ಒಂದು ಕೇಸ್.. ಹಾಡಹಗಲಲ್ಲೇ ನಡೆದ ಕಿಡ್ನಾಪ್ (Kidnap) ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಒಂದೆಡೆ ಚಿಕ್ಕೋಡಿಯಲ್ಲಿ (Chikkodi) ನಡೆದ ಜೈನಮುನಿಯ ಬರ್ಬರ ಹತ್ಯೆ.. ಮೈಸೂರಿನಲ್ಲಿ ನಡೆದ (Yuva Brigade) ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ.. ಬೆನ್ನಲ್ಲೇ ಬೆಂಗಳೂರನ್ನು ಬೆಚ್ಚಿ ಬೀಳುವಂತೆ (Double Murder) ಡಬಲ್ ಮರ್ಡರ್.. ಎಲ್ಲವೂ ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದ್ದವು. ಕಾಂಗ್ರೆಸ್ ಬಂದರೆ ಕ್ರಿಮಿನಲ್ಸ್ (Criminals) ಆಕ್ಟಿವ್ ಆಗುತ್ತಾರೆ ಎಂದು ಪ್ರತಿಪಕ್ಷಗಳು ಸಿದ್ದರಾಮಯ್ಯ (Siddaramaiah) ವಿರುದ್ಧ ಮುಗಿಬಿದ್ದಿದ್ದವು. ಇದರ ನಡುವೆಯೇ ಬೆಳಗಾವಿಯಲ್ಲಿ ನಡೆದ ಕಿಡ್ನಾಪ್ ಕೂಡಾ ಬೆಚ್ಚಿಬೀಳುವಂತೆ ಮಾಡಿತ್ತು.
ಜುಲೈ 11ರ ಸಂಜೆ ಟ್ಯೂಷನ್`ಗೆ (Tution) ಹೋಗುತ್ತಿದ್ದ (Girl Kidnap) ಬಾಲಕಿಯೊಬ್ಬಳ ಕಿಡ್ನಾಪ್ ಆಗಿತ್ತು. ತಮ್ಮ ಮನೆಯ ಪಕ್ಕದ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಹಿಂದಿನಿಂದ ಬಂದ ಓರ್ವ ವ್ಯಕ್ತಿ ಬಾಲಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿದ್ದ. ಹುಡುಗಿ ಆತನ ಕಪಾಳಕ್ಕೆ ಹೊಡೆದಿದ್ದಳು. ಕಿರುಚಿದ್ದಳು. ಕೊಸರಾಡಿದ್ದಳು. ಹುಡುಗಿಯ ಚೀರಾಟ ಕೇಳಿ ಬಂದ ಜನರನ್ನು ನೋಡಿ ಕಿಡ್ನಾಪರ್ (Girl Kidnap) ಹುಡುಗಿಯನ್ನು ಬಿಟ್ಟು ಓಡಿದ್ದ. ಆದರೆ ಆತನ ಕಿಡ್ನಾಪ್ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಬೆನ್ನು ಹತ್ತಿದ ಪೊಲೀಸರಿಗೆ 24 ಗಂಟೆಯಲ್ಲೇ ಆರೋಪಿ ಸಿಕ್ಕಿಬಿದ್ದ.
ಮಾರ್ಕೆಟ್ ಠಾಣೆ ವ್ಯಾಪ್ತಿಯ ಖಡೇಬಜಾರ್ನಲ್ಲಿ ಆರೋಪಿ ಪೊಲೀಸರ ವಶಕ್ಕೆ ಪಡೆದಿದ್ದು, ಬೆಳಗಾವಿಯ ಮಾರುತಿ ನಗರದ ಗಜಾನನ ಪಾಟೀಲ್ (35) ಬಂಧಿತ ಆರೋಪಿ. ಖಡೇಬಜಾರ್ ವಿಭಾಗದ ಎಸಿಪಿ ಅರುಣ್ಕುಮಾರ ಕೋಳೂರ ಅವರಿಂದ ಆರೋಪಿ ವಿಚಾರಣೆ ನಡೆದಾಗ ಬೆಚ್ಚಿ ಬೀಳುವ ಸರದಿ ಪೊಲೀಸರದ್ದಾಗಿತ್ತು.
ಆರೋಪಿ ಗಜಾನನ ಪಾಟೀಲ್`ಗೆ 35 ವಯಸ್ಸಾದರೂ ಮದುವೆಯಾಗಿರಲಿಲ್ಲ. ಹುಡುಕಿ ಹುಡುಕೀ ಬೇಸತ್ತು ಹೋಗಿದ್ದನಂತೆ. ಯಾವ ಹುಡುಗಿಯೂ ಒಪ್ಪಿರಲಿಲ್ಲವಂತೆ. ಅದಕ್ಕಾಗಿ ಇಂತಹ ಕಿಡ್ನಾಪ್ ಕೆಲಸಕ್ಕೆ ಕೈ ಹಾಕಿದ್ದಾನೆ ಕಿರಾತಕ.
ಹೀಗಾದರೆ.. ಹೆಣ್ಣು ಮಕ್ಕಳು ಓಡಾಡುವುದು ಹೇಗೆ.. ಹಗಲಲ್ಲೇ ಇಂತಹ ಘಟನೆ ನಡೆದರೆ ಭಯವಾಗುವುದಿಲ್ಲವಾ.. ಪ್ರಶ್ನೆಗಳು ಪ್ರಶ್ನೆಗಳಷ್ಟೇ. ಉತ್ತರಗಳಿಲ್ಲ.



