ಡಾ.ರಾಜ್ (Dr.Raj kumar) ಕುಟುಂಬಕ್ಕೂ ವಾಟಾಳ್ ನಾಗರಾಜ್ ಅವರಿಗೂ ಬೇರೆಯದೇ ಆದ ನಂಟಿದೆ. ಡಾ.ರಾಜ್ ಅವರು ಹೇಗೆ ಕನ್ನಡದ ಕಿರೀಟವೋ.. ಹಾಗೆಯೇ ವಾಟಾಳ್ ನಾಗರಾಜ್ (Vataal Nagaraj) ಕೂಡಾ. ಕನ್ನಡ ಚಿತ್ರರಂಗವನ್ನು ಮದ್ರಾಸ್`ನಿಂದ (Madras) ಕರ್ನಾಟಕಕ್ಕೆ (Karnataka) ತರುವ ಡಾ.ರಾಜ್ ಅವರ ಸ್ವಾಭಿಮಾನದ ಹೋರಾಟದಲ್ಲಿ ವಾಟಾಳ್ ಕೂಡಾ ನೆರವಾಗಿದ್ದರು. ಡಾ.ರಾಜ್ (Dr.Raj kumar), ನರಸಿಂಹರಾಜು (Narasimha Raju), ಲೀಲಾವತಿ(Leelavathi), ಬಾಲಕೃಷ್ಣ(Balakrsihna), ಎಂವಿ ರಾಜಮ್ಮ(MV Rajamma) , ಬಿ.ಆರ್.ಪಂತುಲು (BR Panthulu) ನಿರ್ಮಾಪಕರಾಗಿದ್ದ ಸಿನಿಮಾ ರಣಧೀರ ಕಂಠೀರವ (Ranadheera Kanteerava) ನೆನಪಿದೆಯಾ.. ಆಗ ಪಾರ್ವತಮ್ಮ ರಾಜ್`ಕುಮಾರ್ (Dr.Parvathamma Raj kumar) ಸಾಹಸದಿಂದ, ಎಲ್ಲರನ್ನೂ ಒಟ್ಟುಗೂಡಿಸಿ ನಾಟಕದಿಂದ ಬಂದ ಸಂಪಾದನೆಯನ್ನೆಲ್ಲ ಸುರಿದು ಸಿನಿಮಾ ಮಾಡಿದ್ದರು.
ಕರ್ನಾಟಕದಲ್ಲಿಯೇ ನಿರ್ಮಾಣವಾದ ಮೊದಲ ಕನ್ನಡ ಸಿನಿಮಾ ಅದು. ಆ ಚಿತ್ರಕ್ಕೆ ಥಿಯೇಟರ್ ಸಿಕ್ಕಿರಲಿಲ್ಲ. ಬೆಂಗಳೂರಿನಲ್ಲಿ ರಿಲೀಸ್ ಆಗಲಿಲ್ಲ. ಮೈಸೂರಿನ ಭಾರತ್ ಥಿಯೇಟರಿನಲ್ಲಿ 100 ದಿನ ಓಡಿತ್ತು (ಆ ಥಿಯೇಟರ್ ಈಗಿಲ್ಲ) ಒಂದೆರಡು ವಾರದ ನಂತರ ಬೆಂಗಳೂರಿನಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ವಾಟಾಳ್ ನಾಗರಾಜ್ ಸಹಾಯ ಮಾಡಿದ್ದರು. ಡಾ.ರಾಜ್ ಅವರೊಂದಿಗೆ ಗೋಕಾಕ್ ಚಳವಳಿಯಲ್ಲೂ ಇದ್ದವರು ವಾಟಾಳ್. ಅಂತಹ ವಾಟಾಳ್ ನಾಗರಾಜ್, ಶಿವಣ್ಣ(Dr.Shiva Raj kumar) ವಿರುದ್ಧ ಮಾತನಾಡಿದರು ಎಂದರೆ ಅಚ್ಚರಿಯಾಗುವುದು ಸಹಜ. ಆದರೆ ಅದು ನಿಜ. ಅದಕ್ಕೆ ಕಾರಣ ಜೈಲರ್ ಸಿನಿಮಾ ಮತ್ತು ಶಿವಣ್ಣ ನಟನೆ.
ರಜನಿಕಾಂತ್ ಕನ್ನಡ ದ್ರೋಹಿ, ಕಾವೇರಿ ವಿಚಾರದಲ್ಲಿ ರಾಜ್ಯದ ವಿರುದ್ಧ ಮಾತನಾಡಿದ್ರು, ಅಂತವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆ ಮಾಡಿದ್ದು ಸರಿಯಲ್ಲ. ‘ಜೈಲರ್’ (Jailor) ಸಿನಿಮಾದಲ್ಲಿ ಶಿವರಾಜ್ಕುಮಾರ್ ಈ ಸಿನಿಮಾದಲ್ಲಿ ನಟಿಸುವ ಮುನ್ನ ಯೋಚನೆ ಮಾಡಬೇಕಿತ್ತು ಇದು ವಾಟಾಳ್ ನಾಗರಾಜ್ ಹೇಳಿಕೆ.
ಜೈಲರ್’ ಚಿತ್ರ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕಿಂತ ದೊಡ್ಡ ಮಟ್ಟದಲ್ಲಿ ರಾಜ್ಯದಲ್ಲಿ ಬಿಡುಗಡೆಯಾಗಿದೆ. ಇದರಿಂದ ಕನ್ನಡ ಸಿನಿಮಾಗಳಿಗೆ ಸಮಸ್ಯೆ ಆಗಲಿದೆ ಎಂದಿರುವ ವಾಟಾಳ್, ಶಿವಣ್ಣ ಆ ಸಿನಿಮಾದಲ್ಲಿ ಒಪ್ಪುವ ನಿರ್ಧಾರ ಅಲ್ಲ ಎಂದಿದ್ದಾರೆ.
ಶಿವರಾಜ್ಕುಮಾರ್ 125ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ತಮಿಳಿನಲ್ಲಿ ರಜನಿಕಾಂತ್ ಜೊತೆ ಆಕ್ಟ್ ಮಾಡಿದ್ದಾರೆ. ಅವರು ಮಾಡಿರುವ ನರಸಿಂಹ ಪಾತ್ರ ಜನರಿಗೆ ಇಷ್ಟವಾಗಿದೆ. ಕ್ಲೈಮ್ಯಾಕ್ಸ್ನಲ್ಲಿ ಅವರು ಕಾಣಿಸಿಕೊಳ್ಳುವ ರೀತಿಗೆ ಜನರು ಭೇಷ್ ಎಂದಿದ್ದಾರೆ. ಜೈಲರ್’ ಸಿನಿಮಾ ಭಾರತದಲ್ಲಿ ಮೊದಲ ದಿನ 50+ ಕೋಟಿ ರೂಪಾಯಿ ಬಾಚಿಕೊಂಡಿದೆ. ಆದರೆ ವಾಟಾಳ್ ನಾಗರಾಜ್ ಮಾತ್ರ, ಕನ್ನಡಿಗರಾಗಿ ಶಿವಣ್ಣ ಈ ಸಿನಿಮಾದಲ್ಲಿ ನಟಿಸಬಾರದಿತ್ತು ಎಂದಿರುವುದು ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಆದರೆ ವಾಟಾಳ್ ಇರುವುದೇ ಹೀಗೆ. ಕನ್ನಡದ ವಿಷಯದಲ್ಲಿ ಯಾರು ಏನೇ ಎನ್ನಲಿ, ವಿರೋಧಿಸಲಿ, ಟೀಕೆ ಮಾಡಲಿ.. ಬೈಗುಳಗಳ ಸುರಿಮಳೆಯನ್ನೇ ಸುರಿಸಲಿ.. ಅವರ ಮನಸ್ಸಿಗೆ ಸರಿ ಬರಲಿಲ್ಲ ಎಂದರೆ ಟೀಕೆ ಮಾಡಿಯೇ ಮಾಡುತ್ತಾರೆ. ಖಂಡಿಸುತ್ತಾರೆ. ಖಂಡತುಂಡವಾಗಿ ಖಂಡಿಸುತ್ತಾರೆ.



