ಹಳ್ಳಿಕಾರ್ ಸಂತೋಷ್ : ಹುಲಿ ಉಗುರು ಕೇಸಿನಲ್ಲಿ ಅರೆಸ್ಟ್ ಆಗಿ, ಜೈಲಿನಲ್ಲಿದ್ದು, ಜಾಮೀನು ಸಿಕ್ಕಿ ಇದೀಗ ರಿಲೀಸ್ ಆಗಿದ್ಧಾರೆ. ಮತ್ತೆ ಬಿಗ್ ಬಾಸ್ ಮನೆಗೆ ಹೋಗುವ ನಿರೀಕ್ಷೆಯಲ್ಲಿದ್ಧಾರೆ.
ಲಕ್ಷ್ಮೀ ಹೆಬ್ಭಾಳ್ಕರ್ ಪುತ್ರ, ಅಳಿಯ ಬಂಧನ ಆಗಲಿಲ್ಲ : ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್ ಪುತ್ರ ಮತ್ತು ಅಳಿಯನ ಕೊರಳಲ್ಲಿ ಹುಲಿ ಉಗುರು ಪತ್ತೆಯಾಯಿತಾದರೂ, ಅದನ್ನು ಅವರು ನಕಲಿ ಎಂದು ವಾದಿಸಿದರು. ಅರಣ್ಯಾಧಿಕಾರಿಗಳು ಲಕ್ಷ್ಮೀ ಹೆಬ್ಬಾಳ್ಕರ್ ಅವರಿದ್ಧಾಗಲೇ ರೇಡ್ ಮಾಡಿ ವಿಚಾರಣೆ ನಡೆಸಿದರು. ಕೊನೆಗೆ ಅದನ್ನು ಪರಿಶೀಲನೆಗೆ ತೆಗೆದುಕೊಂಡು ಹೊರಟರು.
ಅದಾದ ಮೇಲೆ ನಟಿ ಅಮೂಲ್ಯ ಅವರ ಮಕ್ಕಳ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಪತ್ತೆಯಾಯ್ತು. ವಿಚಾರಣೆ ನಡೆಯಲೇ ಇಲ್ಲ. ಲಕ್ಷ್ಮಣ ಸವದಿ ಪುತ್ರನ ಕೊರಳಲ್ಲೂ ಹುಲಿ ಉಗುರಿನ ಲಾಕೆಟ್ ಸಿಕ್ತು. ವಿಶೇಷವೆಂದರೆ ಈ ಕೋಟ್ಯಧಿಪತಿಗಳಲ್ಲಿ ಯಾರೊಬ್ಬರೂ ಅಸಲಿ ಹುಲಿ ಉಗುರಿನ ಲಾಕೆಟ್ ಹಾಕಿಕೊಂಡಿರಲಿಲ್ಲ. ಎಲ್ಲವೂ ಡೂಪ್ಲಿಕೇಟ್.
ಅರ್ಚಕರಿನ್ನೂ ಜೈಲಿನಲ್ಲೇ : ಸದ್ಯಕ್ಕೆ ಅರೆಸ್ಟ್ ಆಗಿರುವ ಚಿಕ್ಕಮಗಳೂರಿನ ಇಬ್ಬರೂ ಅರ್ಚಕರು ಈಗಲೂ ಜೈಲಿನಲ್ಲೇ ಇದ್ಧಾರೆ. ಅವರಿಗಿನ್ನೂ ಜಾಮೀನು ಸಿಕ್ಕಿಲ್ಲ. ಈ ಮಧ್ಯೆ ದೂರುಗಳು ಬಂದ ಮೇರೆಗೆ ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ವಶಕ್ಕೆ ತೆಗೆದುಕೊಳ್ಳಲಾಗಿದೆ.


ವರ್ತೂರು ಸಂತೋಷ್ ಅವರಿಗೆ ಜಾಮೀನು ಸಿಗುವ ಬಗ್ಗೆ ನನಗೆ ವಿಶ್ವಾಸವಿತ್ತು. ಅರಣ್ಯ ಅಧಿಕಾರಿಗಳು ಹಾಕಿರುವ ರಿಪೂರ್ಟ್ ಸರಿಯಾಗಿ ಇರಲಿಲ್ಲ. ನ್ಯಾಯಾಲಯ ವಿಶ್ವಾಸಕ್ಕೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಿದೆ ಎಂದಿದ್ದಾರೆ ಸಂತೋಷ್ ಪರ ವಕೀಲ ನಟರಾಜ್.
ನನ್ನ ಮತ್ತು ಸಂತೋಷ್ ಕುಟುಂಬದ ನಂಟು ೨೦ ವರ್ಷಗಳಷ್ಟು ಹಳೆಯದು ಎಂದಿರುವ ನಟರಾಜ್, ಸಂತೋಷ್ ಬಳಿ ವಶಪಡಿಸಿಕೊಂಡಿರುವ ಲಾಕೆಟ್ ಹುಲಿ ಉಗುರಿನದ್ದಲ್ಲ ಎಂದಾದರೆ ಅರಣ್ಯ ಇಲಾಖೆ ಪರಿಹಾರ ಕೊಡುತ್ತಾ..? ನೋಟಿಸ್ ಕೂಡಾ ಅರೆಸ್ಟ್ ಮಾಡಿದ್ದಾರೆ. ಇದರ ಹಿಂದೆ ಖಂಡಿತಾ ಪಿತೂರಿ ಇದೆ ಎಂದು ಸಂಶಯ ವ್ಯಕ್ತಪಡಿಸಿದ್ಧಾರೆ.
ಎಲ್ಲವನ್ನೂ ಗಮನಿಸಿದ್ದೇನೆ ಎಂದಿರುವ ನಟರಾಜ್, ಸಂತೋಷ್ ಬಂದಿಸುವಾಗ ಕಾನೂನಿನ ಯಾವ ಪ್ರಕ್ರಿಯೆಯನ್ನೂ ಪಾಲಿಸಲಿಲ್ಲ. ಭಾನುವಾರ ಸಂಜೆ ಅರೆಸ್ಟ್ ಮಾಡಿ, ಸೋಮವಾರ ಕೋರ್ಟಿಗೆ ಬರುವಂತೆ ನೋಡಿಕೊಂಡರು. ನಿಜವಾಗಲು ಅದು ಹುಲಿ ಉಗುರು ಎಂದು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದರೆ ಅವರು ಮಾನ್ಯ ನ್ಯಾಯಾಲಯದ ಮುಂದೆ. ಅರ್ಜಿ ಸಲ್ಲಿಸಿ ಬಳಿಕ ವಶಕ್ಕೆ ಪಡೆಯಬೇಕಾಗಿತ್ತು. ಭಾನುವಾರ ಸಂಜೆ ಬಂಧಿಸಿ ಸೋಮವಾರ ಕೋರ್ಟ್ ಗೆ ಹಾಜರುಪಡಿಸುವ ಉದ್ದೇಶ ಏನಿದೆ? ಅರಣ್ಯ ಇಲಾಖೆ ಹಾಕಿರುವ ಸೆಕ್ಷನ್ ನಲ್ಲಿ ಸಂತೋಷ್ ಕಾಡಿಗೆ ಹೋಗಿ ಹುಲಿ ಬೇಟೆಯಾಡಿ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಒಟ್ಟು 9 ಸೆಕ್ಷನ್ ಹಾಕಿದ್ದಾರೆ. ಅದು ಯಾವುದು ನಮಗೆ ಸಂಬಂಧಿಸುವುದಿಲ್ಲ ಎಂದು ಖಡಕ್ ಆಗಿ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ ವಕೀಲ ನಟರಾಜ್.
ಈ ಮಧ್ಯೆ ಹುಲಿ ಉಗುರು ಪ್ರಕರಣದಲ್ಲಿ ಇನ್ನಷ್ಟು ಖ್ಯಾತನಾಮರ ಹೆಸರುಗಳು ಕೇಳಿ ಬಂದಿವೆ. ಆದರೆ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬಿಟ್ಟರೆ ಇನ್ಯಾರ ಬಂಧನವೂ ಆಗಿಲ್ಲ. ಅರ್ಚಕರಿಬ್ಬರೂ ಇನ್ನೂ ಜೈಲಿನಲ್ಲೇ ಇದ್ಧಾರೆ. ಉಳಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ.



