ಇನ್ನು ಮುಂದೆ ಕಾರ್ (CAR) ಇದ್ದವರಿಗೆ ರೇಷನ್ ಕಾರ್ಡ್ (Ration card) ಪಡೆಯುವ ಅರ್ಹತೆ ಇರುವುದಿಲ್ಲ. ಅಷ್ಟೇ ಅಲ್ಲ, ಈಗಾಗಲೇ ಕಾರ್ (CAR) ಇರುವವರು ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ, ಅದನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ (K H Muniyappa) ಕೆ.ಹೆಚ್.ಮುನಿಯಪ್ಪ. ಆದರೆ ಈ ನಿಯಮ ವೈಟ್ ಬೋರ್ಡ್ ಕಾರ್ (CAR) ಇದ್ದವರಿಗೆ ಮಾತ್ರ, ಎಲ್ಲೋ ಬೋರ್ಡ್ ಇದ್ದವರಿಗೆ ಇದು ಅನ್ವಯವಾಗುವುದಿಲ್ಲ. ಎಲ್ಲೋ ಬೋರ್ಡ್ ಕಾರ್ (Yellow board CAR)ಇದ್ದವರು, ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ವೈಟ್ ಬೋರ್ಡ್ ಕಾರ್ (White board CAR) ಇದ್ದವರಿಗೆ ಇಲ್ಲ. ಎಲ್ಲೋ ಬೋರ್ಡ್ ಕಾರ್ (Yellow board CAR) ಇದ್ದವರಿಗೆ ಉಂಟು :
2016ರಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇದರಡಿ ವಾಣಿಜ್ಯ ಬಳಕೆಗೆ ತೆಗೆದುಕೊಳ್ಳುವ ತ್ರಿಚಕ್ರ ವಾಹನ ಅಥವಾ ಕಾರು (ಯೆಲ್ಲೋ ಬೋರ್ಡ್) (Yellow board CAR) ಹೊಂದಿದ್ದರೆ ಅವರಿಗೆ ಬಿಪಿಎಲ್ ಕಾರ್ಡ್ (BPL Card) ನೀಡಬಹುದು. ಜೀವನಾಧಾರಕ್ಕೆ ಕಾರು ಹೊಂದಿರುವುದು ಬಿಪಿಎಲ್ ಮಾನದಂಡ ಉಲ್ಲಂಘನೆಯಲ್ಲ. ಹೀಗಾಗಿ ಯೆಲ್ಲೋ ಬೋರ್ಡ್ ಕಾರು ಹೊಂದಿದ್ದ ಕಾರಣಕ್ಕೆ ಬಿಪಿಎಲ್ ಕಾರ್ಡ್ (BPL Card) ರದ್ದಾಗಿದ್ದರೆ ಅಂತಹವುಗಳನ್ನು ಪುನರ್ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ ಮಿನಿಸ್ಟರ್ ಮುನಿಯಪ್ಪ.
ಆದರೆ, ವೈಟ್ ಬೋರ್ಡ್ ಕಾರ್ ಇದ್ದವರಿಗೆ ಅರ್ಹರಲ್ಲ. ಅವರು ಆ ರೀತಿ ಕಾರ್ಡ್ ಹೊಂದಿದ್ದರೆ, ಅದನ್ನು ರದ್ದು ಮಾಡುತ್ತೇವೆ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ. ಬಿಪಿಎಲ್ ಕಾರ್ಡ್ಗೆ ಇರುವ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವ ಹಲವರ ಬಿಪಿಎಲ್ ಕಾರ್ಡ್ ಈ ಮೊದಲು ರದ್ದು ಮಾಡಲಾಗಿದೆ. ಮುಂದೆಯೂ ಅನರ್ಹ ಕಾರ್ಡ್ಗಳ ಬಗ್ಗೆ ತನಿಖೆ ನಡೆಸಲಾಗುವುದು. ಯಾವಾಗ ಎಂಬುದು ಸದ್ಯಕ್ಕೆ ನಿರ್ಧರಿಸಿಲ್ಲ ಎಂದಿದ್ದಾರೆ ಆಹಾರ ಸಚಿವ ಮುನಿಯಪ್ಪ.
ಇನ್ನೊಂದು ತಿಂಗಳಲ್ಲಿ ಹೊಸ ರೇಷನ್ ಕಾರ್ಡ್ :
ಬಿಪಿಎಲ್ (BPL Card) ಅಥವಾ ಎಪಿಎಲ್ ಕಾರ್ಡ್ (APL Card) ಇಲ್ಲದೇ ಇರುವವರು ಅರ್ಜಿ ಹಾಕಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಅಪ್`ಡೇಟ್ ಇರಲಿಲ್ಲ. ಕಾರ್ಡ್ ಕೊಡುತ್ತಾರಾ ಇಲ್ಲವಾ ಎಂಬುದೂ ಗೊತ್ತಿರಲಿಲ್ಲ. ಈ ಆತಂಕವನ್ನು ನಿವಾರಿಸಿರುವ ಸಚಿವ ಮುನಿಯಪ್ಪ ಇನ್ನೊಂದು ತಿಂಗಳಲ್ಲಿ ರೇಷನ್ ಕಾರ್ಡಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಿದ್ದುದರಿಂದ ಹೊಸ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿತ್ತು. ಈವರೆಗೆ ಬಾಕಿ ಇರುವ ಅರ್ಜಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳ ಮಾಹಿತಿಯನ್ನು ನೀಡುವಂತೆ ಜಿಲ್ಲೆಗಳಿಗೆ ತಿಳಿಸಲಾಗಿದೆ. ಒಟ್ಟು ಅರ್ಜಿಗಳನ್ನು ಪರಿಶೀಲಿಸಿ ಆರ್ಥಿಕ ಇಲಾಖೆ ಅನುಮತಿ ಪಡೆದು ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ತಿಂಗಳು ಹಣ ಪಡೆಯದವರಿಗೆ ಮುಂದಿನ ತಿಂಗಳು ಕೊಡುತ್ತೇವೆ. ಆದರೆ.. : ಈ ತಿಂಗಳು ಹಣ ಪಡೆಯಲು ಅನರ್ಹ ಆದವರಿಗೆ ಈ ತಿಂಗಳ ಹಣ ಮುಂದಿನ ತಿಂಗಳು ಕೊಡಲ್ಲ. ಖಾತೆ ಆದ ಮೇಲೆ ಆ ತಿಂಗಳಿಂದಲೇ ಹಣ ಕೊಡುತ್ತೇವೆ. ಅಂದರೆ ಫಲಾನುಭವಿಗಳಲ್ಲಿ ಕೆಲವರು ಅಕೌಂಟ್ ಲಿಂಕ್ ಮಾಡಿಸಿಲ್ಲ. ಆಧಾರ್ ಲಿಂಕ್/ಓವೈಸಿ ಕಂಪ್ಲೀಟ್ ಆಗಿಲ್ಲ. ಕೆಲವರದ್ದು ಬ್ಯಾಂಕ್ ಖಾತೆಯೂ ಇಲ್ಲ. ಅಂತಹವರು ನಿಯಮಗಳನ್ನೆಲ್ಲ ಪೂರೈಸಿದರೆ, ಅವರಿಗೆ ಮುಂದಿನ ತಿಂಗಳು ಹಣ ಹಾಕುತ್ತೇವೆ. ಆದರೆ, ಅರಿಯರ್ಸ್ ರೀತಿ ಹಿಂದಿನ ತಿಂಗಳಿನ ಹಣ ಹಾಕುವುದಿಲ್ಲ ಎಂದು ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಅಕ್ಕಿ ಬಲು ಹಣ, ಈ ತಿಂಗಳು ಮಾತ್ರ. ಸೆಪ್ಟೆಂಬರ್ ಹೊತ್ತಿಗೆ ಅಕ್ಕಿ/ರಾಗಿ/ಜೋಳ..ಗಳನ್ನೇ ಪೂರೈಸುತ್ತೇವೆ ಎಂದು ಕೂಡಾ ಸಚಿವರು ತಿಳಿಸಿದ್ದಾರೆ.



