ಉಪೇಂದ್ರ ನಟಿಸಿ ನಿರ್ದೇಶಿಸಿರುವ ‘ಯುಐ’ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗಿದೆ. ಆಗಿಲ್ಲ. ಅರ್ಥ ಆಗಿಲ್ಲ. ಒಂದಿಷ್ಟು ಅರ್ಥ ಆಗಿದೆ. ಸಿಕ್ಕಾಪಟ್ಟೆ ಕನ್ ಫ್ಯೂಷನ್ ಆಗಿದೆ. ಇದೂ ಒಂದ್ ಸಿನಿಮಾನಾ.. ಥತ್ತೇರಿ.. ಇಂತದ್ದೇ ಸಿನಿಮಾ ಆಗ್ಬೇಕಿರೋದು.. ಹೂಂ ಕಣ್ರಿ..
ಯುಐ ಚಿತ್ರವನ್ನು ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ವಿಮರ್ಶಿಸುತ್ತಿದ್ದಾರೆ. ದೃಶ್ಯಗಳನ್ನು ಡಿಕೋಡ್ ಮಾಡುವಂತೆ ಉಪೇಂದ್ರ ಹಾಕಿರುವ ಸವಾಲಿಗೆ ಅನೇಕರು ಮತ್ತೆ ಮತ್ತೆ ತೆರಳಿ ಸಿನಿಮಾ ನೋಡುತ್ತಿದ್ದಾರೆ. ತಮ್ಮ ತಮ್ಮ ಡಿಕೋಡ್ ತಿಳಿಸುತ್ತಿದದ್ದಾರೆ. ಕೆಲವರು ಈ ಚಿತ್ರಕ್ಕೆ ನೆಗೆಟಿವ್ ವಿಮರ್ಶೆ ಕೊಟ್ಟಿದ್ದೂ ಇದೆ. ಇವುಗಳ ಮಧ್ಯೆ ಸಿನಿಮಾ ಗೆದ್ದು ಬೀಗಿದೆ.
ಯುಐ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಬಿಸಿನೆಸ್ ಆಗಿದೆ. ಉಪೇಂದ್ರ ಸಿನಿಮಾಗಳಲ್ಲಿ ಸ್ಕ್ರೀನ್ ಪ್ಲೇ ಟ್ವಿಸ್ಟ್ ಆ್ಯಂಡ್ ಟರ್ನ್ಗಳಿಂದ ಕೂಡಿರುತ್ತದೆ. ಇದು ಚಿತ್ರಕ್ಕೆ ಹೆಲ್ಪ್ ಆಗಿದೆ.
‘ಯುಐ’ ಚಿತ್ರ ಮೊದಲ ದಿನ 6.95 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇವಲ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲೂ ಸ್ವಲ್ಪ ಮಟ್ಟಿಗಿನ ಕಲೆಕ್ಷನ್ ಆಗಿತ್ತು. ಎರಡನೇ ದಿನ 5.6 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು ಯುಐ. ಮೂರನೇ ದಿನ 5.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 18.30 ಕೋಟಿ ರೂಪಾಯಿ ಆಗಿದೆ. ಇದು ಕೇವಲ ಕರ್ನಾಟಕದ ಲೆಕ್ಕ. ತೆಲುಗಿನಲ್ಲೂ ಭರ್ಜರಿ ಕಲೆಕ್ಷನ್ ಆಗಿದ್ದು, ಕನ್ನಡ, ತೆಲುಗು, ತಮಿಳು, ಹಿಂದಿ ಎಲ್ಲ ಸೇರಿ ಎರಡು ದಿನಕ್ಕೇ 37 ಕೋಟಿ ಕಲೆಕ್ಷನ್ ಮಾಡಿತ್ತು ಎನ್ನುವ ಲೆಕ್ಕ ಸಿಕ್ಕಿತ್ತು. 3ನೇ ದಿನದ್ದು ಇನ್ನೂ ಕರ್ನಾಟಕ ಕಲೆಕ್ಷನ್ ಲೆಕ್ಕ ಮಾತ್ರ ಸಿಕ್ಕಿದೆ.
ಇನ್ನು ಬುಕ್ ಮೈ ಶೋನಲ್ಲಿ ಮೊದಲ ಮೂರು ದಿನಗಳೂ ಒಂದು ಲಕ್ಷಕ್ಕಿಂತ ಹೆಚ್ಚು ಟಿಕೆಟ್ಸ್ ಸೇಲ್ ಆಗಿವೆ. ಮೊದಲ ದಿನ ಒಂದು ಲಕ್ಷದ 3 ಸಾವಿರ, ಎರಡನೇ ದಿನ ಒಂದು ಲಕ್ಷದ 9 ಸಾವಿರ ಹಾಗೂ 3ನೇ ದಿನ ಒಂದು ಲಕ್ಷ ಟಿಕೆಟ್ಸ್ ಸೇಲ್ ಆಗಿವೆ. ಇದು ಬೆಂಗಳೂರಿನ ಲೆಕ್ಕವಂತೆ. ಒಟ್ಟಾರೆ ಲಹರಿ ಮನೋಹರ್, ಕೆಪಿ ಶ್ರೀಕಾಂತ್ ಖುಷಿಯಾಗಿದ್ದಾರೆ.
ಒಟ್ಟಾರೆಯಾಗಿ ಸಿನಿಮಾ ಈಗಾಗಲೇ 50 ಕೋಟಿ ದಾಟಿದೆ ಅನ್ನೋ ಸುದ್ದಿ ಓಡಾಡ್ತಿವೆ. ಆದರೆ ಆಗಿಲ್ಲ. ಏಕೆಂದರೆ ಚಿತ್ರದ ತೆಲುಗು ವರ್ಷನ್ನಿನಲ್ಲಿ ಮಾತ್ರ ಡಿಮ್ಯಾಂಡ್ ಇದೆ. ಜೊತೆಗೆ ಓಪನಿಂಗ್ ಪಡೆಯುತ್ತಿದ್ದಂತೆಯೇ ತೆಲುಗಿನಲ್ಲಿ ಸಿನಿಮಾವನ್ನ ಮುಗಿಸೋ ತಂತ್ರ ಮಾಡ್ತಿದ್ದಾರೆ. ಶೋಗಳನ್ನು ಕ್ಯಾನ್ಸಲ್ ಮಾಡಲಾಗ್ತಿದೆ. ಜನರು ಬಾರದೇ ಇರುವ ಟೈಮನ್ನೇ ಕೊಟ್ಟು ಸಿನಿಮಾವನ್ನ ಕೊಲ್ಲೋಕೆ ಟ್ರೈ ಮಾಡಲಾಗ್ತಿದೆ. ಒಟ್ಟಿನಲ್ಲಿ ಕನ್ನಡದ ಹೀರೋ ಕಂ ಡೈರೆಕ್ಟರ್ ಸಿನಿಮಾ ತೆಲುಗಿನಲ್ಲಿ ಬರಬಾರದು ಅಷ್ಟೇ ಎಂಬಂತೆ ನೋಡಿಕೊಳ್ಳಲಾಗ್ತಾ ಇದೆ.
ಇನ್ನು ತಮಿಳಿನಲ್ಲಿ ಕೊಟ್ಟಿರೋದು ಮೂರೂ ಮತ್ತೊಂದು ಶೋ ಮಾತ್ರ. ಅಲ್ಲಿ ಶೋಗಳು ಹೌಸ್ ಫುಲ್ ಆಗಿದ್ರೂ ಶೋ ಜಾಸ್ತಿ ಮಾಡೋಕೆ ಸ್ಕ್ರೀನ್ ಕೊಡ್ತಿಲ್ಲ.
ಮಲಯಾಳಂನಲ್ಲಿ ಇದೂವರೆಗೆ ಯುಐ ಡಬ್ಬಿಂಗ್ ರಿಲೀಸ್ ಆಗಿಲ್ಲ. ಡಬ್ಬಿಂಗ್ ಆಗಿದೆ. ಮಾರಾಟವಾಗಿದ್ದರೂ ಶೋ ಹಾಕ್ತಿಲ್ಲ. ಒಂದು ಸಕ್ಸಸ್ ಸಿನಿಮಾ ಕೊಲ್ಲೋಕೆ ಏನೇನೆಲ್ಲ ಮಾಡ್ಬೇಕೋ.. ಅಷ್ಟನ್ನೂ ಮಾಡಲಾಗ್ತಾ ಇದೆ.
ಆದರೆ ಕನ್ನಡದಲ್ಲಿ ಸುದೀಪ್ ಸಿನಿಮಾ ಕೂಡಾ ರಿಲೀಸ್ ಆಗ್ತಿದ್ದು, ಯುಐ ಒಳ್ಳೆಯ ಪ್ರದರ್ಶನ ಮಾಡ್ತಿರೋ ಕಡೆ ಡಿಸ್ಟರ್ಬ್ ಮಾಡೋಕೆ ಹೋಗಿಲ್ಲ.



