ್ತಿಲ್ಲದಂತೆ ವಿದೇಶಕ್ಕೆ ರವಾನೆಯಾಗಿವೆ ಎನ್ನುವುದು ಒಂದು ಆರೋಪ. ಅದಕ್ಕೆ ತಕ್ಕಂತೆ ಹಲವು ವಿಜ್ಞಾನಿಗಳು ಸಂಸ್ಕøತ ಗ್ರಂಥಗಳಿಂದ ಪ್ರೇರೇಪಣೆಗೊಂಡಿದ್ದನ್ನು ಹೇಳಿಕೊಂಡಿದ್ದರು. (Albert Inesteen) ಆಲ್ಬರ್ಟ್ ಐನ್`ಸ್ಟೈನ್, ಅಪನ್`ಹೈಮರ್ (oppenheimer) ಸೇರಿದಂತೆ ಹಲವರು ಭಗವದ್ಗೀತೆ, ವೇದ, ಉಪನಿಷತ್`ಗಳನ್ನು ಓದಿಕೊಂಡಿದ್ದರು ಎಂದರೆ ಊಹೆ ಮಾಡಿಕೊಳ್ಳಿ. ಅಂತಹುದ್ದೇ ಒಬ್ಬ ವಿಜ್ಞಾನಿ, ಜೆ ರಾಬರ್ಟ್ ಅಪನ್`ಹೈಮರ್. (oppenheimer)
ಈತನ ಹೆಸರು ಬಹುತೇಕರಿಗೆ ಗೊತ್ತಿಲ್ಲದೇ ಇರಬಹುದು. ಆದರೆ ಹಿರೋಷಿಮಾ ಮತ್ತು ನಾಗಸಾಕಿ ದುರಂತ ಎಂದರೆ ನೆನಪಾಗಬೇಕಾದವನೇ ಈ ಅಪನ್`ಹೈಮರ್. ಈತನ ಜೀವನಕಥೆ ಈಗ ಚಿತ್ರವಾಗಿ ಬರುತ್ತಿದೆ. ಈತ ಸೃಷ್ಟಿಸಿದ ಅಣುಬಾಂಬ್ ಸೃಷ್ಟಿಸಿದ ವಿಧ್ವಂಸವಿದೆಯಲ್ಲ, ಅದನ್ನು ಜಗತ್ತು ಮರೆಯುವುದಕ್ಕೆ ಸಾಧ್ಯವೇ ಇಲ್ಲ.
1945 ರ ಜುಲೈ ತಿಂಗಳಲ್ಲಿ ಅಮೆರಿಕದ ಅಣುವಿಜ್ಞಾನಿ ಜೆ ರಾಬರ್ಟ್ ಅಪನ್`ಹೈಮರ್ ನಾನೇ ಮರಣ, ನಾನೇ ಜಗತ್ ಸಂಹಾರಿ ಭಗವದ್ಗೀತೆಯಲ್ಲಿನ ಸಾಲನ್ನು 1945 ರ ಜುಲೈ ತಿಂಗಳಲ್ಲಿ ಹೇಳಿದ್ದ. ಸಂಸ್ಕøತ ವಿದ್ವಾಂಸನೂ ಆಗಿದ್ದ ರಾಬರ್ಟ್ ಅಪನ್`ಹೈಮರ್, ಸಂಸ್ಕøತ ಗ್ರಂಥಗಳಿಂದಲೇ ಪರಮಾಣು ಬಾಂಬ್ ಥಿಯರಿ ತಿಳಿದುಕೊಂಡ ಎಂಬ ಕಥೆಗಳೂ ಇವೆ. ಅಣು ಬಾಂಬ್ ಪ್ರಯೋಗಾತ್ಮಕ ಪರೀಕ್ಷೆಯನ್ನು ಕಣ್ಣಾರೆ ಕಂಡು ಅದು ಸೃಷ್ಟಿಸಬಹುದಾದ ವಿನಾಶದ ಕುರಿತು ಆಪನ್ಹೈಮರ್ ಅಂದು ಭಗವದ್ಗೀತೆಯ ಕಾಲೋಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ ಋತೇಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇವಸ್ಥಿತಾಃ ಪ್ರತ್ಯನೀಕೇಷು ಯೋಧಾಃ” ಶ್ಲೋಕವನ್ನು ಸರಳವಾಗಿ ನಾನೇ ಮರಣ, ನಾನೇ ಲೋಕ ಸಂಹಾರಿ ಎಂದಿದ್ದ.
ಹೀರೋ, ವಿಲನ್ ಎರಡೂ ಆಗಿರುವ ಅಪರ್`ಹೈಮನ್ ಬಗ್ಗೆ ಒಂದು ಸಿನಿಮಾ ಬರುತ್ತಿದೆ.
ಡೈರೆಕ್ಟರ್ ಕ್ರಿಸ್ಟೋಫರ್ ನೋಲನ್ ಅಪರ್`ಹೈಮನ್ ಅಣುಬಾಂಬ್ ಸಂಶೋಧಿಸಿ, ಅದರ ಪರೀಕ್ಷಾತ್ಮಕ ಪ್ರಯೋಗ ಮಾಡಿದ ಘಟನೆಯನ್ನು ತೆರೆಗೆ ತಂದಿದ್ದಾರೆ. ಸಿನಿಮಾದಲ್ಲಿ ಅಣುಬಾಂಬ್ ತಯಾರಿಸುವ ಅವಶ್ಯಕತೆ ನಿರ್ಮಾಣವಾಗಿದ್ದು ಹೇಗೆ? ವಿನಾಶಕಾರಿ ಅಣುಬಾಂಬ್ ನಿರ್ಮಾಣದ ಅವಶ್ಯಕತೆ, ಬಾಂಬ್ ತಯಾರಿಕೆಯಲ್ಲಿ ಎದುರಾದ ಸಂಕಷ್ಟ, ಅಪರ್`ಹೈಮನ್ ಹಾಗೂ ಅವರ ಸುತ್ತಲೂ ಇದ್ದವರ ಮನಸ್ಥಿತಿ, ಪ್ರಯೋಗದ ಬಳಿಕ ಮನಸ್ಥಿತಿ, ಎದುರಿಸಬೇಕಾದ ವಿಮರ್ಶೆ ಇನ್ನಿತರೆ ಅಂಶಗಳನ್ನು ನೋಲನ್ ತಮ್ಮ ಸಿನಿಮಾದಲ್ಲಿ ತೋರಿಸಿದ್ದಾರಂತೆ.
ವಿಜ್ಞಾನಿ ಅಪನ್`ಹೈಮರ್ ಭಗವದ್ಗೀತೆಯನ್ನು ಮಾತ್ರವೇ ಅಲ್ಲದೆ ಶಾಸ್ತ್ರಗಳ, ಉಪನಿಷತ್ತುಗಳ ಅಧ್ಯಯನ ಮಾಡಿದ್ದರು. ಅಪನ್`ಹೈಮರ್ ಪಾತ್ರಕ್ಕೆ ತಯಾರಾಗುವ ಹಂತದಲ್ಲಿ ಅಪನ್`ಹೈಮರ್ ಪಾತ್ರದಲ್ಲಿ ನಟಿಸಿರುವ ಸಿಲಿಯಾನ್ ಮರ್ಫಿ ಸಹ ಭಗವದ್ಗೀತೆಯನ್ನು ಓದಿಕೊಂಡೆ ಎಂದು ಹೇಳಿದ್ದರು. ಸಿನಿಮಾ ಜುಲೈ 21ಕ್ಕೆ ತೆರೆಗೆ ಬರುತ್ತಿದೆ. ಸಂಸ್ಕøತ ಎಂದರೆ ಪೂಜಾರಿಗಳ ಭಾಷೆ ಎಂದು ಲೇವಡಿ ಮಾಡುವವರು ಒಮ್ಮೆ ಈ ಚಿತ್ರವನ್ನು ನೋಡಬೇಕು. ಸಂಸ್ಕøತವನ್ನು ಪ್ರೀತಿಸುವವರೂ ಈ ಚಿತ್ರವನ್ನೊಮ್ಮೆ ನೋಡಬೇಕು.
ಅಂದ ಹಾಗೆ ಹನುಮಚಾಲೀಸದಲ್ಲಿ ನವಗ್ರಹಗಳನ್ನೂ ಸೇರಿದಂತೆ ಸೌರಮಂಡಲವನ್ನೇ ವಿವರಿಸಿರುವ ನಮ್ಮ ಧಾರ್ಮಿಕ ಗ್ರಂಥಗಳಲ್ಲಿ ಹಲವು ನಮ್ಮ ದೇಶದಲ್ಲಿ ಇಲ್ಲ. ಕೆಲವು ಗ್ರಂಥಗಳನ್ನು ಮುಸ್ಲಿಂ ದಾಳಿಕೋರರು ಸುಟ್ಟು ಹಾಕಿದ್ದಾರೆ. ನಳಂದ ವಿವಿಯ ಗ್ರಂಥಗಳ ನಾಶವನ್ನು ಇತಿಹಾಸ ಬೆಚ್ಚಿ ಬಿದ್ದು ನೋಡಿದೆ. ಇಂತಹ ಇನ್ನೂ ಅದೆಷ್ಟು ಗ್ರಂಥಗಳು ಸರ್ವನಾಶವಾಗಿವೆಯೋ..



