ಕಾವೇರಿ ನೀರು ಹಂಚಿಕೆ (kaveri water dispute) ವಿವಾದಕ್ಕೆ ಪದೇ ಪದೇ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ. ಆರಂಭದಲ್ಲಿ ಮಾಡಿಕೊಂಡ ಪ್ರಮಾದಕ್ಕೆ ಬೆಲೆ ತೆರುವಂತಾಗಿದೆ. ಮೊದಲಿಗೆ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸರ್ಕಾರ ಕನಿಷ್ಠ ಮಾತುಕತೆಯನ್ನೂ ಆಡದೆ ನೀರು ಬಿಟ್ಟಿತ್ತು. ನೀರು ಒಂದು ಹಂತಕ್ಕೆ ಬಿಟ್ಟ ಮೇಲೆ ಕಾನೂನು ಹೋರಾಟ ಶುರು ಮಾಡಿತ್ತು. ಜಲಾಶಯದಲ್ಲಿ ನೀರು ಕಮ್ಮಿಯಾಗುವ ಹೊತ್ತಿಗೆ ಸರ್ವಪಕ್ಷ ಸಭೆ (All party meeting) ಕರೆದಿತ್ತು. ತಮಿಳುನಾಡಿಗೆ (Tamilandu) ಕಾವೇರಿ ನೀರು ಬಿಡುಗಡೆ ವಿರೋಧಿಸಿ ಹೋರಾಟ ನಡೆಸುತ್ತಿದ್ದವರನ್ನೂ ಲೇವಡಿ ಮಾಡಿದ್ದರು ಡಿಸಿಎಂ ಡಿಕೆ ಶಿವಕುಮಾರ್ (DK Shivakumar). ಕೊನೆಗೆ ಸರ್ವಪಕ್ಷ ಸಭೆ ಕರೆದು, ನೀರು ಬಿಡದೇ ಇರುವ ತೀರ್ಮಾನ ತೆಗೆದುಕೊಂಡರಾದರೂ, ಕಾಲ ಮಿಂಚಿತ್ತು.
ಏಕೆಂದರೆ ಸರ್ವಪಕ್ಷ ಸಭೆಗೆ ಬನ್ನಿ ಎಂದು ಕರೆದ ಸಭೆಗೆ ಮಾಜಿ ಸಿಎಂಗಳ್ಯಾರೂ ಹೋಗಿರಲಿಲ್ಲ. ದೇವೇಗೌಡ (HD Devegowda), ಕುಮಾರಸ್ವಾಮಿ (HD kumaraswamy), ಯಡಿಯೂರಪ್ಪ (BS Yeddyurappa), ಸದಾನಂದ ಗೌಡ, (DV Sadananda Gowda) ಜಗದೀಶ್ ಶೆಟ್ಟರ್ (jagadeesh Shetter), ಬಸವರಾಜ ಬೊಮ್ಮಾಯಿ (Basavaraja bommai), ಎಸ್.ಎಂ.ಕೃಷ್ಣ (SM Krishna).. ಹೀಗೆ ಯಾರೂ ಇರಲಿಲ್ಲ. ಆದರೆ ತರಾತುರಿಯಲ್ಲಿ ಮಧ್ಯರಾತ್ರಿ ಹೊತ್ತಿಗೆ ಸಭೆ ಕರೆದಿದ್ದೇ ಇದಕ್ಕೆಲ್ಲ ಕಾರಣ ಎನ್ನುವುದು ಸತ್ಯವಾದರೂ, ವಿಡಿಯೋ ಕಾನ್ಫರೆನ್ಸ್ ಮೂಲಕವಾದರೂ ಒಗ್ಗಟ್ಟಿನ ಪ್ರದರ್ಶನ ಮಾಡಬಹುದಿತ್ತು. ಅದನ್ನೂ ಮಾಡಲಿಲ್ಲ. ಕೊನೆಗೆ ಈಗ ಮತ್ತೊಮ್ಮೆ ಕಾವೇರಿ ಪ್ರಾಧಿಕಾರದ ಈ ಆದೇಶವೂ ಬರೆಯೇ ಆಗಿದೆ. ಸುಪ್ರೀಂಕೋರ್ಟಿನಲ್ಲೂ ಕೂಡಾ ಮೊದಲು ಆದೇಶ ಪಾಲಿಸಿ, ಆಮೇಲೆ ವಿಚಾರಣೆ ಮಾಡೋಣ ಎಂದರೆ ಎನ್ನುವುದು ಡಿಕೆ ಶಿವಕುಮಾರ್ ಅವರು ವ್ಯಕ್ತಪಡಿಸುತ್ತಿರೋ ಆತಂಕ. ಡಿಕೆ ಶಿವಕುಮಾರ್ ಆತಂಕದಲ್ಲೂ ಸತ್ಯ ಇದೆ. ಏಕೆಂದರೆ ಇತಿಹಾಸದಲ್ಲಿ ಆಗಿರುವುದೆಲ್ಲ ಹಾಗೆಯೇ.
ಕೊನೆಗೆ ಈಗ ಖುದ್ದು ದೇವೇಗೌಡರೇ ಒಂದು ಪರಿಹಾರ ಸೂಚಿಸಿದ್ದಾರೆ. ಕಾನೂನು ಹೋರಾಟದಿಂದ ಕಾವೇರಿ ವಿವಾದ ಇತ್ಯರ್ಥ ಸಾಧ್ಯವಿಲ್ಲ. ಮಾತುಕತೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ದೇವೇಗೌಡರು ರಾಜ್ಯಸಭೆಯಲ್ಲಿ ಹೇಳಿರುವ ಮಾತು.
ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳುವುದಾದರೆ, ಸುಪ್ರೀಂಕೋರ್ಟ್ ಆಗಲೀ, ಕಾವೇರಿ ಪ್ರಾಧಿಕಾರವಾಗಲೀ ಬೇಡ ಎಂದಂತೂ ಹೇಳುವುದಿಲ್ಲ. ಆದರೆ ಮಾತುಕತೆ ನಡೆಸುವ ಮನಸ್ಸು ಮತ್ತು ಇಚ್ಚಾಶಕ್ತಿ ಬೇಕು. ವಾತಾವರಣ ಮುಕ್ತವಾಗಿರಬೇಕು. ತಮ್ಮ ಮಾತೇ ನಡೆಯಬೇಕು ಎನ್ನುವ ಹಠ ಇರಬಾರದು. ಏಕೆಂದರೆ ಈ ಮಾತು ಹೇಳಿರುವುದು ದೇವೇಗೌಡರು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳದೇ ಈ ರೀತಿಯ ಮಾತನ್ನು ಹೇಳುವುದು ಸಾಧ್ಯವಿಲ್ಲ.
ಈ ಹಿಂದೆ ಕಾವೇರಿ ಸಂಕಷ್ಟ ಎದುರಾದಾಗಲೆಲ್ಲ ದೇವೇಗೌಡರ ಮಾತು ಗೆದ್ದಿದೆ. ಸಲಹೆಗಳಿಂದ ಕರ್ನಾಟಕಕ್ಕೆ ಲಾಭವಾಗಿದೆ. ಕೇಳುವ ನಿರ್ಧಾರ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದು. ಏಕೆಂದರೆ ಈಗಲೂ ಹಠ ಹಿಡಿದರೆ, ಮತ್ತೆ ಮತ್ತೆ ಹಿನ್ನಡೆಯಾದರೆ, ರಾಜ್ಯಕ್ಕೆ ಕಷ್ಟ ತಪ್ಪಿದ್ದಲ್ಲ. ಗೃಹ ಸಚಿವ ಪರಮೇಶ್ವರ್ ಅವರೇ ಹೇಳಿರುವಂತೆ ಕುಡಿಯುವ ನೀರಿಗೂ ಬರಗಾಲ ಸೃಷ್ಟಿಯಾಗುವ ಪರಿಸ್ಥಿತಿ ಇದೆ.



