ಉಡುಪಿಯ ನೇತ್ರಾ ಕಾಲೇಜಿನಲ್ಲಿ (Udupi) ನಡೆದ ಟಾಯ್ಲೆಟ್`ನಲ್ಲಿ ಮೊಬೈಲ್ ಕ್ಯಾಮೆರಾ (Toilet camera) ಇಟ್ಟು, ಅಶ್ಲೀಲ ಫೋಟೋ (Abuse photo) ತೆಗೆಯಲು ಪ್ರಯತ್ನಿಸಿದ್ದ ಪ್ರಕರಣವೇ ಇನ್ನೂ ಮುಗಿದಿಲ್ಲ. ಅದನ್ನು ಮೀರಿಸುವ ಘಟನೆ ಹುಬ್ಬಳ್ಳಿಯಲ್ಲಿ ನಡೆದೇ ಹೋಗಿದೆ. ಹುಬ್ಬಳ್ಳಿಯ (Hubballi) ಸಮರ್ಥ ಕಾಲೇಜ್ (Samartha College) ವಿದ್ಯಾರ್ಥಿನಿಯನ್ನು (Female Student) ಟಾರ್ಗೆಟ್ ಮಾಡಿ, ಅವರ ಸೋಷಿಯಲ್ ಮೀಡಯಾ ಅಕೌಂಟ್ ಹೆಸರಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋವನ್ನು ಅಪ್`ಲೋಡ್ ಮಾಡಲಾಗಿದೆ. ಯಾರದ್ದೋ ನಗ್ನ ದೇಹಕ್ಕೆ ವಿದ್ಯಾರ್ಥಿನಿಯರ ಮುಖವನ್ನು (Morphed Photos) ಸೇರಿಸಿ ಅಪ್`ಲೋಡ್ ಮಾಡಲಾಗಿದೆ.
ಇದು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಪ್ರಕರಣವೀಗ ಅಕ್ಷರಶಃ ವಾಣಿಜ್ಯ ನಗರಿಯನ್ನು (Hubballi) ತಲ್ಲಣಗೊಳಿಸಿದೆ. ಸಮರ್ಥ ಪಿಯು ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರನ್ನೇ (College lady student) ಟಾರ್ಗೆಟ್ ಮಾಡುತ್ತಿದ್ದು, ಇನ್ಸ್‍ಟಾಗ್ರಾಂ (Instagram) ಖಾತೆಯಲ್ಲಿ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ (Morphed Photos) ಎಡಿಟ್ ಮಾಡಿ ಅವರದೇ ಕಾಲೇಜಿನ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಪೊಲೀಸ್ ಕಮೀಷನರ್ (Hubballi Police Commissioner) ಕಾರ್ಯಪ್ರವೃತ್ತರಾಗಿ ಕಾಲೇಜಿಗೆ ಭೇಟಿ ನೀಡಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರೊಂದಿಗೆ ವಿಚಾರಣೆ ನಡೆಸಿದ್ದಾರೆ.
3 ತಿಂಗಳಿಂದ ನಡೆಯುತ್ತಿತ್ತು ಕ್ರೈಂ : ವಿಚಿತ್ರವೆಂದರೆ ಇದು ಬೆಳಕಿಗೆ ಬಂದಿರುವುದು ಈಗ. ಆದರೆ, ಇಂತಹ ಘಟನೆಗಳು 3 ತಿಂಗಳಿಂದಲೂ ನಡೆಯುತ್ತಿದ್ದು, ವಿದ್ಯಾರ್ಥಿನಿಯರು ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ಹೇಳಿದ್ದರಂತೆ. ಇನ್ಸ್‍ಟಾಗ್ರಾಂನಲ್ಲಿ ಮುಂದಿನ ವಿದ್ಯಾರ್ಥಿನಿ ಯಾರು ಎಂದು ಕೂಡಾ ಹಾಕಿ, ಆ ಹುಡುಗಿಯ ಫೋಟೋವನ್ನು ಕೆಟ್ಟದಾಗಿ ಎಡಿಟ್ ಮಾಡಿ ಪೋಸ್ಟ್ ಮಾಡಲಾಗುತ್ತಿದೆ. ಕೆಲ ವಿದ್ಯಾರ್ಥಿನಿಯರು ಹೆದರಿ ಮನೆಯಲ್ಲಿ ಈ ವಿಷಯ ತಿಳಿಸದೇ ಸುಮ್ಮನಿದ್ದರೆ, ಇನ್ನೂ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸೈಬರ್ ಪೊಲೀಸರಿಗೆ (Cyber police) ದೂರು ಸಲ್ಲಿಸಿದ್ದಾರೆ. ಪಾಲಕರು ಈ ವಿಷಯ ಕುರಿತು ಆಡಳಿತ ಮಂಡಳಿ ಜತೆ ಚರ್ಚೆ ಮಾಡಿದ ಮರುಕ್ಷಣವೇ ಸೈಬರ್ ವಂಚಕರಿಗೆ ಗೊತ್ತಾಗಿದೆ. ಈ ಪ್ರಕರಣದಲ್ಲೂ ಅಷ್ಟೇ, ಆರಂಭದಲ್ಲಿ ಪೊಲೀಸರು ಇಡೀ ಪ್ರಕರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಂತೆ.
ಧಮ್ ಇದ್ರೆ ನಮ್ಮನ್ನು ಹಿಡೀರಿ ಎಂದು ಪೊಲೀಸರಿಗೇ ಚಾಲೆಂಜ್ : ಪೊಲೀಸರು ತನಿಖೆ ಆರಂಭಿಸಿದ್ದರೆ, ಸೈಬರ್ ಕ್ರಿಮಿನಲ್ಸ್ ಪೊಲೀಸರಿಗೇ ಚಾಲೆಂಜ್ ಹಾಕಿದ್ದಾರೆ. ನೀವು ಯಾರಿಗೆ ಹೇಳಿದರೂ ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಇನ್ನಷ್ಟುಚಿತ್ರಗಳು ಬರುತ್ತವೆ ಎಂಬ ಬೆದರಿಕೆ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಪೊಲೀಸರಿಗೆ ಸವಾಲೆಸೆದು ಧಮ್ ಇದ್ದರೆ ನಮ್ಮನ್ನು ಹಿಡಿಯಿರಿ ಎಂದು ಪೊಸ್ಟ್ ಮಾಡಲಾಗಿದೆ. ಕೆಳಗಡೆ ಜೈ ಟಿಪ್ಪು ಸುಲ್ತಾನ್ (Jai Tippu Sulthan) ಎಂಬ ಅಡಿ ಬರಹ ಕೂಡ ಬರೆದಿದ್ದಾರೆ.
ಕಾಲೇಜಿನಲ್ಲೇ ಇದ್ದಾರೆ ಕ್ರಿಮಿನಲ್ಸ್ : ಕಾಲೇಜಿನ ಆಡಳಿತ ಮಂಡಳಿ, ಪೋಷಕರ ಜೊತೆ ನಡೆಸಿದ ಮಾತುಕತೆ ವಿವರಗಳು ಕಾಲೇಜಿನಲ್ಲಷ್ಟೇ ಗೊತ್ತಿರುತ್ತವೆ. ಅದೂ ಅವರು ಹೊರಗೆ ಹೇಳಿಕೊಂಡಾಗಷ್ಟೇ ಗೊತ್ತಾಗುತ್ತವೆ. ಪೊಲೀಸರದ್ದೂ ಅಷ್ಟೆ. ಆದರೆ, ಇವುಗಳಿಗೂ ತಕ್ಷಣ ರಿಯಾಕ್ಷನ್ ಬೀಳುತ್ತಿವೆ. ಕಾಲೇಜಿನಲ್ಲಿನ ಚಟುವಟಿಕೆ ಅದ್ಹೇಗೆ ಸೈಬರ್ ವಂಚಕರಿಗೆ ಗೊತ್ತಾಗುತ್ತದೆ ಎಂಬುದು ಇದೀಗ ಎದ್ದಿರುವ ಪ್ರಶ್ನೆ. ಇದನ್ನೆಲ್ಲ ನೋಡಿದರೆ ಸೈಬರ್ ವಂಚಕರ ಗುಂಪಿನಲ್ಲಿ ಕಾಲೇಜಿನಲ್ಲಿನ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಜತೆಗೆ ಯುವತಿಯರು ಯಾರ್ ಯಾರ ಮೇಲೆ ಅನುಮಾನ ಪಟ್ಟಿದ್ದಾರೋ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. . ಯುವತಿಯರು ಮಾತನಾಡುತ್ತಿರುವ ಎಲ್ಲ ವಿಚಾರಗಳು ಆರೋಪಿಗಳಿಗೆ ತಿಳಿಯುತ್ತಿವೆ ಎಂಬ ಮಾಹಿತಿ ವಿದ್ಯಾರ್ಥಿಗಳಿಂದ ಲಭ್ಯವಾಗಿದೆ. ಹೀಗಾಗಿ, ವಿದ್ಯಾರ್ಥಿಯೇ ಆಗಿರಬಹುದು ಎಂಬ ಅನುಮಾನವಿದೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ .
ಈ ಪ್ರಕರಣ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನಲ್ಲಿ ಏನು ಕ್ರಮಕೈಗೊಂಡಿದ್ದಾರೆ ಎಂಬುದರ ಬಗ್ಗೆಯೂ ವಿಚಾರಣೆ ನಡೆಯುತ್ತಿದ್ದು, ಪೊಲೀಸರು ನೊಂದ ವಿದ್ಯಾರ್ಥಿನಿಯರಿಗೆ ಹಾಗೂ ಪೋಷಕರಿಗೆ ಧೈರ್ಯ ಹೇಳಿ, ದೂರು ಪಡೆಯುತ್ತಿದ್ದಾರೆ.



