ಟೊಮ್ಯಾಟೋ (Tomato) ಬೆಲೆ ಏರಿದಂತೆಲ್ಲ ರೈತರ ಮುಖದಲ್ಲಿ ನಗುವೋ ನಗು. ಅದೂ ಟೊಮ್ಯಾಟೋ (Tomato) ಬೆಳೆಗಾರರಲ್ಲಿ ಮಾತ್ರ. ಹೆಚ್ಚು ಕಡಿಮೆ ಕಳೆದ ಒಂದು ತಿಂಗಳಿಂದ ಏರುತ್ತಲೇ ಇದ್ದ ಟೊಮ್ಯಾಟೋ (Tomato) ಈಗ ಇಳಿಯೋಕೆ ಶುರು ಮಾಡಿದೆ.
ಒಂದು ವಾರದ ಹಿಂದೆಯಷ್ಟೇ ಟೊಮೆಟೋ (Tomato) ಕೆಜಿ ಬೆಲೆ 200 ರೂಪಾಯಿ ಸನೀಹಕ್ಕೆ ತಲುಪಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಟೊಮೆಟೋ (Tomato) ಬೆಲೆ ಹಂತ ಹಂತವಾಗಿ ಇಳಿಕೆಯತ್ತ ಸಾಗುತ್ತಿದೆ. ಮಾರುಕಟ್ಟೆಯಲ್ಲಿ ಟೊಮೆಟೋ(Tomato) ಬೆಲೆ ಕೊಂಚ ಇಳಿಕೆಯಾಗಿದೆ. ಒಂದು ಕೆಜಿ ಟೊಮೆಟೋ ಬೆಲೆಯಲ್ಲಿ 10 ರಿಂದ 20 ರೂ.ಗಳವರೆಗೆ ಇಳಿಕೆ ಕಂಡಿದೆ. ಬೆಲೆ ಇಳಿಕೆಯಾಗುತ್ತಿರೋದರಿಂದ ಗ್ರಾಹಕರಿಗೆ (Customer) ಬಿಗ್ ರಿಲೀಫ್ ಸಿಕ್ಕಿದೆ. ಬೆಲೆ ಏರಿಕೆಯಿಂದಾಗಿ ಟೊಮೆಟೋ ಜೇಬಿಗೆ ಕೆಂಪು ಕೆಂಡವಾಗಿತ್ತು. ಕಳೆದ ಎರಡು ದಿನಗಳಿಂದ ಕೆಜಿ ಟೊಮೆಟೋ 130ರಿಂದ 150 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ ಮಾರುಕಟ್ಟೆಯಲ್ಲಿ (Market) 90 ರಿಂದ 100 ರೂಗೆ ಒಂದು ಕೆಜಿ ಟೊಮೆಟೋ ಸಿಗುತ್ತಿದೆ
ಕಳೆದ ಮೂರು ದಿನಗಳಲ್ಲಿ 900 ರಿಂದ 1000 ರೂಪಾಯಿವರೆಗೆ ಇಳಿಕೆಯಾಗುವ ಮೂಲಕ ರೈತರಲ್ಲಿ ಆತಂಕ ಉಂಟಾಗಿದ್ರೆ, ಗ್ರಾಹಕರು (Cosumer) ಕೊಂಚ ನಿರಾಳರಾಗಿದ್ದಾರೆ. ಕಳೆದ 2 ತಿಂಗಳಿನಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ (APMC Market) ಟೊಮೆಟೋ ಭಾರೀ ಬೆಲೆಯಲ್ಲಿ ಹರಾಜಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೆಲೆ ಕುಸಿಯುವ ಮೂಲಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರಾಸರಿ 15 ಕೆಜಿಯ ಟೊಮೆಟೋ ಬಾಕ್ಸ್ (Tomato Box)ಬೆಲೆ ಕೇವಲ 1,500 ರೂಪಾಯಿಗೆ ಅಂದ್ರೆ ಅತಿ ಹೆಚ್ಚು ಗುಣಮಟ್ಟ ಇರುವ ಟೊಮೆಟೋ ಬಿಕರಿಯಾಗಿದೆ. ಆ ಮೂಲಕ ಟೊಮೆಟೋ ಬೆಳೆ ನಿನ್ನೆ-ಮೊನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 900 ರಿಂದ 1000 ರೂಪಾಯಿ ಕಡಿಮೆಯಾಗಿದೆ. ಸದ್ಯ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಟೊಮೆಟೋ ಬರುತ್ತಿದ್ದು, ಬೆಲೆ ಇಳಿಮುಖವಾಗುತ್ತಿದೆ.
ಹೊರ ರಾಜ್ಯದ ವ್ಯಾಪಾರಿಗಳು ಟೊಮೆಟೋ ಖರೀದಿಗೆ ಮುಂದಾಗುತ್ತಿಲ್ಲ. ಅಲ್ಲದೆ ಏಷ್ಯಾದಲ್ಲೆ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ನಾಸಿಕ್ನಲ್ಲೂ ಟೊಮೆಟೋ ಹೆಚ್ಚಾಗಿ ಪೂರೈಕೆಯಾಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ವ್ಯಾಪಾರಿಗಳು ಟೊಮೆಟೋ ಖರೀದಿ ಮಾಡುತ್ತಿಲ್ಲ. ಪರಿಣಾಮ ಟೊಮೆಟೋ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಇವೆಲ್ಲದರ ಮಧ್ಯೆ ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ.
ಯಾಕಂದ್ರೆ ಬೆಳೆ ಇದ್ದರೆ ಬೆಲೆ ಇರಲ್ಲ, ಬೆಲೆ ಇದ್ದಾಗ ಬೆಳೆ ಬರಲ್ಲ ಇದು ಟೊಮೆಟೋ ಬೆಳೆಗಾರರ ಸ್ಥಿತಿ. ಟೊಮೆಟೋಗೆ ಇಂದು ಸಿಕ್ಕ ಬೆಲೆ ನಾಳೆ ಸಿಗಲ್ಲ, ಇದು ರೈತರ ಪರಿಸ್ಥಿತಿಯಾದ್ರೆ ಗ್ರಾಹಕರಂತೂ ಫುಲ್ ಖುಷಿಯಾಗಿದ್ದಾರೆ.
ಇನ್ನೂ ಕೆಲವು ದಿನಗಳಲ್ಲಿ ಟೊಮೆಟೋ ದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಟೊಮೆಟೋ ಜೊತೆ ಶುಂಠಿ ಬೆಲೆಯಲ್ಲಿ ಏರಿಕೆ ಕಂಡಿದೆ ಈರುಳ್ಳಿ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಈ ತಿಂಗಳ ಅಂತ್ಯಕ್ಕೆ ಕೆಜಿ ಈರುಳ್ಳಿ ಬೆಲೆ 60 ರಿಂದ 70 ರೂಪಾಯಿ ಆಗುವ ಸಾಧ್ಯತೆಗಳಿವೆ. ಹವಾಮಾನದಲ್ಲಿಯ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾಗಿದೆ. ಇಳುವರಿ ಕಡಿಮೆಯಾದ ಕಾರಣ ಸಹಜವಾಗಿಯೇ ಬೇಡಿಕೆ ಹೆಚ್ಚಾಗುತ್ತದೆ. ಈ ಹಿನ್ನೆಲೆ ಬೆಲೆ ಏರಿಕೆಯಾಗುತ್ತದೆ.



