ಧರ್ಮಸ್ಥಳದಲ್ಲಿ ಈಗಲೂ ತಲೆಬುರುಡೆ ಶೋಧ ಕಾರ್ಯ ಕಂಟಿನ್ಯೂ ಆಗಿದೆ. ಹೀಗಿರುವಾಗಲೇ ಸೆಪ್ಟೆಂಬರ್ 06ರಂದು ಬಂಗ್ಲಗುಡ್ಡದಲ್ಲಿ ಎರಡು ತಲೆಬುರುಡೆ ಸಿಕ್ಕಿವೆ ಎಂದು ಕೆಲವು ಮೂಲಗಳು ವರದಿ ಮಾಡಿವೆ. ಬಂಗ್ಲಗುಡ್ಡದಲ್ಲಿ ಮಹಜರು ಮಾಡುವ ಸಮಯದಲ್ಲಿ ಇನ್ನೆರಡು ತಲೆಬುರುಡೆ, ಮೂಳೆಗಳ ಅವಶೇಷ ಸಿಕ್ಕಿದೆಯಂತೆ. ಅಂದಹಾಗೆ ಮೂಲಗಳ ಪ್ರಕಾರ ಜಯಂತ್ ಟಿಗೆ ಇಲ್ಲಿಂದಲೇ ವಿಠ್ಠಲ ಗೌಡ ತಲೆಬುರುಡೆ ತಂದುಕೊಟ್ಟಿದ್ದ ಎನ್ನಲಾಗುತ್ತಿದೆ. ಈಗ ಅಲ್ಲಿಯೇ ಇನ್ನೂ ಎರಡು ತಲೆಬುರುಡೆ ಸಿಕ್ಕಿರುವುದು ಕುತೂಹಲ ಸೃಷ್ಟಿಸಿದೆ.
ಅಂದಹಾಗೆ ಈ ತಲೆಬುರುಡೆಗಳನ್ನು 17 ವರ್ಷದ ಒಬ್ಬ ವಿದ್ಯಾರ್ಥಿನಿಯ ಸಮ್ಮುಖದಲ್ಲಿ ಮಾಡಲಾಗಿದ್ದು, ಆ ವಿದ್ಯಾರ್ಥಿನಿ 2012ರಲ್ಲಿ ರೇಪ್ & ಮರ್ಡರ್ ಆಗಿದ್ದ ಇನ್ನೊಬ್ಬ ಯುವತಿಯ ಸಂಬಂಧಿ ಎನ್ನಲಾಗಿದೆ. ಆ ಸಿಕ್ಕಿರುವ ತಲೆಬುರುಡೆಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ರವಾನಿಸಲಾಗಿದೆ.
ಓಡಿಹೋದ ಜಯಂತ್..!
ಧರ್ಮಸ್ಥಳ ಕೇಸಿನಲ್ಲಿ ನಾನೂ ಹಲವು ಹೆಣ ಹೂತಿದ್ದು ನೋಡಿದ್ದೇನೆ ಎಂದಿದ್ದ ಜಯಂತ್, ಎಸ್‌ಐಟಿಯವರು ತನಿಖೆ ಮಾಡುತ್ತಿದ್ದಂತೆ ತಲೆಬುರುಡೆ ತಂದು ಕೊಟ್ಟ ಕೇಸ್ ಉಲ್ಟಾ ಆಗಿದೆ. ಆತನೂ ಈಗ ತಲೆಬುರುಡೆ ತಂದುಕೊಟ್ಟ ಆರೋಪ ಎದುರಿಸುತ್ತಿದ್ದಾನೆ. ಹೀಗಾಗಿ ಎಸ್‌ಐಟಿ ಎದುರು ವಿಚಾರಣೆಗೆ ಬಂದಿರುವ ಜಯಂತ್, ಟಿವಿ ಕ್ಯಾಮೆರಾ ಕಣ್ಣಿಗೆ ಕಾಣುತ್ತಿದ್ದಂತೆಯೇ ಎಸ್‌ಐಟಿ ಕಚೇರಿಯ ಹಿಂಭಾಗದ ಗೇಟ್‌ನಲ್ಲಿ ತಪ್ಪಿಸಿಕೊಂಡು ಕಾಡಿನೊಳಗೆ ಓಡಿದ್ದಾನೆ. ಮುಖ್ಯವಾಹಿನಿ ಟಿವಿ ಚಾನೆಲ್ಲುಗಳ ಕೈಗೆ ಸಿಗಬೇಡ ಎಂದು ಮಟ್ಟಣ್ಣವರ್ ಸೂಚನೆ ನೀಡಿದ್ದ ಹಿನ್ನೆಲೆ ಹೀಗೆ ಮಾಡಿದ್ದಾರಂತೆ ಜಯಂತ್ ಟಿ.
ವಿಠ್ಠಲ ಗೌಡನೇ ಅತ್ಯಾಚಾರಿ ಇರಬಹುದು : ಸ್ನೇಹಮಯಿ ಕೃಷ್ಣ ದೂರು
ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ, ಸೌಜನ್ಯಳ ಮಾವ ವಿಠಲ ಗೌಡ ಅವರೇ ಈ ಕೊಲೆಯನ್ನು ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಅವರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ಪ್ರಕರಣದ ಬಗ್ಗೆ ತಾವು ಸಂಗ್ರಹಿಸಿದ ಸಾಕ್ಷ್ಯಗಳನ್ನು ಆಧರಿಸಿ ವಿಠಲ ಗೌಡ ಅವರ ವಿರುದ್ಧ ದೂರು ನೀಡುವುದಾಗಿ ತಿಳಿಸಿದ ಕೃಷ್ಣ ʻʻಸೌಜನ್ಯ ಮತ್ತು ವಿಠಲ ಗೌಡ ನಡುವೆ ಅಸಭ್ಯ ವರ್ತನೆಗಳ ಬಗ್ಗೆ ನನಗೆ ಮಾಹಿತಿ ಇದೆ. ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದಾಗ ಸೌಜನ್ಯ ಕಿರುಚಿರಬಹುದು ಮತ್ತು ಆಗ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂಬ ಅನುಮಾನವಿದೆʼʼ ಎಂದಿದ್ದಾರೆ.
ಕೃಷ್ಣ ಅವರ ಪ್ರಕಾರ ಸೌಜನ್ಯ ಅವರ ಹೊಟ್ಟೆಯಲ್ಲಿ ಸಾಯುವ ಅರ್ಧಗಂಟೆಗೂ ಮುನ್ನ ಆಹಾರ ಸೇವಿಸಿದ್ದಳು. ಯಾರೋ ಪರಿಚಿತರೇ ಊಟ ಮಾಡಿಸಿರಬೇಕು. ಸೌಜನ್ಯಳನ್ನು ಕೊನೆಯ ಬಾರಿ ನೋಡಿದ್ದು ವಿಠ್ಠಲ್ ಗೌಡ. ಆತನೇ ಏಕೆ ರೇಪ್ ಮಾಡುವುದಕ್ಕೆ ಹೋಗಿ, ಅದು ಸಾಧ್ಯವಾಗದೆ ಉಸಿರುಗಟ್ಟಿಸಿ ಕೊಂದಿರಬಾರದು.. ಎಂದು ಪ್ರಶ್ನೆ ಮಾಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ನೀಡಿದ ಮಾಹಿತಿ ಪ್ರಕಾರ, ಕೊಲೆ ನಡೆದಾಗ ಸೌಜನ್ಯಳ ಬೆನ್ನಿನಲ್ಲಿ ಬ್ಯಾಗ್ ಇತ್ತು. ಇದು ಬೇರೆಯವರು ಅತ್ಯಾಚಾ*ರ ಮತ್ತು ಕೊಲೆ ಮಾಡಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಕೊಲೆ ನಡೆದ ದಿನ ವಿಠಲ ಗೌಡ ಅವರು ತಮ್ಮ ಹೋಟೆಲ್ ಕೆಲಸಕ್ಕೆ ರಜೆ ಹಾಕಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳನ್ನು ಸಮಗ್ರವಾಗಿ ವಿಶ್ಲೇಷಿಸಿ ಮರು ತನಿಖೆ ನಡೆಸಬೇಕು ಎಂದು ಅವರು ಎಸ್ಪಿ ಅವರಿಗೆ ಮನವಿ ಮಾಡಿದ್ದಾರೆ.
ಪ್ರಕರಣದ ಮರು ತನಿಖೆಗೆ ನ್ಯಾಯಾಲಯದಿಂದ ಸೂಕ್ತ ಸೂಚನೆ ಪಡೆದು, ಇತ್ತೀಚೆಗೆ ಬಂದಿರುವ ಎಲ್ಲ ಹೊಸ ಮಾಹಿತಿಗಳನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ. ಇದು ಸೌಜನ್ಯ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ನೀಡಿದ್ದು, ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.



