ಅವನು ಬಿಡಪ್ಪಾ.. ಅಂಗೈಯಲ್ಲೇ ಅರಮನೆ ಕಟ್ತಾನೆ.. ಮಾತಲ್ಲೇ ಮರುಳು ಮಾಡ್ತಾನೆ.. ಸಖತ್ ಸ್ಮಾರ್ಟ್.. ಸಖತ್ ಬ್ರಿಲಿಯಂಟ್.. ಮಾತ್ ಮಾತಲ್ಲೇ ಮಿಂಚು ಹೊಡೆಸ್ತಾನೆ.. ಏನ್ ಮಾತಾಡ್ತಾನ್ ಗುರೂ.. ಅವನು ಹೇಳಿದ್ನೆಲ್ಲ ನಂಬಬೇಕು ಅನ್ಸುತ್ತೆ.. ಏನೇ ಆಗ್ಲಿ.. ಶೀ ಈಸ್ ಇಂಟೆಲಿಜೆಂಟ್.. ಸ್ಮಾರ್ಟ್.. ಈ ಮಾತನ್ನು ಹಲವು ಬಾರಿ ಕೇಳಿರ್ತೀವಿ. ನಾವೂ ಕೆಲವರಿಗೆ ಹೇಳಿರ್ತೀವಿ. ಆದರೆ.. ಅವರ ರಾಶಿ ಯಾವುದು ಎಂದು ಗೊತ್ತಾದರೆ.. ತಿಳಿದುಕೊಳ್ಳೋದು ಸುಲಭ. ಅಂತಹ ಕೆಲವು ರಾಶಿಗಳ ಗುಣ ಲಕ್ಷಣ ಇಲ್ಲಿದೆ.
ವೃಷಭ ರಾಶಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ಗ್ರಹದ ರಾಶಿ. ಶಾಂತ ಹಾಗೂ ಪ್ರಸನ್ನ ಮನೋಭಾವ. ವ್ಯಕ್ತಿತ್ವದಲ್ಲಿ ಮಾತ್ರವಲ್ಲ ಸ್ವರದಲ್ಲಿ ಕೂಡ ನಾವು ಇದೇ ಪ್ರಸನ್ನತೆ ಹಾಗೂ ಶಾಂತತೆಯನ್ನು ನಾವು ಅವರಿಂದ ನಿರೀಕ್ಷಿಸಬಹುದು. ತಾಳ್ಮೆ ಇವರ ಶಕ್ತಿ. ಧ್ವನಿ ಇಂಪಾಗಿರುತ್ತದೆ. ವೃಷಭ ರಾಶಿಯವರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಅತ್ಯಂತ ಪ್ರಾಯೋಗಿಕವಾಗಿರುತ್ತಾರೆ ಹಾಗೂ ನೈಜ ಚಿತ್ರಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಅವರ ಮನಸ್ಸಿನಲ್ಲಿರುವಂತಹ ದೃಢ ನಿಲುವನ್ನು ಅವರ ಧ್ವನಿ ಪ್ರತಿನಿಧಿಸುತ್ತದೆ. ಜೀವನದ ಬಗ್ಗೆ ಇರುವಂತಹ ಅವರ ಅನುಭವವೇ ಅವರ ಧ್ವನಿಯ ಮೂಲಕ ಹೊರಬರುತ್ತದೆ. ಹೀಗಾಗಿ ಅವರು ಆಡುವಂತಹ ಪ್ರತಿಯೊಂದು ಮಾತುಗಳು ಕೂಡ ಅರ್ಥಗರ್ಭಿತವಾಗಿ ಹಾಗೂ ತೂಕದಿಂದ ಕೂಡಿರುತ್ತದೆ.
ಕರ್ಕಾಟಕ ರಾಶಿ : ಕರ್ಕ ರಾಶಿಯವರು ಕೂಡ ತಮ್ಮ ಮೃದು ಸ್ವಭಾವ ಹಾಗೂ ಮೃದು ಧ್ವನಿಗಾಗಿ ಹೆಸರುವಾಸಿ. ಪ್ರತಿಯೊಬ್ಬರಿಗೂ ಕೂಡ ಇವರ ಮೃದು ಧ್ವನಿ ಇಷ್ಟವಾಗುತ್ತೆ. ಅವರ ಧ್ವನಿಯೇ ಅವರ ವ್ಯಕ್ತಿತ್ವದ ರೂಪದಲ್ಲಿ ಬೇರೆಯವರ ಎದುರುಗಡೆಯಲಿ ಪ್ರತಿಫಲಿಸುತ್ತದೆ. ಕರ್ಕಾಟಕ ರಾಶಿಯವರ ಸ್ನೇಹ ಮಿಸ್ ಮಾಡಿಕೊಳ್ಳಬೇಡಿ.
ತುಲಾ ರಾಶಿ : ತುಲಾ ರಾಶಿಯವರು ತಾವು ತಮ್ಮ ಮಧುರ ಭಾಷೆಯಿಂದ ಹಾಗೂ ಧ್ವನಿಯಿಂದ ಮಾತನಾಡುವ ಮೂಲಕ ಅವುಗಳನ್ನು ತಣ್ಣಗೆ ಮಾಡುವಂತಹ ಸಾಮರ್ಥ್ಯವನ್ನು ಕೂಡ ಹೊಂದಿರುತ್ತಾರೆ. ಕೇವಲ ಇವರ ವಾಯ್ಸ್ ಮಾತ್ರವಲ್ಲದ ಇವರ ವ್ಯಕ್ತಿತ್ವ ಕೂಡ ಇದಕ್ಕೆ ಸರಿಯಾದ ರೀತಿಯಲ್ಲಿ ಪೂರಕವಾಗಿರುತ್ತದೆ. ಸಮಾಜದಲ್ಲಿ ತುಲಾ ರಾಶಿಯವರ ವ್ಯಕ್ತಿತ್ವವನ್ನು ಕೂಡ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ.
ಕುಂಭ ರಾಶಿ : ಕುಂಭ ರಾಶಿಗೆ ಸೇರಿದ ಜನರು ಅತ್ಯುತ್ತಮವಾದ ಜ್ಞಾನವನ್ನು ಹೊಂದಿರುತ್ತಾರೆ. ಇವರು ಎಲ್ಲರಿಗಿಂತ ವಿಭಿನ್ನವಾಗಿ ಯೋಚಿಸುತ್ತಾರೆ. ವರಿಗೆ ಹೊಸ ವಿಚಾರಗಳನ್ನು ಕಲಿಯುವುದು ಮತ್ತು ಸಂಶೋಧನೆಯನ್ನು ಮಾಡುವುದು ಬಹಳ ಇಷ್ಟದ ವಿಷಯ. ಐಕ್ಯೂ ಕೂಡಾ ಚೆನ್ನಾಗಿರುತ್ತದೆ.
ಧನು ರಾಶಿ : ವೃತ್ತಿ ಜೀವನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಮತ್ತು ಕೆಲಸದ ಸ್ಥಳದಲ್ಲಿನ ರಾಜಕೀಯವನ್ನು ಉತ್ತಮ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. ಇವರ ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಬಹಳ ಗಂಭೀರವಾಗಿರುತ್ತಾರೆ ಮತ್ತು ಗುರಿಯನ್ನು ತಲುಪಲು ಉತ್ತಮ ಯೋಜನೆ ಮತ್ತು ಕಠಿಣ ಪರಿಶ್ರಮವನ್ನು ಪಡುತ್ತಾರೆ. ಇವರ ಬುದ್ಧಿವಂತಿಕೆ ಮತ್ತು ಧೈರ್ಯದಿಂದಾಗಿ ಇವರು ವಿಭಿನ್ನವಾಗಿ ನಿಲ್ಲುತ್ತಾರೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಗೆ ಸೇರಿದ ಜನರು ಸಾಕಷ್ಟು ಬಲವಾದ ದೃಢಸಂಕಲ್ಪವನ್ನು ಹೊಂದಿರುತ್ತಾರೆ. ಎಲ್ಲಾ ವಿಷಯಗಳನ್ನು ಸರಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಸ್ವಭಾವದಿಂದ ಅತ್ಯುತ್ತಮರಾಗಿರುತ್ತಾರೆ ಮತ್ತು ಸತ್ಯವನ್ನು ತಿಳಿಯಲು ಇವರು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಇವರು ಕೆಲಸದ ಸ್ಥಳದಲ್ಲಿ ಇತರ ವ್ಯಕ್ತಿಗಳೊಂದಿಗೆ ಉತ್ತಮ ಸಾಮರಸ್ಯವನ್ನು ಹೊಂದಿರುತ್ತಾರೆ.
ಕನ್ಯಾ ರಾಶಿ : ಇವರು ಪ್ರತಿಯೊಂದು ವಿಷಯವನ್ನು ಗಂಭೀರವಾಗಿ ನೋಡುತ್ತಾರೆ ಮತ್ತು ಇವರಿಗೆ ಒಗಟು ಬಿಡಿಸುವುದೆಂದರೆ ಬಹಳ ಇಷ್ಟ. ಹಾಗಾಗಿ ಕನ್ಯಾ ರಾಶಿಗೆ ಸೇರಿದ ಜನರು ತಮ್ಮ ಕೆಲಸಗಳಿಗೆ ಹೆಚ್ಚು ಗಮನವನ್ನು ನೀಡುವ ಮೂಲಕ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ.



