ಪೊಲೀಸ್ ಕಸ್ಟಡಿಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್, ಈಗ ಜೈಲಿನಲ್ಲಿ ಎಲ್ಲರಂತೆಯೇ ಒಬ್ಬ ಖೈದಿ. ಅಷ್ಟೆ. ಪ್ರತಿ ದಿನ ನಾನ್ ವೆಜ್ ಬಿಟ್ಟು, ಬೇರೆ ಊಟ ಮಾಡದಿದ್ದ ದರ್ಶನ್ ಎಲ್ಲರಂತೆಯೇ ಮುದ್ದೆ, ಚಪಾತಿ, ತಿಳಿಸಾರು, ಮಜ್ಜಿಗೆ ಊಟ ಮಾಡಬೇಕಷ್ಟೆ. 12 ದಿನ ಕಸ್ಟಡಿಯಲ್ಲಿದ್ದಾಗ ಊಟಕ್ಕೆ ಹಲವಾರು ಬಾರಿ ಬ್ರೇಕ್ ಹಾಕಿಕೊಂಡಿದ್ದ ದರ್ಶನ್, ಎಷ್ಟೋ ಬಾರಿ ಜ್ಯೂಸ್ ಕುಡಿದುಕೊಂಡೇ ಇರುತ್ತಿದ್ದರು. ಜೊತೆಗೆ ವಿಚಾರಣೆ, ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆ ಎಲ್ಲವನ್ನೂ ಎದುರಿಸಿದ್ದ ದರ್ಶನ್, ಈ ಅವಧಿಯಲ್ಲಿ ಸುಮಾರು 3 ಕೆಜಿಗೂ ಹೆಚ್ಚು ತೂಕ ಕಳೆದುಕೊಂಡಿದ್ದಾರಂತೆ.
107 ಕೆಜಿ ತೂಕ ಇದ್ದ ದರ್ಶನ್ ಅವರ ದೇಹ ತೂಕ ಈಗ 100 ಕೆಜಿಯ ಆಸುಪಾಸು ಇದೆ. ದಿನಪತ್ರಿಕೆಗಳನ್ನೂ ಓದುತ್ತಿಲ್ಲ. ದರ್ಶನ್ ಅವರ ಜೊತೆ ಸಹಚರ ವಿನಯ್ ಇದ್ದು, ಆತನೊಂದಿಗೆ ಹರಟೆ ಹೊಡೆದಿದ್ದಾರೆ.
ಕುಟುಂಬದವರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಇನ್ನು ಪವಿತ್ರಾ ಗೌಡ ಜೈಲಿನಲ್ಲಿ ಬ್ಲಾಂಕೆಟ್ ವಿಷಯಕ್ಕೆ ಸಿಬ್ಬಂದಿಯ ಜೊತೆ ಜಗಳ ಮಾಡಿಕೊಂಡಿದ್ದಾರೆ. ತೀರಾ ಅತಿರೇಕಕ್ಕೆ ಹೋದಾಗ ಇದು ಜೈಲು ಎನ್ನುವುದನ್ನು ಖಡಕ್ಕಾಗಿ ಹೇಳಿದ್ರಂತೆ ಜೈಲ್ ಪೊಲೀಸ್.



