ಮೊನ್ನೆ ಮೊನ್ನೆಯಷ್ಟೇ ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿನ ಸಮಾಧಿ ನೆಲಸಮ ಆದಾಗ ವಿಷ್ಣು ಅಭಿಮಾನಿಗಳು ಆಕ್ರೊಶ ಗೊಂಡಿದ್ದರು. ಅಭಿಮಾನವನ್ನು ವಿಕೃತಿ ಮಾಡಿಕೊಂಡಿದ್ದವನೊಬ್ಬ ಈಗ ಡಾ.ರಾಜ್ ಅಭಿಮಾನಿಗಳ ಕ್ಷಮೆ ಕೇಳಿದ್ದಾನೆ.
ವಿಷ್ಣು ಅಭಿಮಾನಿಗಳಿಗೆ ನೋವಾಗಿದ್ದಕ್ಕೆ ಕಾರಣ ಇದೆ. ಕೆಂಗೇರಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ಜಾಗ ವಿಷ್ಣುವರ್ಧನ್ ಅವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶವಾಗಿದ್ದ ಜಾಗ. ಪುಣ್ಯಭೂಮಿ. ಹೀಗಾಗಿಯೇ ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಇಲ್ಲೊಬ್ಬ ವಿನೋದ್ ಶೆಟ್ಟಿ ಎಂಬ ಅಭಿಮಾನಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದ. ವಿಕೃತಿಯನ್ನೂ ಮೆರೆದಿದ್ದ.
ವಿಷ್ಣುವರ್ಧನ್ ಅವರ ಸಮಾಧಿ ಧ್ವಂಸಕ್ಕೆ ರಾಜ್ ಕುಟುಂಬವೇ ಕಾರಣ. ರಾಜ್ ಒಬ್ಬ ಅಯೋಗ್ಯ. ಅವನಷ್ಟೇ ಅಲ್ಲ, ಶಿವಣ್ಣ, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಎಲ್ಲರೂ ಯೂಸ್ ಲೆಸ್. ವಿನೋದ್ ರಾಜ್ ಡಾ.ರಾಜ್ ಅವರಿಗೆ ಹುಟ್ಟಿದ್ದಾನೆ. ನಟಿ ಲೀವಾವತಿ, ಗೀತಾ ಅವರ ಜೊತೆ ಎಲ್ಲ ಆಡಿದ ಆಟ ಗೊತ್ತು.. ಎಂದು ಡೈಲಾಗ್ ಹೊಡೆದಿದ್ದ. ಈತನ ವಿಡಿಯೋ ಹೊರ ಬಂದ ನಂತರ ಸ್ವತಃ ವಿಷ್ಣು ಅಭಿಮಾನಿಗಳೂ ಈತನ ಬಗ್ಗೆ ಬೇಸರ ಪಟ್ಟುಕೊಂಡಿದ್ದರು. ಡಾ.ರಾಜ್ ಕುಟುಂಬದ ಅಭಿಮಾನಿಗಳು ಈತನ ಫೋನ್ ನಂಬರಿಗೆ ಫೋನ್ ಮಾಡಿ ಜಗಳವನ್ನೇ ಮಾಡಿದ್ದರು. ಏಕೆಂದರೆ, ಈತ ತನ್ನ ವಿಡಿಯೋದಲ್ಲಿ ತನ್ನ ಪೋನ್ ನಂಬರ್ ಕೊಟ್ಟು, ತಾಕತ್ತಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದ.
ಇದಾದ ಮೇಲೆ ಕೇವಲ ರಾಜ್ ಅಭಿಮಾನಿಗಳಷ್ಟೇ ಅಲ್ಲ, ಬೇರೆ ಕಲಾವಿದರ ಅಭಿಮಾನಿಗಳೂ ಫೋನ್ ಮಾಡಿ ವಿನೋದ್ ಶೆಟ್ಟಿಗೆ ಗ್ರಹಚಾರ ಬಿಡಿಸಿದ್ದರು. ಚಿಕ್ಕಮಗಳೂರಿನವನಾದ ವಿನೋದ್ ಶೆಟ್ಟಿ ಕೊನೆಗೆ ಬೇಸತ್ತು ಸ್ವಿಚ್ ಆಫ್ ಮಾಡಿಕೊಂಡಿದ್ದ. ಕಾಟಕ್ಕೆ ಬೇಸತ್ತು ಪೊಲೀಸರ ಮೊರೆ ಹೋದಾಗ.. ವಿಷಯ ತಿಳಿದ ಪೊಲೀಸರು ಮೊದಲಿಗೆ ನಿನ್ನನ್ನೇ ಒಳಗೆ ಹಾಕಬೇಕಾಗುತ್ತೆ. ಹುಷಾರ್.. ಕ್ಷಮೆ ಕೇಳಿ ವಿಷಯ ಬಗೆಹರಿಸಿಕೋ.. ಎಂದು ಬುದ್ದಿವಾದ ಹೇಳಿದ್ದಾರೆ. ಕೊನೆಗೆ ಚಿಕ್ಕಮಗಳೂರಿನ ವಿನೋದ್ ಶೆಟ್ಟಿ ಇನ್ನೊಂದು ವಿಡಿಯೋ ಮಾಡಿ..
ʻʻಕರ್ನಾಟಕದ ಜನರಲ್ಲಿ ಒಂದು ಮನವಿ ಹಾಗೂ ಕ್ಷಮೆ ಇದೆ. ರಾಜ್‌ಕುಮಾರ್ ಅವ್ರ ಬಗ್ಗೆ ನಾನು ಮಾತನಾಡಬಾರದಿತ್ತು. ಇದಕ್ಕೆ ಕಾರಣ ಏನಂದ್ರೆ, ಈ ಹಿಂದೆ ವಿಷ್ಣುವರ್ಧನ್ ಸಮಾಧಿ ಬಗ್ಗೆ ಮನವಿ ಮಾಡಿ ಸರ್ಕಾರಕ್ಕೆ ಒಂದು ವಿಡಿಯೋ ಮಾಡಿದ್ದೆ. ಆಗ ರಾಜ್ ಅಭಿಮಾನಿಗಳು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ನನ್ನ ಬಗ್ಗೆ ಮಾತನಾಡಿದ್ರೆ ತೊಂದರೆ ಇರಲಿಲ್ಲ. ಆದರೆ ವಿಷ್ಣು ಅಪ್ಪಾಜಿ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ರು. ಆ ದ್ವೇಷದಿಂದ, ಸಮಾಧಿ ಹೊಡೆದು ಹಾಕಿದ ಬೇಸರದಲ್ಲಿ ನಾನು ಈ ರೀತಿ ಮಾತನಾಡಿ ವಿಡಿಯೋ ಮಾಡಿದ್ದೆ. ರಾಜ್ ಕುಟುಂಬದಿಂದ ನನಗೆ ಒಂದು ಪೈಸೆ ಅನ್ಯಾಯ ಆಗಿಲ್ಲ. ಮೋಸ ಆಗಿಲ್ಲ. ಆದೆರೆ ದೊಡ್ಮನೆ ಬಗ್ಗೆ ಆ ರೀತಿ ಮಾತನಾಡಬಾರದಿತ್ತು. ಅದಕ್ಕೆ ಕ್ಷಮೆ ಇರಲಿ. ದಯವಿಟ್ಟು ರಾಜ್ ಕುಟುಂಬ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವರು ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅವರಿಗೆ ಜಾಗ ಕೊಟ್ಟಂತೆ ವಿಷ್ಣು ಅವರಿಗೂ ಜಾಗ ಕೊಡಬೇಕುʼʼ ಎಂದು ಕ್ಷಮೆ ಕೇಳಿದ್ದಾನೆ.
ವಾಸ್ತವವಾಗಿ ವಿಷ್ಣು ಹೆಸರಿನಲ್ಲಿ ಮೈಸೂರಿನಲ್ಲೊಂದು ಎರಡೂವರೆ ಎಕರೆಯ ದೊಡ್ಡ ಸ್ಮಾರಕವೇ ಇದೆ. ಅಲ್ಲಿ ಪುತ್ಥಳಿ, ಪುಟ್ಟದೊಂದು ಸ್ಟುಡಿಯೋ, ಅಪರೂಪದ ಭಾವಚಿತ್ರಗಳ ಪ್ರದರ್ಶನ, ಟೆಕ್ನಾಲಜಿ ಎಲ್ಲವೂ ಇದೆ. ಹಾಗೆ ನೋಡಿದರೆ.. ಕನ್ನಡದ ಯಾವುದೇ ನಟರಿಗೂ ಅಂತಹ ಸೌಲಭ್ಯ ಇಲ್ಲ. ವಿಷ್ಣು ಹೆಸರಿನಲ್ಲಿ 14 ಕಿಲೋಮೀಟರ್ ಉದ್ದದ ರಸ್ತೆಯೂ ಬೆಂಗಳೂರಿನಲ್ಲಿದೆ. ಇನ್ಯಾರ ಹೆಸರಿನಲ್ಲಿಯೂ ರಾಜ್ಯದಲ್ಲಿ ಅಷ್ಟು ಉದ್ದದ ರಸ್ತೆ ಇಲ್ಲ.



