ಕರ್ನಾಟಕ ರಾಜಕೀಯದಲ್ಲಿ ಸ್ವಾಮೀಜಿಗಳ ಪಾತ್ರ ಅತ್ಯಂತ ಮಹತ್ವದ್ದು. ಎಲ್ಲವನ್ನೂ ತ್ಯಜಿಸಿದ ಮೇಲೆ ಸ್ವಾಮೀಜಿಗಳಾಗಬೇಕು. ಅಗತ್ಯ ಬಿದ್ದರೆ ಮಾತ್ರ ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎನ್ನುವುದು ಖಾವಿಯ ನಿಯಮ. ಕರ್ನಾಟಕದಲ್ಲಿ ಹಾಗೇನೂ ಆಗಲ್ಲ. ಈ ಹಿಂದೆ ಕೆಲವು ಸ್ವಾಮೀಜಿಗಳು ಬಹಿರಂಗವಾಗಿಯೇ ʻಸಿಎಂ ಯಾರಾಗಬೇಕುʼ ಎಂದು ಠರಾವು ಹೊಡೆಸಿವೆ. ಇನ್ನೂ ಕೆಲವು ಸ್ವಾಮಿಗಳು ಪರೋಕ್ಷವಾಗಿ ಸಭೆ ನಡೆಸಿ ಇಂತಹವರ ಪರ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ. ಲಿಂಗಾಯತ, ಒಕ್ಕಲಿಗ ಹಾಗೂ ಕುರುಬ ಸಮುದಾಯಕ್ಕೆ ಸೇರಿದ ಸ್ವಾಮೀಜಿಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಈ ರೀತಿಯ ʻಓಪನ್ ಸೀಕ್ರೆಟ್ ಪವರ್ ಪಾಲಿಟಿಕ್ಸ್ʼಗೆ ಈಗ ದಲಿತ ಸ್ವಾಮೀಜಿಗಳು ರಂಗ ಪ್ರವೇಶ ಮಾಡ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪವರ್ ಶೇರಿಂಗ್ ಚರ್ಚೆ ಮತ್ತು ದಲಿತ ಸಚಿವರ ಡಿನ್ನರ್ ಮೀಟಿಂಗ್‌ಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ. ನಾಯಕತ್ವ ಬದಲಾವಣೆ ಸಂದರ್ಭ ಬಂದರೆ ತಮ್ಮ ಸಮುದಾಯಕ್ಕೆ ಅವಕಾಶ ನೀಡುವಂತೆ ಒತ್ತಡ ತರುವ ದೃಷ್ಟಿಯಿಂದ ದಲಿತ ಸಚಿವರು ಹಲವು ಸುತ್ತಿನ ಸಭೆ ನಡೆಸಿದ್ದಾರೆ.
ಹಾಸನದಲ್ಲಿ ಅಹಿಂದ ಸಮಾವೇಶ ಕಾಂಗ್ರೆಸ್ ಬ್ಯಾನರ್ʻನಲ್ಲಿ ನಡೆಯುವಂತೆ ಮಾಡಿದ್ದು, ಅದನ್ನು ಹೈಕಮಾಂಡ್ ಮೂಲಕ ಹೇಳಿಸಿದ್ದರ ಪರಿಣಾಮ ಈ ಬಾರಿ ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ. ಆ ಸಮಾವೇಶಕ್ಕೆ ಬ್ರೇಕ್ ಹಾಕಿದ್ದ ಸುರ್ಜೇವಾಲ ಈ ಬಗ್ಗೆ ತಾವೇ ಬಂದು ಚರ್ಚಿಸುವುದಾಗಿಯೂ ಹೇಳಿದ್ದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ದಲಿತ ಸಚಿವರೊಂದಿಗೆ ಚರ್ಚಿಸಿಯೂ ಇಲ್ಲ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಕೊಠಡಿಯಲ್ಲಿ ಸಭೆ ಸೇರಿದ್ದ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಆದರೆ, ಹೈಕಮಾಂಡ್ ಇದಕ್ಕೆ ಮತ್ತೆ ಅಡ್ಡಗಾಲು ಹಾಕುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ರಾಜ್ಯದವರೇ ದಿಲ್ಲಿ ನಾಯಕರಿಗೆ ಹೇಳಿ ಬ್ರೇಕ್ ಹಾಕಿಸುತ್ತಾರೆ. ಹೀಗಾಗಿ ಅದನ್ನು ತಡೆಯಲು ಅಂತಿಮ ಅಸ್ತ್ರವೆಂಬಂತೆ ಸ್ವಾಮೀಜಿಗಳನ್ನು ಮುಂಚೂಣಿಗೆ ಬಿಡೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ನಾಯಕತ್ವ ಬದಲಾವಣೆಯಾದರೆ ಪರಿಶಿಷ್ಟರಿಗೆ ಅವಕಾಶ ನೀಡಬೇಕು. ಈ ಹಿಂದೆ ಪರಿಶಿಷ್ಟ ಸಮುದಾಯದವರು ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ನಾನಾ ಕಾರಣದಿಂದ ತಪ್ಪಿ ಹೋಗಿದೆ. ಡಾ.ಜಿ. ಪರಮೇಶ್ವರ್ 2013ರಲ್ಲಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ 2-3 ಬಾರಿ ಅವಕಾಶ ತಪ್ಪಿಸಿಕೊಂಡಿದ್ದಾರೆ. ಇದನ್ನು ಹೇಳುವುದಕ್ಕೆಂದೇ ಒಬ್ಬ ಸ್ವಾಮೀಜಿಯನ್ನು ರೆಡಿ ಮಾಡಲು ಸಭೆ ತೀರ್ಮಾನಿಸಿದೆ.
ಆದರೆ ಆ ಸ್ವಾಮೀಜಿ ಯಾರು..? ಒಬ್ಬರನ್ನೇ ಮುಂದೆ ಬಿಡಬೇಕೋ.. ಅಥವಾ ಸ್ವಾಮೀಜಿಗಳ ಗುಂಪನ್ನು ಮುಂದೆ ಬಿಡಬೇಕೋ.. ಎಂಬ ವಿಷಯದಲ್ಲಿ ಇನ್ನೂ ಚರ್ಚೆ ನಡೆಯುತ್ತಲೇ ಇದೆ. ಏಕೆಂದರೆ ಹೈಕಮಾಂಡ್ ಎದುರು ನಿಲ್ಲುವಾಗ ಪ್ರಬಲವಾಗಿ ಮಾತನಾಡಬಲ್ಲ ಸ್ವಾಮೀಜಿಯೇ ಇರಲಿ ಎಂಬುದು ಲೆಕ್ಕಾಚಾರ. ಹೀಗಾಗಿ ಶೀಘ್ರದಲ್ಲಿಯೇ ʻದಲಿತ ಸ್ವಾಮೀಜಿಗಳ ನೇತೃತ್ವದಲ್ಲಿ ಮುಂದಿನ ಸಿಎಂ ಸ್ಥಾನ ದಲಿತರಿಗೆʼ ಎಂಬ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ ಬ್ರೇಕ್ ಹಾಕಿದರೆ ಆಗುವ ಅನಾಹುತದ ಅರಿವು ಹೈಕಮಾಂಡಿಗೆ ಇರುತ್ತದೆ ಎಂಬ ಲೆಕ್ಕಾಚಾರ ಹಾಕಿಯೇ ಈ ನಡೆ ತೆಗೆದುಕೊಳ್ಳಲಾಗಿದ. ಐಡಿಯಾ ಕೊಟ್ಟವರು ಯಾರು ಅನ್ನೋದು ಮಾತ್ರ ಪರಮ ನಿಗೂಢ.



