ಉಡುಪಿ ಕಾಲೇಜಿನ ವಿಡಿಯೋ (Udupi Horror) ವಿವಾದ ಇಡೀ ರಾಜ್ಯದಲ್ಲೀಗ ಬೆಂಕಿ ಎಬ್ಬಿಸಿದೆ. ಟಾಯ್ಲೆಟ್ಟಿನಲ್ಲಿ ವಿಡಿಯೋ (Toielt video) ಶೂಟ್ ಮಾಡೋಕೆ ಮೂವರು ಮುಸ್ಲಿಂ ಯುವತಿಯರ ಯತ್ನ, ಅದನ್ನು ಮುಚ್ಚಿ ಹಾಕಲು ಪೊಲೀಸರ ಯತ್ನ, ಹೊರಬಿದ್ದ ಮೇಲೆ ಎದ್ದಿರುವ ವಿವಾದಗಳು, 10 ದಿನದ ಮೇಲೆ ಎಫ್‍ಐಆರ್ ಆಗಿದ್ದು.. ಇನ್ನೂ ಪ್ರಕರಣದ ಆರೋಪಿಗಳನ್ನು ಬಂಧಿಸದೇ ಇರುವುದು.. ಆರೋಪಿ ವಿದ್ಯಾರ್ಥಿನಿಯರು ಪೊಲೀಸರು ವಿಚಾರಣೆ ಶುರು ಮಾಡುವುದಕ್ಕೆ ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದು.. ಕಾಂಗ್ರೆಸ್ ಇಡೀ ಪ್ರಕರಣವೇ ಮಕ್ಕಳಾಟ (Makkalata) ಎಂದಿದ್ದು.. ಉಡುಪಿಯಲ್ಲಿ ಎಬಿವಿಪಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿರುವುದು ಎಲ್ಲವೂ ಹೊಸದೇ.
ಆದರೆ ಉಡುಪಿ ಫೈಲ್ಸ್ (Udupi Files) ವಿವಾದದಲ್ಲಿ ಮೊದಲ ಅರೆಸ್ಟ್ ಆಗಿದೆ. ಆದರೆ ಆರೋಪಿಗಳಲ್ಲ. ವಿದ್ಯಾರ್ಥಿಗಳೂ ಅಲ್ಲ. ಅರೆಸ್ಟ್ ಆಗಿರುವುದು ಪ್ರಕರಣವನ್ನು ಟೀಕೆ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲ (Shakunthala) . ತುಮಕೂರಿನವರಾದ ಶಕುಂತಲ(Shakunthala), ಕಾಂಗ್ರೆಸ್ ಟ್ವೀಟ್‍ನ್ನು ರೀ-ಟ್ವೀಟ್ ಮಾಡುತ್ತಾ ಬರೆದಿದ್ದ ಒಂದು ಬರಹ, ಶಕುಂತಲ (Shakunthala) ಅವರನ್ನು ಅರೆಸ್ಟ್ ಆಗುವಂತೆ ಮಾಡಿದೆ. ಸ್ಟೇಷನ್ ಬೇಲ್ ಕೂಡಾ ಸಿಕ್ಕಿದೆ. ಆದರೆ, ಅದೊಂದು ಟ್ವೀಟ್`ಗೆ ಬೆಂಗಳೂರಿಂದ ಆರು ಜನ ಪೊಲೀಸರು ಬೆಂಗಳೂರಿನಿಂದ ತುಮಕೂರಿನವರೆಗೂ ಹೋಗಿ, ಶಕುಂತಲ (Shakunthala) ಅವರನ್ನು ಅರೆಸ್ಟ್ ಮಾಡಿ ಕರೆತಂದು, ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಅಲ್ಲಿಗೆ ಮೊದಲ ಅರೆಸ್ಟ್ ಈ ರೀತಿ ಆದಂತಾಗಿದೆ.
ವಿಚಿತ್ರವೆಂದರೆ ರವಿಕುಮಾರ್, ಚಲವಾದ ನಾರಾಯಣಸ್ವಾಮಿ, ರಘುಪತಿ ಭಟ್, ಯಶ್`ಪಾಲ್ ಸುವರ್ಣ ಹೇಳಿಕೆ ಕೊಡುತ್ತಿದ್ದಾರೆ. ಪ್ರೆಸ್ ಮೀಟ್ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಬಿಜೆಪಿಯ ಘಟಾನುಘಟಿ ನಾಯಕರೆಲ್ಲ ಎಲ್ಲಿ ಹೋದರು ಎಂದು ಬಿಜೆಪಿ ಕಾರ್ಯಕರ್ತರೇ ಹುಡುಕುತ್ತಿದ್ದಾರೆ. ಯಡಿಯೂರಪ್ಪ (BS Yeddyrappa) ಕುಟುಂಬ ಯೂರೋಪ್ ಪ್ರವಾಸದಲ್ಲಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ(Basaraja bommai) , ಮಾಜಿ ಡಿಸಿಎಂಗಳಾದ ಆರ್. ಅಶೋಕ್(R Ashok) , ಅಶ್ವತ್ಥ್ ನಾರಾಯಣ್(Aswath Narayan), ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಸಿಟಿ ರವಿ(CT Ravi) , ವಿರೋಧ ಪಕ್ಷದ ನಾಯಕನಾಗಲು ತುದಿಗಾಲಲ್ಲಿ ನಿಂತಿರುವ ಯತ್ನಾಳ್ (Basanagowda patil Yathnal) , ವಿ.ಸೋಮಣ್ಣ(V Somanna), ಸುನಿಲ್ ಕುಮಾರ್(Sunil Kumar) .. ಹೀಗೆ ಎಲ್ಲರೂ ಎಲ್ಲಿ ಎನ್ನುವುದು ಕಾರ್ಯಕರ್ತರ ಹುಡುಕಾಟ.
ಏಕೆಂದರೆ ಅರೆಸ್ಟ್ ಆಗಿರುವ ಕಾರ್ಯಕರ್ತೆ ಶಕುಂತಲ ಅವರಿಗೆ ಧೈರ್ಯ ಹೇಳುವುದಕ್ಕೂ ಯಾರೂ ಬರಲಿಲ್ಲ. ಪ್ರತಿಭಟನೆಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕೇವಲ ಟ್ವೀಟ್ ಮಾಡುವುದಕ್ಕೆ ಸೀಮಿತವಾಗುತ್ತಿದ್ದಾರೆ. ಹೀಗಾದರೆ ಹೇಗೆ..? ಎನ್ನುವುದು ಬಿಜೆಪಿ ಕಾರ್ಯಕರ್ತರ ಪ್ರಶ್ನೆ.
ಇದರ ಭರ್ಜರಿ ಲಾಭ ಪಡೆಯುತ್ತಿರುವುದು ಕಾಂಗ್ರೆಸ್. ಬಿಜೆಪಿ ಕಾರ್ಯಕರ್ತರು ಅವರ ಪಕ್ಷದ ಸರ್ಕಾರ ಇದ್ದಾಗಲೂ ಪ್ರತಿಭಟನೆ ಮಾಡ್ತಾ ಇದ್ರು. ತಮ್ಮದೇ ಸರ್ಕಾರದ ಗೃಹ ಸಚಿವರು, ಪಕ್ಷದ ರಾಜ್ಯಾಧ್ಯಕ್ಷರನ್ನು ಘೇರಾವ್ ಮಾಡ್ತಿದ್ರು. ಅವರ ಕೆಲಸವೇ ಪ್ರತಿಭಟನೆ ಮಾಡೋದು ಎಂದು ಟೀಕೆ ಮಾಡುತ್ತಿದ್ದಾರೆ. ವಿನಾಕಾರಣ ರಾಜಕಾರಣ ಮಾಡಬೇಡಿ ಎನ್ನುತ್ತಿದ್ದಾರೆ. ಅವರದ್ದೇ ಪಕ್ಷದ (Khushboo) ಖುಷ್ಬೂ, ವಿಡಿಯೋ ಸಿಕ್ಕಿಲ್ಲ. ಅಜೆಂಡಾ ಇಲ್ಲ. ಹಿಡನ್ ಕ್ಯಾಮೆರಾನೂ ಇರಲಿಲ್ಲ ಎಂದಿದ್ದಾರೆ ಎಂದು ತಿರುಗೇಟು ಕೊಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ(Priyank Kharge) , ಪರಮೇಶ್ವರ್ (Parameshwar) ಅವರಂತೂ ಹಿಗ್ಗಾ ಮುಗ್ಗಾ ಝಾಡಿಸುತ್ತಿದ್ದಾರೆ.
ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಶಕುಂತಲಾ (Shakunthala) : ಇತ್ತ ಶಕುಂತಲಾ (Shakunthala) ಮುಖ್ಯಮಂತ್ರಿಗಳ ಕುಟುಂಬದ ಮಹಿಳಾ ಸದಸ್ಯರ ಕುರಿತು ಟ್ವೀಟ್ ಮಾಡಿ ತಪ್ಪು ಮಾಡಿದೆ. ಇನ್ನು ಮುಂದೆ ರಾಜಕೀಯ ನಾಯಕರ ಕುಟುಂಬ ಸದಸ್ಯರ ಕುರಿತು ಮುಂದಿನ ದಿನಗಳಲ್ಲಿಅವರ ಗೌರವಕ್ಕೆ ಧಕ್ಕೆ ತರುವಂತೆ ಪೋಸ್ಟ್ ಮಾಡುವುದಿಲ್ಲ. ಈಗ ಮಾಡಿರುವ ಪೋಸ್ಟ್ ಅಳಿಸಿ ಹಾಕುತ್ತೇನೆ ” ಎಂದು ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



