ಉಗ್ರರ ವಿರುದ್ಧ ಭಾರತ ಮೊದಲಿನಂತಿಲ್ಲ. ಉಗ್ರರ ವಿರುದ್ಧ ಉಗ್ರವಾತಾರ ತಾಳಿದೆ. ಈ ಹಿಂದೆ ಉರಿ ಸರ್ಜಿಕಲ್ ಸ್ಟ್ರೈಕ್ ಆದಾಗ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಸೇರಿದಂತೆ ಹಲವರು ಸಾಕ್ಷಿ ಕೇಳಿದ್ದರು. ಸೇನಾಪಡೆ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಲಭ್ಯವಿದ್ದ ಸಾಕ್ಷಿಯನ್ನು ಜಗತ್ತಿಗೆ ತೋರಿಸಿತ್ತು. ಅದಾದ ಮೇಲೆ ಬಾಲಾಕೋಟ್ ಏರ್ ಸ್ಟ್ರೈಕ್ ಆಯ್ತು. ಆಗಲೂ ಜನ ಸಾಕ್ಷಿ ಕೇಳಿದ್ದರು.
ವರ್ಧಮಾನ್ ಪಾಕಿಸ್ತಾನದಲ್ಲಿ ಬಂಧಿಯಾಗಿ ವಾಪಸ್ ಬಂದರೂ.. ಆತ ಸಿಕ್ಕಿ ಬಿದ್ದ. ಅದಕ್ಕೇನೋ ಸಾಕ್ಷಿ ಇದೆ. ಇಂಡಿಯಾದವರು ಹೊಡೆದಿದ್ದಾರೆ ಎನ್ನೋದಕ್ಕೆ ಯಾವ ಸಾಕ್ಷಿ ಇದೆ, ತೋರಿಸಿ ಎಂದು ಕೇಳಿದ್ದರು. ಇದೀಗ ಆಪರೇಷನ್ ಸಿಂದೂರ ಆಗಿದೆ. ಜಗತ್ತೇ ತಿರು ತಿರುಗಿ ನೋಡುವಂತೆ ಸಾಕ್ಷಿಗಳು ಸಿಕ್ಕಿವೆ. ಆದರೆ.. ಇಲ್ಲೂ ಸಾಕ್ಷಿ ಕೇಳುತ್ತಿದ್ಧಾರೆ.
ಸಾಕ್ಷಿ ಕೇಳಿದವರು
ಕೊತ್ತನೂರು ಮಂಜುನಾಥ್, ಕಾಂಗ್ರೆಸ್ ಶಾಸಕ
ಬೂಟಾಟಿಕೆಗೆ ನಾಲ್ಕು ಫ್ಲೈಟ್ ಪಾಕಿಸ್ತಾನಕ್ಕೆ ಕಳಿಸಿದ್ದಾರೆ, ಪಹಲ್ಗಾಮ್ ಮೃತರ ಕುಟುಂಬಕ್ಕೆ ಇದೇನಾ ಪರಿಹಾರ? ಇದು ಕಾಂಗ್ರೆಸ್ ಶಾಸಕ ಕೊತ್ತನೂರು ಮಂಜುನಾಥ್ ಕೇಳುತ್ತಿರುವ ಪ್ರಶ್ನೆ.
ರಷೀದ್ ಅಳ್ವಿ, ಕಾಂಗ್ರೆಸ್ ಮುಖಂಡ
ಇನ್ನೂ ದೊಡ್ಡ ಉತ್ತರ ಕೊಡಬೇಕಿತ್ತು. ಭಯೋತ್ಪಾದಕರೆಲ್ಲರೂ ಸತ್ತು ಹೋದರಾ.. ಎಲ್ಲರೂ ಸತ್ತು ಹೋಗಿದ್ದರೆ ಓಕೆ, ಒಳ್ಳೆಯದು.
ಶಹನ್‌ವಾಸ್ ಹುಸೇನ್, ಕಾಂಗ್ರೆಸ್ ಮುಖಂಡ
ಸತ್ತವರು ಸರಿಯಾಗಿ ನೂರೇ ಏಕೆ.. ಯಾಕೆ 99 ಅಲ್ಲ, ಯಾಕೆ 101 ಅಲ್ಲ. ಪಾಕಿಸ್ತಾನದವರು ಸತ್ತಿರುವವರನ್ನಾದರೂ ಒಪ್ಪಿಕೊಳ್ಳಬೇಕಿತ್ತಲ್ಲಾ. ಸರ್ಕಾರ ಸುಳ್ಳು ಹೇಳ್ತಿದೆ ಅನ್ನೋ ಅನುಮಾನ ಮೂಡುತ್ತಿದೆ.
ಇಂತಹ ಪ್ರಶ್ನೆಗಳು ಛೂಬಾಣದಂತೆ ತೂರಿ ಬರುತ್ತಿವೆ. ವಾಯುಪಡೆ ಹೇಳಿದರೂ.. ನೌಕಾಪಡೆ ಹೇಳಿದರೂ ನಂಬುತ್ತಿಲ್ಲ. ಏಕೆ.. ಅರ್ಥವಾಗುತ್ತಿಲ್ಲ. ಬೇರೆ ಬೇರೆ ದೇಶಗಳೂ ಕೂಡಾ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಒಂದು ಆಘೋಷಿತ ಯುದ್ಧದಲ್ಲಿ ಗೆದ್ದವರಾರು. ಎನ್ನುವುದನ್ನು ಒಪ್ಪಿಕೊಂಡಿವೆ. ಆದರೆ ಇಲ್ಲಿನವರೇ ಒಪ್ಪಿಕೊಳ್ಳುತ್ತಿಲ್ಲ.
ಆಶ್ಚರ್ಯವಾಗಬಹುದು.. ಏ.22ರಂದು ನಡೆದ ಪಹಲ್ಗಾಂ ದಾಳಿ ಆದ ನಂತರ ಮರುದಿನದಿಂದಲೇ ಯಾವಾಗ ಹೊಡೀತೀರಿ ಎಂದು ಕೂಗು ಕೇಳಿ ಬಂದಿತ್ತು. ಇದೇ ಕಾಂಗ್ರೆಸ್ಸಿಗರು 2004-2013ರವರೆಗೆ ನಡೆದ 50+ ಭಯೋತ್ಪಾದಕ ದಾಳಿಗಳಿಗೆ ಒಂದೇ ಒಂದಕ್ಕೂ ಪ್ರತೀಕಾರ ತೆಗೆದುಕೊಂಡಿರಲಿಲ್ಲ. ಅದು ಬೇರೆ ಮಾತು. ಶಿಕ್ಷೆಯ ಮಾತಂತೂ ದೂರವೇ ಉಳಿದಿತ್ತು ಬಿಡಿ. ಭಯೋತ್ಪಾದಕರನ್ನೇ ರಾಯಭಾರಿಗಳನ್ನಾಗಿ ಕಳಿಸಿದ್ದ ಕಾಂಗ್ರೆಸ್, ಪ್ರತೀಕಾರ ಕೇಳೋದೇನೋ ಒಳ್ಳೇಯದೇ..
ಆದರೆ.. ಪ್ರತೀಕಾರ ಶುರುವಾದ ನಂತರ.. ಮರುದಿನವೇ ಲೆಕ್ಕ ಕೇಳೋಕೆ ಶುರು ಮಾಡಿತು. ಲೆಕ್ಕ ಕೊಟ್ಟ ನಂತರ.. ಪಹಲ್ಗಾಂದ ಹತ್ಯಾಕಾಂಡ ಮಾಡಿದವರು ಎಲ್ಲಿದ್ದಾರೆ.. ಅವರನ್ನು ಹೊಡೆದಿಲ್ಲ ಯಾಕೆ.. ಎಂದು ಪ್ರಶ್ನೆ ಮಾಡಿತು. ಅವರಲ್ಲೊಬ್ಬನನ್ನು ಹೊಡೆದ ನಂತರ.. ಕದನ ವಿರಾಮ ಯಾಕೆ..ಟ್ರಂಪ್ ಹೇಳಿದಂತೆ ಕೇಳಿದ್ಯಾಕೆ ಎಂಬ ಪ್ರಶ್ನೆ ಮಾಡಿತು. ಹಾಗೇನಿಲ್ಲ, ಭಾರತದ ನಿಲುವುಗಳಲ್ಲಿ ಬದಲಾವಣೆ ಇಲ್ಲ ಎಂದು ಗೊತ್ತಾದ ನಂತರ, ಅಮೆರಿಕ, ಮೊದಲು ಟ್ವೀಟ್ ಮಾಡಿದ್ಯಾಕೆ ಎಂದು ಪ್ರಶ್ನೆ ಮಾಡಿತು. ಈಗ ಮೊದಲಿನ ಪ್ರಶ್ನೆಗೇ ಬಂದು ನಿಂತಿದೆ. ಸಾಕ್ಷಿ ತೋರಿಸಿ ಅಂತಾ..
ಪ್ರಶ್ನೆಗಳು ಮೂಡುತ್ತಿರಬೇಕು. ಪ್ರಶ್ನೆಗಳನ್ನು ಕೇಳುವುದು ಪ್ರತಿಪಕ್ಷಗಳ ಕರ್ತವ್ಯ. ಓಕೆ.. ಆದರೆ.. ತೀರಾ ಹೀಂಗಾ..



