ರಾಧಿಕಾ ಕುಮಾರಸ್ವಾಮಿ. (Radhika Kumarswamy) ವಯಸ್ಸು 36 ವರ್ಷ. ನಾಳೆ 38ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ, ಒಂದು ಕಾಲದಲ್ಲಿ ಚಿತ್ರರಂಗವನ್ನು ರೂಲ್ ಮಾಡಿದ್ದ ನಟಿ. ನಿನಗಾಗಿ ಚಿತ್ರದ ಮೂಲಕ (ಮೊದಲು ನಟಿಸಿದ್ದ ಸಿನಿಮಾ ನೀಲಮೇಘಶ್ಯಾಮ. ಹೀರೋ ಸೃಜನ್ ಲೋಕೇಶ್) ಬೆಳ್ಳಿತೆರೆಗೆ ಬಂದ ರಾಧಿಕಾ, ಅದಾದ ಮೇಲೆ ಸ್ಟಾರ್ ಹೀರೋಯಿನ್ ಆಗಿದ್ದು ಬೇರೆಯದೇ ಕಥೆ. ವಿಜಯ್ ರಾಘವೇಂದ್ರ-ರಾಧಿಕಾ ಸೂಪರ್ ಹಿಟ್ ಜೋಡಿ. ವಿಜಯ್ ರಾಘವೇಂದ್ರ ಜೊತೆ ನಿನಗಾಗಿ, ಪ್ರೇಮಖೈದಿ, ರೋಮಿಯೋ ಜೂಲಿಯೆಟ್, ರಿಷಿ ಚಿತ್ರಗಳಲ್ಲಿ ನಟಿಸಿದ್ದಾರೆ.
ತವರಿಗೆ ಬಾ ತಂಗಿಯ ಮೂಲಕ ಶಿವಣ್ಣನಿಗೆ ತಂಗಿಯೇ ಆಗಿ ಹೋದ ರಾಧಿಕಾ ಕುಮಾರಸ್ವಾಮಿ, ದರ್ಶನ್, ಉಪೇಂದ್ರ, ರವಿಚಂದ್ರನ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಮೊದಲಾದವರ ಜೊತೆ ನಟಿಸಿದ್ದಾರೆ. ನಟಿಯಷ್ಟೇ ನಿರ್ಮಾಪಕಿ ಕೂಡಾ. ಯಶ್-ರಮ್ಯಾ ಅಭಿನಯದ ಲಕ್ಕಿ, ಸ್ವತಃ ನಾಯಕಿಯಾಗಿರುವ ಸ್ವೀಟಿ ನನ್ನ ಜೋಡಿ ನಿರ್ಮಾಪಕಿಯಾಗಿದ್ದ ಸಿನಿಮಾಗಳು.
ಕೇವಲ ರಾಧಿಕಾ ಆಗಿದ್ದವರು ರಾಧಿಕಾ ಕುಮಾರಸ್ವಾಮಿ ಆದ ಮೇಲೆ ಅಭಿಮಾನಿಗಳಿಂದ ಒಂದು ಅಂತರ ಕಾಯ್ದುಕೊಂಡರು. ಅಭಿಮಾನಿಗಳಿಗಿರಲಿ, ಬಹಿರಂಗವಾಗಿ ಕಾಣಿಸಿಕೊಳ್ಳೋದು ಅಪರೂಪ. ಅಂತಹ ರಾಧಿಕಾ ನಾಳೆ ಸಿಗಲಿದ್ದಾರೆ.
ನವೆಂಬರ್ 11ರಂದು ಶನಿವಾರ ಸಂಜೆ 6.30ರಿಂದ 9 ಗಂಟೆವರೆಗೂ ನಾನು ನನ್ನ ಹುಟ್ಟುಹಬ್ಬವನ್ನು (Birthday) ನಿಮ್ಮ ಜೊತೆ ಆಚರಿಸಿಕೊಳ್ಳುತ್ತಿರುವೆ. ತಪ್ಪದೆ ಶನಿವಾರ ಸಿಗೋಣ. ಲವ್ ಯು. ಬೈ..ನಮಸ್ಕಾರ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ ಎಂದಿದ್ದಾರೆ ರಾಧಿಕಾ. ಕಾರಣ ನಾಳೆ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ.
ರಾಧಿಕಾ ಕುಮಾರಸ್ವಾಮಿ ಮನೆ ವಿಳಾಸ: 10/11 2ನೇ ಮೇನ್ 2ನೇ ಮುಖ್ಯ ರಸ್ತೆ ಆರ್‌ಎಮ್‌ವಿ 2ನೇ ಹಂತ 3ನೇ ಬ್ಲಾಕ್ ಃಇಐ ರಸ್ತೆ ಡಾಲರ್ಸ್ ಕಾಲೋನಿ ಬೆಂಗಳೂರು 560094. ಇಲ್ಲಿಯೇ ಸಂಜೆಯವರೆಗೂ ರಾಧಿಕಾ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ಧಾರೆ.
ರಾಧಿಕಾ ಕುಮಾರಸ್ವಾಮಿ ಅವರ ಭೈರಾದೇವಿ (Bhairadevi) ಸಿನಿಮಾ ಹಲವು ವರ್ಷಗಳಿಂದ ಪ್ರೊಡಕ್ಷನ್ ಆಗುತ್ತಲೇ ಇದೆ. ಇನ್ನೂ ರಿಲೀಸ್ ಆಗಿಲ್ಲ. ಅಜಾಗ್ರತ ಎಂಬ ಇನ್ನೊಂದು ಸಿನಿಮಾ ಕೂಡಾ ಲೈನ್ ಅಪ್ ಆಗಿದೆ.



