ಒಂದು ಮೊಟ್ಟೆಯ ಕಥೆಯಲ್ಲಿ (Ondu Motteya kathe) ಬಾಂಡ್ಲಿ (Motte) ತಲೆಯೇ ಚಿತ್ರವನ್ನೂ ಪ್ರಮೋಟ್ ಮಾಡಿತ್ತು. ಗರುಡ ಗಮನ ವೃಷಭ ವಾಹನದಲ್ಲಿ ಸಣಕಲು ದೇಹವೇ ಬ್ರಾಂಡ್ ಅಂಬಾಸಿಡರ್. ಈಗ ಟೋಬಿಗೆ (Toby) ಚಿತ್ರವನ್ನು ಪ್ರಮೋಟ್ ಮಾಡುತ್ತಿರುವುದು (Raj B.Shetty) ರಾಜ್ ಬಿ.ಶೆಟ್ಟಿಯವರು ಮೂಗಿಗೆ ಹಾಕಿಕೊಂಡಿರುವ ಬಳೆ. ರಾಜ್ ಬಿ.ಶೆಟ್ಟಿಯವರ ಸಿನಿಮಾ ಟೋಬಿ (Toby) ರಿಲೀಸ್ ಆಗುವುದಕ್ಕೂ ಮುನ್ನವೇ ಸಂಚಲನ ಸೃಷ್ಟಿಸಿದೆ. ಗರುಡ ಗಮನ ವೃಷಭ ವಾಹನ (Garuda Gamana Vrushabha Vahana) ನಂತರ ತೆರೆಗೆ ಬರುತ್ತಿರುವ ರಾಜ್ ಬಿ.ಶೆಟ್ಟರ ಸಿನಿಮಾ ಇದು. ನಿರೀಕ್ಷೆ..ಕುತೂಹಲ.. ಎಲ್ಲವೂ ಡಬಲ್ ಆಗಿದೆ. ಚಿತ್ರದಲ್ಲಿ ಗಮನ ಸೆಳೆದಿರುವುದು ಮೂಗು ಬೊಟ್ಟು ಹಾಕಿಕೊಂಡಿರುವ ಪೋಸ್ಟರ್. ಅದು.. ಮೂಗುಬೊಟ್ಟೂ ಅಲ್ಲ. ಮೂಗಿಗೆ ಹಾಕಿಕೊಂಡಿರುವ ಬಳೆಯೇ ಹೌದು. ಅದನ್ನು ಪ್ರೆಸ್ ಮೂಗುಬೊಟ್ಟಿನಂತೆ ಅಚಿಟಿಸಿಕೊಂಡಿದ್ದಾರಾ ಅಥವಾ ಚುಚ್ಚಿಸಿಕೊಂಡಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. (Raj B.Shetty) ರಾಜ್ ಬಿ.ಶೆಟ್ರು ಮೂಗಿಗೆ ಬಳೆ ಚುಚ್ಚಿಸಿಕೊಂಡಿದ್ದಾರಂತೆ.
ರಾಜ್ ಬಿ ಶೆಟ್ಟಿ, ಟೋಬಿಗಾಗಿ ನಿಜವಾಗಿಯೇ ಮೂಗು ಚುಚ್ಚಿಸಿಕೊಂಡಿದ್ದ ವಿಡಿಯೋ ರಿಲೀಸ್ ಆಗಿದೆ. ರಾಜ್ ಬಿ ಶೆಟ್ಟಿ ಮೂಗು ಚುಚ್ಚಿಸಿಕೊಂಡು ನಿಜವಾದ ಮೂಗುತಿ ಧರಿಸಿದ್ದಾರೆ. ಧರಿಸುವುದು ಬಳೆ. ಹೀಗಾಗಿಯೇ ಸಾಮಾನ್ಯ ಮೂಗುತಿ ಧರಿಸಲು ಮೂಗಿಗೆ ಮಾಡುವುದಕ್ಕಿಂತ ದೊಡ್ಡದಾಗಿಯೇ ಮೂಗು ಚುಚ್ಚಿದ್ದಾರೆ. ಹೀಗಾಗಿ ಮೂಗುತಿ ಧರಿಸುವ ತೂತು ದೊಡ್ಡದಾಗಿಯೇ ಇದೆ.
ರಾಜ್ ಬಿ ಶೆಟ್ಟಿಗೆ ಮೂಗು ಚುಚ್ಚಿದ, ಆ ನಂತರ ಅವರು ಅನುಭವಿಸಿದ ಕಷ್ಟಗಳು, ಚುಚ್ಚು ಮದ್ದು ತೆಗೆದುಕೊಂಡಿದ್ದು, ನೋವು ಅನುಭವಿಸಿದ್ದರ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಹುಚ್ಚು ಕಲೆಗೆ ಒಳ್ಳೆಯದು. ಟೋಬಿಯ ಹುಚ್ಚಿನ ಅಭಿವ್ಯಕ್ತಿಸುವಾಗ ಪ್ರಾಮಾಣಿಕ ಪ್ರಯತ್ನದ ಅಗತ್ಯವಿತ್ತು. ಇಲ್ಲಿದೆ ಆ ಪ್ರಯತ್ನದ ಒಂದು ತುಣುಕು ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ರಾಜ್ ಬಿ ಶೆಟ್ಟಿ ಹಂಚಿಕೊಂಡಿದ್ದಾರೆ.
ಟಿಕೆ ದಯಾನಂದ್ ಅವರ ಕಥೆಗೆ ರಾಜ್ ಬಿ.ಶೆಟ್ಟಿ ಚಿತ್ರಕಥೆ ಬರೆದಿದ್ದಾರೆ. ನಿರ್ಮಾಪಕರೂ ಆಗಿದ್ದಾರೆ. ಅವರೇ ಹೀರೋ. ನಿರ್ದೇಶನ ಬಾಸಿಲ್ ಅವರದ್ದು. ಚೈತ್ರಾ ಆಚಾರ್ ಮತ್ತು ಸಂಯುಕ್ತಾ ಹೆಗಡೆ ನಾಯಕಿಯರು. ಆಗಸ್ಟ್ 21ಕ್ಕೆ ಟೋಬಿ ಥಿಯೇಟರಿಗೆ ಬರಲಿದ್ದಾನೆ.



