543 ಕ್ಷೇತ್ರಗಳ ಚುನಾವಣೆಯೂ ಮುಗಿದು, ರಿಸಲ್ಟ್ ಕೂಡಾ ಹೊರಬಿದ್ದಾಗಿದೆ. ಜೂನ್ 8ಕ್ಕೆ ಮೋದಿ ಪ್ರಧಾನಿಯಾಗುವುದು ಖಾಯಂ. ಬಿಜೆಪಿ ನಿರೀಕ್ಷೆಯ ಗುರಿ ಮುಟ್ಟಲಿಲ್ಲ. 400+ ಬಿಡಿ, 300+ ಕೂಡಾ ಸಿಗಲಿಲ್ಲ. ಬಿಜೆಪಿ ಗೆದ್ದಿದ್ದರೂ.. ಅಧಿಕಾರ ಹಿಡಿದಿದ್ದರೂ.. ಸಂಭ್ರಮ ಕಾಣುತ್ತಿಲ್ಲ. ಕಾಂಗ್ರೆಸ್ ನೇತೃತ್ವದ ಒಕ್ಕೂಟ ಸೋತಿದ್ದರೂ.. ಸಂಭ್ರಮವಿದೆ. ದುಃಖ ಇಲ್ಲ.
ಹೀಗಿರುವಾಗ ಬಿಜೆಪಿ ಸೋತಿದ್ದೆಲ್ಲಿ ಎಂಬ ಹುಡುಕಾಟವಂತೂ ಜೋರಾಗಿಯೇ ನಡೆದಿದೆ. ಆದರೆ.. ಇದು ಬಿಜೆಪಿಯನ್ನು ಗೆಲ್ಲಿಸಿದವರ ಕಥೆ. ಹೌದು, ಈ 16 ಕ್ಷೇತ್ರಗಳಲ್ಲಿ ಬಿಎಸ್ʻಪಿಯೇನಾದರೂ ದೊಡ್ಡ ಮಟ್ಟದಲ್ಲಿ ಮತಗಳನ್ನು ಸೆಳೆಯದೇ ಹೋಗಿದ್ದರೆ, ಇನ್ನೂ 16 ಕ್ಷೇತ್ರಗಳು ಅಪಾಯದಲ್ಲಿರುತ್ತಿದ್ದವು. ಹೇಗೆಂದರೆ.. ಈ 16 ಕ್ಷೇತ್ರಗಳಲ್ಲಿ ಬಿಜೆಪಿ ಎದುರಾಳಿಯಾಗಿದ್ದ ಪಕ್ಷಗಳನ್ನು ಸೋಲಿಸಿ ಗೆದ್ದಿದೆ. ಆದರೆ, ಬಿಜೆಪಿ ಗೆಲುವಿನ ಅಂತರಕ್ಕಿಂತ ಹೆಚ್ಚು ಮತಗಳನ್ನು ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಪಡೆದಿದೆ. ಅಕಸ್ಮಾತ್.. ಬಿಎಸ್ʻಪಿ ಕೂಡಾ ಇಂಡಿಯಾ ಒಕ್ಕೂಟದಲ್ಲಿ ಒಂದಾಗಿದ್ದಿದ್ದರೆ.. ಆಗ ಮೋದಿ ಪ್ರಧಾನಿಯೂ ಆಗುತ್ತಿರಲಿಲ್ಲ. ಎನ್ʻಡಿಎ ಗೆಲುತ್ತಲೂ ಇರಲಿಲ್ಲ.
ಉತ್ತರ ಪ್ರದೇಶದಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದ ಬಿಎಸ್ʻಪಿ, ಒಂದೂ ಕ್ಷೇತ್ರ ಗೆಲ್ಲದೇ ಇರಬಹುದು. ಆದರೆ.. ಸಮಾಜವಾದಿ ಪಕ್ಷ, ಕಾಂಗ್ರೆಸ್ʻನ್ನು ಸೋಲಿಸಿದೆ. ಯೋಗಿಯನ್ನು ಗೆಲ್ಲಿಸಿದೆ. ಆ 15 ಕ್ಷೇತ್ರಗಳ ಲೆಕ್ಕ ಹೀಗಿದೆ.
1. ಕ್ಷೇತ್ರ : ಅಕ್ಬರ್ ಪುರ್
ಬಿಜೆಪಿ ಎದುರಾಳಿ ನಂ.2 : ಸಮಾಜವಾದಿ ಪಕ್ಷ
ಬಿಜೆಪಿ ಗೆಲುವಿನ ಅಂತರ : 44,345
ಬಿಎಸ್ʻಪಿ ಪಡೆದ ಮತ : 73,140
2. ಕ್ಷೇತ್ರ : ಅಲಿಘಡ
ಬಿಜೆಪಿ ಎದುರಾಳಿ ನಂ.2 : ಸಮಾಜವಾದಿ ಪಕ್ಷ
ಬಿಜೆಪಿ ಗೆಲುವಿನ ಅಂತರ : 15,647
ಬಿಎಸ್ʻಪಿ ಪಡೆದ ಮತ : 1 ಲಕ್ಷದ 23 ಸಾವಿರದ 929
3. ಕ್ಷೇತ್ರ : ಅಮ್ರೋಹಾ
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಕಾಂಗ್ರೆಸ್
ಬಿಜೆಪಿ ಗೆಲುವಿನ ಅಂತರ : 28 ಸಾವಿರ
ಬಿಎಸ್ʻಪಿ ಪಡೆದ ಮತ : 1 ಲಕ್ಷದ 64 ಸಾವಿರ
4. ಕ್ಷೇತ್ರ : ಬನ್ಸಗಾಂವ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಕಾಂಗ್ರೆಸ್
ಬಿಜೆಪಿ ಗೆಲುವಿನ ಅಂತರ : 3 ಸಾವಿರದ 150
ಬಿಎಸ್ʻಪಿ ಪಡೆದ ಮತ : 64 ಸಾವಿರ
5. ಕ್ಷೇತ್ರ : ಬಧೋಹಿ
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಟಿಎಂಸಿ
ಬಿಜೆಪಿ ಗೆಲುವಿನ ಅಂತರ : 44 ಸಾವಿರ
ಬಿಎಸ್ʻಪಿ ಪಡೆದ ಮತ : ಒಂದು ಲಕ್ಷದ 55 ಸಾವಿರ
6. ಕ್ಷೇತ್ರ : ಬಿಜನೂರ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ ಪಕ್ಷ
ಬಿಜೆಪಿ ಗೆಲುವಿನ ಅಂತರ : 37 ಸಾವಿರ
ಬಿಎಸ್ʻಪಿ ಪಡೆದ ಮತ : 2 ಲಕ್ಷದ 18 ಸಾವಿರ
7. ಕ್ಷೇತ್ರ : ದಿಯೋರಾ
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಕಾಂಗ್ರೆಸ್
ಬಿಜೆಪಿ ಗೆಲುವಿನ ಅಂತರ : 34 ಸಾವಿರ
ಬಿಎಸ್ʻಪಿ ಪಡೆದ ಮತ : 45 ಸಾವಿರ
8. ಕ್ಷೇತ್ರ : ಫರೂಕಾಬಾದ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 2,678 (ಎರಡು ಸಾವಿರದ ಆರುನೂರಾ ಎಪ್ಪತ್ತೆಂಟು ಮತಗಳು)
ಬಿಎಸ್ʻಪಿ ಪಡೆದ ಮತ : 45 ಸಾವಿರ
9. ಕ್ಷೇತ್ರ : ಫತೇಪುರ್ ಸಿಕ್ರಿ
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 43 ಸಾವಿರ
ಬಿಎಸ್ʻಪಿ ಪಡೆದ ಮತ : 1 ಲಕ್ಷದ 20 ಸಾವಿರ
10. ಕ್ಷೇತ್ರ : ಹರ್ದೋಯಿ
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 27 ಸಾವಿರ
ಬಿಎಸ್ʻಪಿ ಪಡೆದ ಮತ : 1 ಲಕ್ಷದ 22 ಸಾವಿರ
11. ಕ್ಷೇತ್ರ : ಮೀರತ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 10 ಸಾವಿರ
ಬಿಎಸ್ʻಪಿ ಪಡೆದ ಮತ : 87 ಸಾವಿರ
12. ಕ್ಷೇತ್ರ : ಮಿರ್ಜಾಪುರ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : 37 ಸಾವಿರ
ಬಿಜೆಪಿ ಗೆಲುವಿನ ಅಂತರ : ಸಮಾಜವಾದಿ
ಬಿಎಸ್ʻಪಿ ಪಡೆದ ಮತ : 87 ಸಾವಿರ
13. ಕ್ಷೇತ್ರ : ಮಿಶ್ರಿಕ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 1 ಲಕ್ಷದ 11 ಸಾವಿರ
ಬಿಎಸ್ʻಪಿ ಪಡೆದ ಮತ :
14. ಕ್ಷೇತ್ರ : ಫೂಲ್ ಪುರ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 4332 (ನಾಲ್ಕು ಸಾವಿರದ ಮುನ್ನೂರಾ ಮೂವತ್ತೆರಡು ಮತಗಳು)
ಬಿಎಸ್ʻಪಿ ಪಡೆದ ಮತ : 82 ಸಾವಿರ
15. ಕ್ಷೇತ್ರ : ಷಹಜಹಾನ್ ಪುರ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 55 ಸಾವಿರ
ಬಿಎಸ್ʻಪಿ ಪಡೆದ ಮತ : 91 ಸಾವಿರ
16. ಕ್ಷೇತ್ರ : ಉನ್ನಾವ್
ಬಿಜೆಪಿ ವಿರುದ್ಧ ಎದುರಾಳಿ ನಂ.2 : ಸಮಾಜವಾದಿ
ಬಿಜೆಪಿ ಗೆಲುವಿನ ಅಂತರ : 35 ಸಾವಿರ
ಬಿಎಸ್ʻಪಿ ಪಡೆದ ಮತ : 72 ಸಾವಿರ
ಇದು ಲೆಕ್ಕ. ಸರಳವಾಗಿ ಹೇಳಬೇಕೆಂದರೆ.. ರಾಜ್ಯದಲ್ಲಿ ಕಳೆದ ವರ್ಷ ಹಲವು ಕಡೆ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಪಡೆದಿದ್ದ ಹೆಚ್ಚುವರಿ ಮತಗಳೇ ಕಾರಣವಾಗಿದ್ದವು. ಅಂದರೆ.. ವಿಶೇಷವಾಗಿ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಮತಗಳನ್ನು ಹೆಚ್ಚಿಸಿಕೊಂಡಿತ್ತು. ಹೀಗಾಗಿ ಸುಮಾರು 18 ಕ್ಷೇತ್ರಗಳಲ್ಲಿ ಬಿಜೆಪಿ ಪಡೆದ ಮತಗಳು, ಕಾಂಗ್ರೆಸ್ ಗೆಲುವಿನ ಅಂತರಕ್ಕಿಂತ ಹೆಚ್ಚಿತ್ತು. ಅಂತದ್ದೇ ಈಗ ಲೋಕಸಭೆಯಲ್ಲೂ ಆಗಿದೆ.



