ರೇಣುಕಾಸ್ವಾಮಿ ಮೇಲೆ ನಡೆದಿರುವ ಕ್ರೌರ್ಯದ ಸೀನ್ ಬೈ ಸೀನ್ ಓದುವವರ ಎದೆ ಝಲ್ ಎನ್ನುವುದು ಸಹಜ. ಏಕೆಂದರೆ, ಎದೆಗೆ ಝಾಡಿಸಿ ಒದ್ದು, ಮೂಳೆ ಮುರಿದವನು ದರ್ಶನ್. ಮರ್ಮಾಂಗವನ್ನು ಒದ್ದು, ವೃಷಣ ಪುಡಿ ಮಾಡಿದವನು ದರ್ಶನ್. ಚಾರ್ಜ್‌ಶೀಟ್ ಪ್ರಕಾರ ರೇಣುಕಾಸ್ವಾಮಿ ಸತ್ತಿದ್ದು ಇದೇ ಕಾರಣದಿಂದ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ನಟ ದರ್ಶನ್ ಪ್ಲಾನ್ ಮಾಡಿಯೇ ಪವನ್, ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಸಿದ್ದಾನೆ. ಆದರೆ ಚಾರ್ಜ್‌ಶೀಟ್ ಪ್ರಕಾರ ದರ್ಶನ್ ಅದ್ಯಾವ ಮಟ್ಟಿಗೆ ಕ್ರೌರ್ಯ ಮೆರೆದಿದ್ದಾರೆಂದರೆ.. ನಾರ್ಮಲ್ ಆಗಿರುವ ಮನುಷ್ಯರು ಬೆಚ್ಚಿಬೀಳುವಂತಿದೆ. ಮತ್ತು ಕೇಸ್ ಮುಚ್ಚಿ ಹಾಕುವುದಕ್ಕೆ ನಡೆಸಿದ ಪ್ಲಾನಿನಲ್ಲಿಯೇ ಇಡೀ ದರ್ಶನ್ ಗ್ಯಾಂಗ್ ಫಿಕ್ಸ್ ಆಗಿದೆ.
ದರ್ಶನ್ ಗ್ಯಾಂಗ್ ಕ್ರೌರ್ಯ ಮತ್ತು ಅದಕ್ಕೆ ಸಾಕ್ಷಿಗಳು :
ಶೆಡ್‌ಗೆ ಬಂದವನೇ ರೇಣುಕಾಸ್ವಾಮಿ ಎದೆಗೆ ಒದ್ದಿದ್ದಾನೆ ದರ್ಶನ್. ಸಣಕಲು ಪೀಚಲು ದೇಹದ ಎದೆಯ ಮೂಳೆ ಮುರಿದಿರುವುದೇ ಆಗ. ಪವಿತ್ರಾ ಗೌಡ ತಾರಾಮಾರ ಬೈದಿದ್ದಾರೆ. ಅವನನ್ನ ಸಾಯ್ಸಿಬಿಡಿ, ಕಿಲ್ ಹಿಮ್ ಎಂದು ಉನ್ಮತ್ತಳಂತೆ ಕೂಗಾಡಿದ್ದಾರೆ. ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಅದೇ ಚಪ್ಪಲಿ ತಗೊಂಡು ದರ್ಶನ್ ಕೂಡಾ ಹೊಡೆದಿದ್ದಾನೆ.
ಕೇಳೋ.. ಕ್ಷಮೆ ಕೇಳೋ.. ಮೆಸೇಜ್ ಮಾಡಿದ್ದು ತಪ್ಪಾಯ್ತು ಅಂತ ಕ್ಷಮೆ ಕೇಳೋ. ʻ..ʼ ಮಗನೇ. ಎನ್ನುತ್ತಾ ದರ್ಶನ್ ಒಡೆದಿದ್ದಾರೆ. ಆಗ ರೇಣುಕಾಸ್ವಾಮಿ ಥಟ್ಟಂತ ಪವಿತ್ರಾ ಗೌಡ ಕಾಲು ಹಿಡಿದು ಕ್ಷಮೆ ಕೇಳಿದ್ದಾನೆ. ಪವಿತ್ರಾ ಗೌಡಳ ಕಾಲು ಹಿಡೀತೀಯೇನ.. ʻ..ʼ ಮಗನೇ ಎಂದು ಬೈದ ದರ್ಶನ್ ಮತ್ತೆ ಕ್ರೌರ್ಯ ಮೆರೆದಿದ್ದಾನೆ. ಸಣಕಲು ದೇಹದ ಸ್ವಾಮಿಯನ್ನು ಮೇಲಕ್ಕೆತ್ತಿ ಪಕ್ಕದಲ್ಲೇ ಇದ್ದ ಲೇಲ್ಯಾಂಡ್ ಲಾರಿಗೆ ಬಟ್ಟೆ ಒಗೆಯುವಂತೆ ಒಡೆದಿದ್ದಾನೆ. ರೇಣುಕಾಸ್ವಾಮಿಯ ತಲೆ ಹಿಡಿದು ಲಾರಿಗೆ ಗುದ್ದಿಸಿದ್ದಾನೆ ದರ್ಶನ್.
ಅದಾದ ಮೇಲೆ ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ ಗ್ಯಾಂಗಿನ ಸದಸ್ಯರೆಲ್ಲ ಮನಬಂದಂತೆ ಥಳಿಸಿದ್ದಾರೆ. ಆದರೆ, ದರ್ಶನ್ ಕೋಪ ತಣ್ಣಗಾಗಿಲ್ಲ. ರೇಣುಕಾಸ್ವಾಮಿ ಬಟ್ಟೆ ಬಿಚ್ಚಿಸಿದ್ದ ದರ್ಶನ್, ರೇಣುಕಾಸ್ವಾಮಿಯ ಮರ್ಮಾಂಗಕ್ಕೆ ಕಾಲಿಂದ ಒದ್ದು, ವೃಷಣಗಳ ಮೇಲೆ ನಿಂತು ಒಸಕಿದ್ದಾನೆ. ಆಗ ಡಿ ಗ್ಯಾಂಗ್ ಸದಸ್ಯರೆಲ್ಲ ರೇಣುಕಾಸ್ವಾಮಿಯ ಕಾಲು ಅಗಲಿಸಿ ಬಿಗಿಯಾಗಿ ಹಿಡಿದುಕೊಂಡಿದ್ದಾರೆ.
ಒಂದೇ ಜಾಗಕ್ಕೆ ದರ್ಶನ್ ಅವರು ಅನೇಕ ಬಾರಿ ಒದ್ದು ಒದ್ದು ತುಳಿದಿದ್ದಾರೆ. ಈ ವೇಳೆ ಆತ ಪ್ರಜ್ಞೆ ಕಳೆದುಕೊಂಡಾಗ ದರ್ಶನ್ ಬಿಟ್ಟಿದ್ದಾರೆ. ಮರಣೋತ್ತರ ವರದಿಯಲ್ಲಿ ಈ ಬಲವಾದ ಪೆಟ್ಟಿನಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಹೊರ ಬಿದ್ದಿದೆ. ಇಡೀ ಸನ್ನಿವೇಶದ ವಿವರಣೆ ಹಾಗೂ ದರ್ಶನ್ ಪಾತ್ರದ ವಿವರಣೆ ನೋಡಿದರೆ, ದರ್ಶನ್ ಬಚಾವ್ ಆಗುವುದಕ್ಕೆ ಯಾವ ಸಾಧ್ಯತೆಯೂ ಇಲ್ಲ.
ರೇಣುಕಾಸ್ವಾಮಿ ಜೀವ ಹೋದ ಮೇಲೆ ದರ್ಶನ್, ಪವಿತ್ರಾ ಗೌಡ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸರೆಂಡರ್ ಆಗುವಂತೆ ಕಳಿಸಿದ್ದವರೇ ಈಗ ಸೆಕ್ಷನ್ 164 ಹೇಳಿಕೆ ನೀಡಿದ್ದಾರೆ. ಎಲ್ಲವೂ ದರ್ಶನ್‌ಗಾಗಿ, ದರ್ಶನ್‌ರಿಂದ, ದರ್ಶನ್‌ಗೋಸ್ಕರವೇ ಅಂತ ಒಪ್ಕೊಂಡಿದ್ದಾರಂತೆ. ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿ ಈ ಮೂರು ಸಾಕ್ಷಿಗಳು ದಾಸನಿಗೆ ದುಸ್ವಪ್ನವಾಗಿ ಕಾಡೋದು ಖಾಯಂ.
ಇನ್ನು ಈ ಪ್ರಕರಣದಲ್ಲಿ ಎ7 ಆಗಿದ್ದ ಅನು ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿಕೊಂಡು ಬಂದವರಲ್ಲಿ ಒಬ್ಬ. ಆದರೆ, ಈ ಅನು ಹಲ್ಲೆಯಲ್ಲಿ ಭಾಗಿಯಾಗಿಲ್ಲ ಮತ್ತು ಶವ ಎಸೆಯೋದ್ರಲ್ಲೂ ಭಾಗಿಯಾಗಿಲ್ಲ. ಆದರೆ ರೇಣುಕಾಸ್ವಾಮಿ ಮೈಮೇಲಿನ ಒಡವೆ ಕಸಿದಿದ್ದ ಆರೋಪವಿದೆ.
ಇನ್ನು ಪೊಲೀಸರ ಎದುರು ನಾವೇ ಕೊಂದಿದ್ದೇವೆ ಎಂದು ಶರಣಾಗಿದ್ದ ನಿಖಿಲ್, ಕೇಶವಮೂರ್ತಿ, ಕಾರ್ತಿಕ್, ಇವರೂ ಕೂಡಾ ಕೊಲೆಯಲ್ಲಿ ಭಾಗಿಯಾಗಿಲ್ಲ. ಇವರು ಸೆಕ್ಷನ್ 164 ಹೇಳಿಕೆ ನೀಡಿದ್ದು, ಈ ಹೇಳಿಕೆಯೇ ದರ್ಶನ್ ಅವರಿಗೆ ವಿಲನ್ ಆಗಿ ಕಾಡಲಿದೆ.
ಏಕೆಂದರೆ ಒಬ್ಬನಾದ ಕಾರ್ತಿಕ್, ಪಟ್ಟಣಗೆರೆ ಶೆಡ್ಡಿನ ಕಾವಲುಗಾರ. ಆತ ಪ್ರತ್ಯಕ್ಷದರ್ಶಿಯಾಗಿದ್ದಾನೆ. ದರ್ಶನ್ ಕ್ರೌರ್ಯವೂ ಗೊತ್ತು. ಇನ್ನಿಬ್ಬರೂ ಶವ ಎಸೆಯೋದ್ರಲ್ಲಿ ಸಹಾಯ ಮಾಡಿದವರು. ಇವರ ಮೇಲಿರೋ ಆರೋಪ ಶವ ಸಾಗಾಟ ಮಾಡಿದ್ದು. ಇವರೇ ಶರಣಾಗತರಾಗಿದ್ದು. ಇವರ ಹೇಳಿಕೆಯ ಮೇಲೆ ಅನುಮಾನಗೊಂಡು ತನಿಖೆ ಮಾಡಿದಾಗಲೇ, ದರ್ಶನ್ ಹೆಸರು ಹೊರಬಂದಿದ್ದು. ಈಗ ಇವರೇ ಸೆಕ್ಷನ್ 164 ಹೇಳಿಕೆ ನೀಡಿರೋದ್ರಿಂದ ದರ್ಶನ್ ಜೈಲು ಖಾಯಮ್ಮಾಗಿದೆ.



