ಕೆಲವರು ಹಾಗೆ ಇರುತ್ತಾರೆ. ಯೋಗ್ಯತೆ ಇರುವುದಿಲ್ಲ. ಎದೆಯಲ್ಲಿ ನಾಲ್ಕಕ್ಷರ ಹುಟ್ಟುವುದಿಲ್ಲ. ಆದರೆ.. ಬೀದಿ ಸುತ್ತಿಕೊಂಡಿರುವ ಇವರದ್ದು ಎಲ್ಲರನ್ನೂ ಲೇವಡಿ ಮಾಡುವ ವರ್ತನೆ. ಅಂತಹ ಅಡ್ನಾಡಿಗಳ ಕಥೆ ಇದು. ಫಲಿತಾಂಶ ಪ್ರಕಟವಾದಾಗ ಸಾಧಾರಣವಾಗಿಯೇ ಹೆಚ್ಚು ಅಂಕ ಪಡೆದವರಾರು ಎಂದು ಹುಡುಕುತ್ತಾರೆ. ಅವರ ಜೀವನ, ಕಷ್ಟ, ಓದುವುದಕ್ಕೆ ಅವರ ಪಟ್ಟ ಶ್ರಮ.. ಎಲ್ಲವನ್ನೂ ನೋಡುತ್ತಾರೆ. ಅಂತಹ ಎಷ್ಟೋ ಪ್ರಕರಣಗಳು ಓದುವವರಿಗೆ ಸ್ಫೂರ್ತಿಯಾಗುತ್ತವೆ.
ಈಗಿನ ಮಕ್ಕಳ ವಿಷಯ.. ಓದೋದ್ರದಲ್ಲಿ ಚೆನ್ನಾಗಿದ್ಧಾರೆ. ಎಲ್ಲ ಸಬ್ಜೆಕ್ಟ್ ಗೆ ಔಟ್ ಆಫ್ ಔಟ್ ತೆಗೆದುಕೊಳ್ಳುವ ವಿದ್ಯಾರ್ಥಿಗಳೂ ದೊಡ್ಡ ಮಟ್ಟದಲ್ಲಿದ್ಧಾರೆ. ಪಬ್ಲಿಕ್ ಪರೀಕ್ಷೆಯಲ್ಲಿ ಸ್ಪರ್ಧೆಯ ನಡುವೆಯೂ ಗೆದ್ದು ಪಾಲಕರು, ಶಿಕ್ಷಕರು, ಸ್ಥಳೀಯರು ಹೆಮ್ಮೆ ಪಡುವಂತೆ ಮಾಡ್ತಾರೆ. ಅಂತಹ ಹೆಮ್ಮೆ ತಂದ ಹುಡುಗಿಯನ್ನು ದರಿದ್ರವರು ಮಾಡುತ್ತಿರುವ ಅಪಹಾಸ್ಯದ ಕಥೆ ಇದು.
ಉತ್ತರ ಪ್ರದೇಶದ ಮಾಧ್ಯಮಿಕ ಶಿಕ್ಷಣ ಮಂಡಳಿ ನೀಡಿದ 10ನೇ ತರಗತಿ ಫಲಿತಾಂಶದಲ್ಲಿ ಸೀತಾಪುರದ ಪ್ರಾಚಿ ನಿಗಮ್ ಇಡೀ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ಪ್ರಾಚಿ ನಿಗಮ್ ಅವರು 600 ಅಂಕಗಳಿಗೆ 591 ಅಂಕಗಳನ್ನು ಪಡೆದಿದ್ದಾರೆ. ಅಂದ್ರೆ ಶೇಕಡಾ 98.50 ರಷ್ಟು ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶ ಇಡೀ ದೇಶದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಇರುವ ರಾಜ್ಯ. ಅಂತಹ ರಾಜ್ಯದಲ್ಲಿ ಇಡೀ ರಾಜ್ಯಕ್ಕೆ ನಂ.1 ಸ್ಟೂಡೆಂಟ್ ಆಗುವುದು ಎಂದರೆ ಸಾಧಾರಣ ವಿಷಯವಲ್ಲ.
ಆದರೆ.. ಆ ವಿದ್ಯಾರ್ಥಿನಿಯ ಬಗ್ಗೆ ಹೆಮ್ಮೆ ಪಡುವುದನ್ನು ಬಿಟ್ಟು ಆಕೆಯನ್ನು ಅಪಹಾಸ್ಯ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿರುವುದೇ ದುರಂತ. ಆಗಿರುವುದು ಇಷ್ಟೆ.. ಪ್ರಾಚಿ ನಿಗಮ್ ಅವರ ಮುಖದ ಮೇಲೆ ಕೂದಲು ಬೆಳೆದಿವೆ. ಇದು ಸಹಜವಾಗಿಯೇ ಆಗುವ ಹಾರ್ಮೊನ್ ಸಮಸ್ಯೆ. ಆದರೆ.. ಈ ದಡ್ಡರಿಗೆ ಅದು ಗೊತ್ತಿಲ್ಲ. ಅಂತಹವರು ಈಗ ರಾಜ್ಯಕ್ಕೇ ನಂಬರ್ ಒನ್ ಬಂದ ಹುಡುಗಿಯನ್ನು ಲೇವಡಿ ಮಾಡುತ್ತಿದ್ಧಾರೆ.
ಪ್ರಾಚಿಗೆ ಬೆನ್ನು ತಟ್ಟುವ ಬದಲು ಅನೇಕರು ಕೆಟ್ಟ ಕಮೆಂಟ್ ಮಾಡುತ್ತಿದ್ಧಾರೆ. ಮೊದಲು ಶೇವ್ ಮಾಡು ಎಂದು ಒಬ್ಬರು ಹೇಳಿದ್ರೆ, ತನ್ನ ಸೌಂದರ್ಯದ ಬಗ್ಗೆ ಈಕೆ ಗಮನ ಹರಿಸಬೇಕು, ಹತ್ತನೇ ತರಗತಿಯಲ್ಲಿ ರ‍್ಯಾಂಕ್ ಬಂದ್ಮೇಲೂ ಈಕೆಗೆ ಸೌಂದರ್ಯದ ಬಗ್ಗೆ ಪ್ರಜ್ಞೆ ಇಲ್ಲ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇಂತಹ ಹೊಲಸು ಮಾತನಾಡುವವರ ಬಗ್ಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿಯೇ ಕ್ಲಾಸ್ ತಗೊಂಡಿದ್ಧಾರೆ.
ಆಕೆಗೆ ಸೌಂದರ್ಯ ಮುಖ್ಯವಾಗ್ಲಿಲ್ಲ. ಗಡ್ಡ, ಮೀಸೆಯನ್ನು ಹಾಗೆಯೇ ಬಿಟ್ಟ ಅನೇಕ ಮಹಿಳೆಯರು ನಮ್ಮಲ್ಲಿದ್ದಾರೆ. ಅದು ವಿಶೇಷವೇನಲ್ಲ. ಎಂಟನೇ ತರಗತಿ ಹುಡುಗನಿಗೆ ಗಡ್ಡ ಬಂದಿಲ್ಲ, ಧ್ವನಿ ಬದಲಾಗಿಲ್ಲ ಎಂದಾಗ ಮಹಿಳೆಯರು ಗೇಲಿ ಮಾಡೋದಿಲ್ಲ ಎಂದು ಅನೇಕರು ಪ್ರಾಚಿ ಪರ ಬ್ಯಾಟ್ ಬೀಸಿದ್ದಾರೆ. ಪ್ರಾಚಿಗೆ ಧೈರ್ಯ ಹೇಳಿದ್ದಾರೆ.
ವಿಶೇಷ ಅಂದ್ರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿದ್ಧಾರೆ. ಏಕೆಂದರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್. ಕಳ್ಳ, ಖದೀಮರು, ಪೋಲಿಗಳು, ಕ್ರಿಮಿನಲ್ಲುಗಳಿಗೆ ಭಯ ಹುಟ್ಟಿಸುತ್ತಿರುವ ಯೋಗಿ ಆದಿತ್ಯನಾಥ್ ಅವರು ಇಂತಹವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ಧಾರೆ. ಭಯ ಹೇಗಿದೆ ಅಂದ್ರೆ.. ನೂರಾರು ಜನ ಅಸಭ್ಯ ಕಮೆಂಟ್ ಮಾಡಿದ್ದವರು ತಮ್ಮ ಕಮೆಂಟ್ಸ್ ಡಿಲೀಟ್ ಮಾಡುತ್ತಿದ್ಧಾರೆ.



