ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಜೆಡಿಯು, ಟಿಡಿಪಿ ಬೆಂಬಲದೊಂದಿಗೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ಧಾರೆ. ಈಗಾಗಲೇ ನಿತೀಶ್ ಕುಮಾರ್ ಅವರ ಜೆಡಿಯು ಅಗ್ನಿವೀರ್ ಪರಾಮರ್ಶೆ ಹಾಗೂ ಜಾತಿ ಗಣತಿಗೆ ಪಟ್ಟು ಹಿಡಿದಿದೆ. ಏಕರೂಪ ನಾಗರಿಕ ಸಂಹಿತೆ ಸೇರಿದಂತೆ ಬಿಜೆಪಿಯ ಕೆಲವು ಸಿದ್ಧಾಂತಕ್ಕೆ ಎಲ್ಲರೂ ಸಿದ್ಧರಿಲ್ಲ. ನಿತೀಶ್ ಕುಮಾರ್ ಅವರ ಹಿಸ್ಟರಿ ಗೊತ್ತಿರುವ ಯಾವ ಪಕ್ಷವೂ ಅವರನ್ನು ನಂಬೋಕೆ ಆಗಲ್ಲ. ಅವರು ಯಾವಾಗ.. ಯಾವ ಪಕ್ಷಕ್ಕೆ ಬೇಕಾದರೂ ಜೈ ಎನ್ನಬಹುದು. ಹೀಗಿರುವಾಗ.. ಮುಂಜಾಗ್ರತೆಯಾಗಿ ಇನ್ನೊಂದಷ್ಟು ಸಂಸದರನ್ನು ಜೊತೆಗಿಟ್ಟುಕೊಳ್ಳೋದು ಅನಿವಾರ್ಯ.
ಹೀಗಾಗಿ.. ಇನ್ನೂ ಬಿಜೆಪಿ ಕೆಲವರ ಸಂಪರ್ಕದಲ್ಲಿದೆಯಂತೆ. ಸಣ್ಣ ಪಕ್ಷಗಳ ಹಾಗೂ ಪಕ್ಷೇತರವಾಗಿ ಗೆದ್ದ 10 ಸಂಸದರು ಎನ್‌ಡಿಎಗೆ ಬೆಂಬಲ ಘೋಷಣೆ ಮಾಡಿದ್ದಾರೆ ನ್ಯಾಷನಲ್ ಮೀಡಿಯಾಗಳು ವರದಿ ಮಾಡುತ್ತಿವೆ. ಈ ಸಂಸದರ ಬೆಂಬಲದಿಂದ ಎನ್‌ಡಿಎ ಬಲ 303ಕ್ಕೆ ಹೆಚ್ಚಳವಾಗಿದೆಯಂತೆ. 10 ಮಂದಿ ಸಂಸದರು ಬೆಂಬಲಿಸಿದ್ದಾರೆಂದು ಹೇಳಲಾಗಿರುವ ಎಲ್ಲ ಹತ್ತು ಮಂದಿಯ ಹೆಸರು ತಿಳಿದು ಬಂದಿಲ್ಲವಾದರೂ.. ಸಿಕ್ಕಿಂ ಕ್ರಾಂತಿ ಮೋರ್ಚಾ(ಎನ್‌ಕೆಎಂ) , ಶಿರೋಮಣಿ ಅಕಾಲಿ ದಳ(ಎಸ್‌ಎಡಿ), ವಾಯ್ಸ್ ಆಫ್ ಪೀಪಲ್ಸ್ ಪಾರ್ಟಿ, ಮಿಜೋರಾಂನ ಜೆಡ್‌ಪಿಎಂನ ತಲಾ ಒಬ್ಬ ಸಂಸದರ ಬೆಂಬಲ ಎನ್‌ಡಿಎಗೆ ಸಿಗುವ ಸಂಭವವಿದೆ.
ಆ 7 ಸಂಸದರು ಬೆಂಬಲ ಕೊಟ್ಟರೂ ಬೇಡ ಅಂತಾರೆ ಮೋದಿ..!
ಲೋಕಸಭೆಗೆ ಆಯ್ಕೆಯಾಗಿರುವ 7 ಪಕ್ಷೇತರ ಸಂಸದಧಿರಲ್ಲಿಇಬ್ಬರು ಖಲಿಸ್ತಾನಿ ಬೆಂಬಲಿಗರಿದ್ದಾರೆ. ಅಮೃತ್‌ಪಾಲ್ ಸಿಂಗ್, ಸರಬ್‌ಜಿತ್ ಸಿಂಗ್ ಖಲ್ಸಾ ಜೈಲಿನಲ್ಲಿರುವವರು. ಅಮೃತ್ ಪಾಲ್ ಸಿಂಗ್ ಬಹಿರಂಗವಾಗಿ ಖಲಿಸ್ತಾನಿ ಹೋರಾಟಗಾರರ ಜೊತೆಯಲ್ಲಿದ್ದರೆ, ಸರಬ್ʻಜಿತ್ ಸಿಂಗ್ ಖಲ್ಸಾ, ಇಂದಿರಾ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ಬಿಯಾಂತ್ ಸಿಂಗ್ ಮಗ. ಗೆದ್ದಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಬಾರಾಧಿಮುಲ್ಲಾದಿಂದ ಆಯ್ಕೆಯಾಗಿರುವ ಶೇಕ್ ಅಬ್ದುಲ್ ರಶೀದ್ ಸೈದ್ಧಾಂತಿಕವಾಗಿ ಬಿಜೆಪಿ ವಿರೋಧಿ. ಅಲ್ಲದೆ ಈತ ಜೈಲಿಗೆ ಹೋಗಿದ್ದೇ ದೇಶದ್ರೋಹದ ಕೇಸಿನಲ್ಲಿ. ಜೈಲಿನಲ್ಲಿದ್ದುಕೊಂಡೇ ಗೆದ್ದಿದ್ಧಾನೆ.
ಬಿಜೆಪಿ ವಿರೋಧಿಸುವ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಲಡಾಕ್‌ನಿಂದ ಆಯ್ಕೆಯಾಗಿಧಿರುವ ಮೊಹಮ್ಮದ್ ಹನೀಫ್, ಉತ್ತರ ಪ್ರದೇಶದಿಂದ ಗೆಲುವು ದಾಖಲಿಸಿರುವ ಚಂದ್ರಶೇಖರ್ ಆಜಾದ್, ಮಹಾರಾಷ್ಟ್ರದ ಸಾಂಗ್ಲಿಯ ಸಂಸದ ವಿಕಾಸ್ ಪ್ರಕಾಶ್‌ಬಾಬು ಪಾಟೀಲ್, ಉಮೇಶ್ ಬಾಬೂಧಿಭಾಯ್ ಪಟೇಲ್ ಅವರದ್ದೂ ಅಷ್ಟೆ. ಅವರು ಬಿಜೆಪಿಗೆ ಬೆಂಬಲ ಕೊಡುವುದು ಕಷ್ಟ. ಕೊಟ್ಟರೂ.. ಅವರನ್ನು ಅಪ್ಪಿಕೊಳ್ಳೋದು ಬಿಜೆಪಿಗೆ ಆಗದ ಮಾತು.
ಲಡಾಖ್ʻನಲ್ಲಿ ಗೆದ್ದಿರುವ ಮೊಹಮ್ಮದ್ ಗೆದ್ದಿರೋದು ಬಿಜೆಪಿ ಅಭ್ಯರ್ಥಿ ವಿರುದ್ಧ. ಇನ್ನು ವಿಕಾಸ್, ಕಾಂಗ್ರೆಸ್ʻನಿಂದ ಬಂಡಾಯವೆದ್ದು ಸ್ಪರ್ಧಿಸಿ ಗೆದ್ದವರು. ಆತ ಈಗಾಗಲೇ ಕಾಂಗ್ರೆಸ್ಸಿಗೆ ವಾಪಸ್ ಹೋಗಿಯಾಗಿದೆ.
ಇನ್ನು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ಅವರ ಬಳಿ 4 ಸಂಸದರಿದ್ದಾರೆ. ಆದರೆ, ಜಗನ್ ಪಕ್ಷವನ್ನು ಒಳಕ್ಕೆ ಕರೆದುಕೊಂಡರೆ, 16 ಸಂಸದರು ಇರುವ ಚಂದ್ರಬಾಬು ನಾಯ್ಡು ಮುಲಾಜಿಲ್ಲದೆ ಹೊರಗೆ ಎದ್ದು ಹೋಗ್ತಾರೆ. 4 ಆಸೆಗೆ 16 ಕಳೆದುಕೊಳ್ಳೋಕೆ ಆಗಲ್ಲ.
ಹೀಗಾಗಿಯೇ.. ಉದ್ಧವ್ ಠಾಕ್ರೆ ಬಣದ ಶಿವಸೇನೆಯ 9 ಸಂಸದರ ಜೊತೆ ಮಾತುಕತೆ ನಡೆಯುತ್ತಿದೆಯಂತೆ. ಉದ್ಧವ್ ಠಾಕ್ರೆ ಎಂದಿನಂತೆ ಅತ್ತ ಇಂಡಿಯಾ.. ಇತ್ತ ಎನ್ʻಡಿಎ ಒಕ್ಕೂಟದ ಇಬ್ಬರೂ ನಾಯಕರ ಜೊತೆ ಕಾಂಟ್ಯಾಕ್ಟ್ʻನಲ್ಲಿದ್ದಾರೆ.



