Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಟ್ರಬಲ್‌ ಮೇಕರ್‌ ಆಗಿ ಬದಲಾದ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್..!‌

SpeciallU by SpeciallU
August 29, 2025
in News, Politics
Reading Time: 1 min read
0 0
0
ಟ್ರಬಲ್‌ ಮೇಕರ್‌ ಆಗಿ ಬದಲಾದ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್..!‌

ಡಿಕೆ ಶಿವಕುಮಾರ್‌ ಅವರಿಗೆ ಇರೋ ಇನ್ನೊಂದು ಹೆಸರೇ ಟ್ರಬಲ್‌ ಶೂಟರ್.‌ ಅವರು ಈಗಿನ ಹಂತಕ್ಕೆ ಬರುವುದಕ್ಕೆ ಕಾರಣವಾಗಿದ್ದು ಕನಕಪುರದ ಬಂಡೆ, ಒಕ್ಕಲಿಗ ಲೀಡರ್‌, ಎಂಟೆದೆ ಬಂಟ, ಡೋಂಟ್‌ ಕೇರ್‌ ಆಟಿಟ್ಯೂಡ್‌, ಹೈಕಮಾಂಡ್‌ಗೆ ಹತ್ತಿರ, ಸೋನಿಯಾಗೆ ಪರಮಾಪ್ತ.. ಇವ್ಯಾವುದೂ ಅಲ್ಲ. ಟ್ರಬಲ್‌ ಶೂಟರ್‌ ಎಂಬ ಬಿರುದೇ ಅವರ ಈಗಿನ ಹಂತಕ್ಕೆ ಕಾರಣ. ಆದರೆ.. ಈ ಟ್ರಬಲ್‌ ಶೂಟರ್‌ ಇತ್ತೀಚೆಗೆ ಟ್ರಬಲ್‌ ಮೇಕರ್‌ ಅಗುತ್ತಿರುವುದು ಅಚ್ಚರಿ ಹುಟ್ಟಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಡಿಕೆಶಿ ಈಗ ಕಾಂಟ್ರೋವರ್ಸಿ ಲೀಡರ್ ಆಗುತ್ತಿದ್ದಾರೆ. ಟ್ರಬಲ್ ಶೂಟರ್ ಈಗ ಕಾಂಟ್ರೋವರ್ಸಿ ಲೀಡರ್ ಅಷ್ಟೇ ಅಲ್ಲ.. ಟ್ರಬಲ್‌ ಮೇಕರ್‌ ಆಗ್ತಿದ್ದಾರೆ. ಸ್ವತಃ ಡಿಕೆ ಇದೇ ಮೊದಲ ಬಾರಿಗೆ ಏನ್‌ ಮಾಡ್ಲಿ.. ಏನ್‌ ಹೇಳಿದ್ರೂ ಕಾಂಟ್ರವರ್ಸಿ ಆಗುತ್ತೆ.. ಬೇಡ ಬಿಡಿ ಎಂದು ಮೀಡಿಯಾದವರಿಂದ ಡಿಸ್ಟೆನ್ಸ್‌ ಮೈಂಟೇನ್‌ ಮಾಡೋ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ಡಿಕೆ ಟ್ರಬಲ್‌ ಮೇಕರ್‌ ನಂ.1 : ನಮಸ್ತೇ ಸದಾ ವತ್ಸಲೇ..

ವಿಧಾನಸಭೆಯಲ್ಲಿ ʻನಮಸ್ತೆ ಸದಾ ವತ್ತಲೆ..ʼ  ಅಂತ ಹೇಳಿ ಸ್ವಪಕ್ಷವರ ಕೆಂಗಣ್ಣಿಗೆ ಗುರಿಯಾಗಿದ್ದರು ಡಿಕೆ ಶಿವಕುಮಾರ್. ಅದು ಹೈಕಮಾಂಡ್ ಮಟ್ಟದವರೆಗೂ ಹೋಯ್ತು. ಡಿಕೆ ವಿರುದ್ಧ ಹರಿಪ್ರಸಾದ್‌ ಅವರಂತಹ ಚುನಾವಣೆ ಗೆಲ್ಲಲಾಗದ ಲೀಡರ್‌ ಕೂಡಾ ಗರಂ ಆದ್ರು. ಪ್ರಿಯಾಂಕ್‌ ಖರ್ಗೆಯಂತಹವರೂ ಗುರ್‌ ಎಂದ್ರು. ಕೊನಗೆ ಡಿಕೆ ಕ್ಷಮೆಯಾಚನೆ ಮಾಡಿದರು. ಅದಾದ ನಂತರವೇ ಖರ್ಗೆ ಹೋಗ್ಲಿ ಬಿಡಿ ಎಂದಿದ್ದು.

ಡಿಕೆ ಟ್ರಬಲ್‌ ಮೇಕರ್‌ ನಂ.2 : ಚಾಮುಂಡಿ ಬೆಟ್ಟ ಹಿಂದೂಗಳಿಗಷ್ಟೇ ಸೇರಿದ್ದಲ್ಲ..

ದಸರಾ ಹಾಗೂ ಚಾಮುಂಡೇಶ್ವರಿ ಧಾರ್ಮಿಕ ವಿಚಾರ ಅಲ್ಲ ಸಂಸ್ಕೃತಿಕ ವಿಚಾರ ಎಂದ ಡಿಕೆಶಿ,  ಚಾಮುಂಡಿ ಬೆಟ್ಟ ಹಿಂದುಗಳಿಗೆ ಸಂಬಂಧಿಸಿದ ಬೆಟ್ಟ ಅಲ್ಲ ಎಂದುಬಿಟ್ಟರು. ವಾಸ್ತವವಾಗಿ  ʻಬಾನು ಮುಷ್ತಾಕ್‌ʼ ಅವರು ದಸರಾ ಉದ್ಘಾಟನೆಗೆ ಕರೆಯಬೇಕು ಎಂಬ ವಿಷಯ ಮೊದಲು ಪ್ರಸ್ತಾಪವಾದಾಗ ಆಕ್ಷೇಪ ವ್ಯಕ್ತಪಡಿಸಿದ್ದವರು ಡಿಕೆ. ಆದರೆ.. ಒಮ್ಮೆ ಫೈನಲ್‌ ಆದ ಮೇಲೆ ಅದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಚಾಮುಂಡಿ ಬೆಟ್ಟಕ್ಕೂ ಹಿಂದೂಗಳಿಗೂ ಸಂಬಂಧವೇ ಇಲ್ಲ ಎಂಬರ್ಥದ ಹೇಳಿಕೆ ಕಾಂಟ್ರವರ್ಸಿಯಾಗಿ.. ಬಿಜೆಪಿಗೆ ಹೋರಾಟದ ಅಸ್ತವಾಗಿ ಸಿಕ್ಕಿದೆ.

ಡಿಕೆ ಟ್ರಬಲ್‌ ಮೇಕರ್‌ ನಂ.3 : ನಟ್ಟು.. ಬೋಲ್ಟು.. ಟೈಟು ಕಾಂಟ್ರವರ್ಸಿ

ಚಿತ್ರರಂಗದ ಕಾರ್ಯಕ್ರಮದಲ್ಲಿ ನೆಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂದಿದ್ದ ಡಿಕೆಶಿ, ಅತ್ತ ಇಡೀ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾದರು. ಕಾಂಗ್ರೆಸ್‌ ಪಕ್ಷದ ಮೇಕೆದಾಟು ಪಾದಯಾತ್ರೆಗೆ ಎಲ್ಲರೂ ಬರಬೇಕಿತ್ತು ಎಂಬ ವಾದಕ್ಕೆ ತರ್ಕವೇ ಇಲ್ಲ. ಹೀಗಿದ್ದರೂ.. ಚಿತ್ರರಂಗದವರಿಗೆ ಧೈರ್ಯ ಇಲ್ಲದ ಕಾರಣ, ಬಹಿರಂಗವಾಗಿ ಮಾತನಾಡಲಿಲ್ಲ. ಅಷ್ಟೇ. ಆದರೆ.. ಬಹಿರಂಗವಾಗಿ ಮಾತನಾಡುವುದಕ್ಕೆ ಭಯವಿದ್ದರೂ.. ಎಲ್ಲರೂ  ಒಳಗೊಳಗೇ ಕುದಿಯುತ್ತಿರುವುದಂತೂ ನಿಜ.

ಡಿಕೆ ಟ್ರಬಲ್‌ ಮೇಕರ್‌ ನಂ.4 : ಒದ್ದು ಅಧಿಕಾರ ಕಿತ್ಕೋತೀನಿ ಎಂದಿದ್ದ ಹೇಳಿಕೆ

ಎಸ್ ಎಂ ಕೃಷ್ಣ ಕ್ಯಾಬಿನೆಟ್ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಗೇಟ್ ಒದ್ದಿದ್ದೆ ಎಂದಿದ್ದ ಡಿಕೆಶಿ, ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು ಎಂದು ಹೇಳಿದ್ದರು. ಯಾರನ್ನ ಒದ್ದು ಕಿತ್ತುಕೊಳ್ಳುವುದಕ್ಕೆ ರೆಡಿಯಾಗಿದ್ದೀರಿ ಎಂದು ಟೀಕಿಸಿದ್ದ ವಿಪಕ್ಷಗಳು.. ಡಿಕೆ ವಿರುದ್ಧ ಹೋರಾಟ ರೂಪಿಸುವಲ್ಲಿ ಸೋತ ಕಾರಣಕ್ಕೆ ಡಿಕೆ ಬಚಾವ್‌ ಆಗಿದ್ದರು.

ಡಿಕೆ ಟ್ರಬಲ್‌ ಮೇಕರ್‌ ನಂ.5 : RCB ವಿಜಯೋತ್ಸವ

ಇನ್ನು ತರಾತುರಿಯಲ್ಲಿ ಅಯೋಜಿಸಾಗದ RCB ವಿಜಯೋತ್ಸವಕ್ಕೆ ಡಿಕೆಯವರೇ ಕಾರಣ. ಅಷ್ಟೇ ಅಲ್ಲದೆ, ಕಾಲ್ತುಳಿತ ಹಾಗೂ ಸಾವುಗಳಾದ ನಂತರವೂ ಚಿನ್ನಸ್ವಾಮಿಗೆ ಹೋಗಿ ಟ್ರೋಫಿಗೆ ಮುತ್ತಿಟ್ಟಿದ್ದನ್ನು ಸಮರ್ಥನೆ ಮಾಡಿಕೊಳ್ಳಲು ಸ್ವತಃ ಸಿದ್ಧರಾಮಯ್ಯ ಪರದಾಡುತ್ತಿದ್ದಾರೆ.

ಡಿಕೆ ಟ್ರಬಲ್‌ ಮೇಕರ್‌ ನಂ.6 : ಕಮಲ್‌ ಹಾಸನ್‌ ಕನ್ನಡ ವಿರೋಧಿ ಹೇಳಿಕೆ ವಿವಾದ

ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ. ಡಿಕೆಯವರ ಮಾಲ್‌ʻನಲ್ಲೇ ಕಮಲ್‌ ಹಾಸನ್‌ ಅವರ ʻಥಗ್‌ ಲೈಫ್‌ʼ ಸಿನಿಮಾ ರಿಲೀಸ್‌ ಆಗುವುದಕ್ಕೆ ಸ್ಟೇಜ್‌ ಸಿದ್ಧವಾಗಿತ್ತು.

ಡಿಕೆ ಟ್ರಬಲ್‌ ಮೇಕರ್‌ ನಂ.7 : ರಸ್ತೆ ಗುಂಡಿ

ಇನ್ನು ಬೆಂಗಳೂರಿನಲ್ಲಿ ರಸ್ತೆ ಗುಂಡಿ, ಮೂಲ ಸೌಕರ್ಯಗಳ ಕುರಿತು ಡಿಕೆ ನೀಡಿರುವ ಹೇಳಿಕೆ ಹಾಗೂ ಉಪಯೋಗವಿಲ್ಲದ ಸರ್ಕಸ್ಸುಗಳು ಸರ್ಕಾರದ ಇಮೇಜ್‌ ಡ್ಯಾಮೇಜ್‌ ಮಾಡುತ್ತಿವೆ.

ಡಿಕೆ ಟ್ರಬಲ್‌ ಮೇಕರ್‌ ನಂ.7 : ಮಂಡ್ಯದವರು ಛತ್ರಿಗಳು

ಇನ್ನು ಯುವ ಕಾಂಗ್ರೆಸ್‌ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಂಡ್ಯದವರು ಛತ್ರಿಗಳು ಎಂದು ಹೇಳಿದ್ದ ಹೇಳಿಕೆ

ಡಿಕೆ ಟ್ರಬಲ್‌ ಮೇಕರ್‌ ನಂ.8 : ಸಂವಿಧಾನ ತಿದ್ದುತ್ತೇವೆ ಎಂಬ ವಿವಾದ

ಇನ್ನು ನಾವು ಕಾಂಗ್ರೆಸ್ಸಿನವರು ಇರುವುದೇ ಸಂವಿಧಾನವನ್ನು ತಿದ್ದುವುದಕ್ಕೆ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆಕ್ಚುವಲಿ ಡಿಕೆ ಹಾಗೆ ಹೇಳಿರಲಿಲ್ಲ. ಆದರೆ, ಪ್ರತಿಪಕ್ಷಗಳು ಅಟ್ಯಾಕ್‌ ಮಾಡಿದಾಗ ಡಿಕೆ ಒಬ್ಬರೇ ಅದನ್ನು ಎದುರಿಸಬೇಕಾಯ್ತು.

ಡಿಕೆ ಟ್ರಬಲ್‌ ಮೇಕರ್‌ ನಂ.9 : ರಾಹುಲ್‌ ಗಾಂಧಿ ವಿರೋಧಿ ನಡೆ

ರಾಹುಲ್‌ ಗಾಂಧಿಯವರ ಆರ್‌ಎಸ್‌ಎಸ್‌ ಒಪ್ಪಲ್ಲ. ಅಂಬಾನಿಯನ್ನು ಹತ್ತಿರ ಸೇರಿಸಲ್ಲ (ರಾಹುಲ್‌ ಗಾಂಧಿ ಮಾತ್ರ. ಉಳಿದಂತೆ ಬಹುತೇಕ ಕಾಂಗ್ರೆಸ್ಸಿಗರು ಅಂಬಾನಿಗೆ ಆಪ್ತರು). ಆದರೆ, ಡಿಕೆ ಅಂಬಾನಿ ಮಗನ ಮದುವೆಗೆ ಹೋದರು. ಅಮಿತ್‌ ಶಾ ಜೊತೆ ವೇದಿಕೆ ಹಂಚಿಕೊಂಡರು.

ಡಿಕೆ ಟ್ರಬಲ್‌ ಮೇಕರ್‌ ನಂ.10 : ಧರ್ಮಸ್ಥಳ ವಿವಾದ

ತಮ್ಮದೇ ಸರ್ಕಾರ ಎಸ್‌ಐಟಿ ರಚಿಸಿರುವಾಗ, ಇದರ ಹಿಂದೆ ಷಡ್ಯಂತ್ರ ಇದೆ ಎಂಬ ಡಿಕೆ ಹೇಳಿಕೆ ವಿವಾದಕ್ಕೆ ಆಸ್ಪದ ಕೊಟ್ಟಿತು. ಓವರ್‌ ಆಲ್‌ ಆಗಿ ನೋಡಿದರೆ.. ಕಾಂಗ್ರೆಸ್ಸಿಗೆ ಆಗುತ್ತಿದ್ದ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಪ್ರಯತ್ನ ಆಗಿದ್ದರೂ, ಕಾಂಗ್ರೆಸ್ಸಿನಲ್ಲಿ ಡಿಕೆಯ ನಡೆಗೆ ಸಿದ್ಧಾಂತಿಗಳ ಬೆಂಬಲ ಇರಲಿಲ್ಲ.

Tags: #ಡಿಕೆಶಿವಕುಮಾರ್‌ #ಕಾಂಟ್ರೋವರ್ಸಿ #DKShivakumar #Controversy
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.