ಇತ್ತೀಚೆಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ಹೊಸ ಬಿಪಿಎಲ್ ಕಾರ್ಡುಗಳಿಗೆ (BPL Card) ಅರ್ಜಿಗಳು ಬಂದಿದ್ದು ಶೀಘ್ರದಲ್ಲಿಯೇ ಅವುಗಳನ್ನೂ ಪೂರೈಸುವ ಬಗ್ಗೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದರು. ಆದರೆ ಈಗ ಅದು ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ. ಹೊಸದಾಗಿ ಬಿಪಿಎಲ್ ಕಾರ್ಡ್ಗಾಗಿ (BPL Card) ಅರ್ಜಿ ಹಾಕಿರುವವರ ಬಗ್ಗೆ ಮಾತನಾಡಿದ ಸಚಿವ ಕೆ.ಹೆಚ್.ಮುನಿಯಪ್ಪ ಅರ್ಜಿ ಹಾಕಿದ್ದರೆ ಆದ್ಯತೆ ಮೇಲೆ ಕೊಡುತ್ತೇವೆ. ಬಿಪಿಎಲ್ ಕಾರ್ಡ್ (BPL Card) ಪಡೆಯಬೇಕು ಎನ್ನುವವರು ಅಕ್ಕಿಗಿಂತ ಆರೋಗ್ಯ ಸೇವೆ, ವೈದ್ಯಕೀಯ ವೆಚ್ಚ ಭರಿಸುವ ಸಲುವಾಗಿ ಬಿಪಿಎಲ್ ಕಾರ್ಡ್ (BPL Card) ಕೇಳುತ್ತಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ಹಾಗೆಂದು ತುಂಬಾ ವಿಳಂಬವೇನೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಈ ಮಧ್ಯೆ ಈಗಾಗಲೇ ಕಾರ್ಡ್ ಇರುವವರಿಗೆ ಮಾತ್ರ ಶಾಕ್ ಕೊಟ್ಟಿದ್ದಾರೆ.
ಆಹಾರ ಇಲಾಖೆ ವತಿಯಿಂದ ಒಂದು ಸರ್ವೆ ನಡೆಸಲಾಗುತ್ತಿದ್ದು, 6 ಮಾನದಂಡಗಳನ್ನಿಟ್ಟುಕೊಂಡು ಸಮೀಕ್ಷೆ ಮಾಡುತ್ತಿದ್ದಾರೆ. ಅವುಗಳ ಪ್ರಕಾರ ಆ 6ರಲ್ಲಿ ಒಂದು ಕ್ವಾಲಿಟಿ ಇದ್ದರೂ, ಬಿಪಿಎಲ್ ಕಾರ್ಡುದಾರರು (BPL Card) , ಎಪಿಎಲ್ ಕಾರ್ಡು(APL Card)ದಾರರಾಗಲಿದ್ದಾರೆ.
ಈ ಹಿಂದೆ ಐಷಾರಾಮಿ ಕಾರುಗಳನ್ನು (Luxury Car) ಹೊಂದಿರುವ 12,012 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೆ ಅಂಥದೇ ಕಾರ್ಯಾಚರಣೆ ನಡೆಸಲು ಇಲಾಖೆ ಮುಂದಾಗಿದ್ದು, ಈ ಸಂಬಂಧ ನಾಲ್ಕು ಚಕ್ರದ ಕಾರುಗಳ ನೋಂದಣಿಯಾಗಿರುವ ವಿವರಗಳನ್ನು ನೀಡುವಂತೆ ಪ್ರಾದೇಶಿಕ ಸಾರಿಗೆ ಕಚೇರಿ (RTO) ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಸರಕಾರಿ ಉದ್ಯೋಗ ಹೊಂದಿರುವವರು, ಸಾಕಷ್ಟು ಕೃಷಿ ಜಮೀನು ಹೊಂದಿರುವವರು ಮತ್ತಿತರರು ಕೂಡ ಬಡವರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಮುಂದಾಗಿದ್ದಾರೆ. ಈ ಹಿಂದೆ ಇಂತಹ ಅನರ್ಹರನ್ನು ಪತ್ತೆ ಹಚ್ಚಿ, ಈ ಪೈಕಿ 3.33 ಲಕ್ಷ ಕಾರ್ಡ್ಗಳನ್ನು(BPL Card) ಅರ್ಹತಾ ಮಾನದಂಡಗಳನ್ನು ಅನುಸರಿಸಿ (APL Card) ಎಪಿಎಲ್ ಕಾರ್ಡ್ಗಳನ್ನಾಗಿ ಪರಿವರ್ತಿಸಲಾಯಿತು. ತದನಂತರ ಕೆಲ ದಿನ ಆ ಕಾರ್ಯ ನಿಲ್ಲಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಬಿಪಿಎಲ್ ಕಾರ್ಡ್ದಾರರಿಗೆ ಭರಪೂರ ಅಕ್ಕಿ, ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ. ಹಣವನ್ನೂ ನೀಡಲಾಗುತ್ತದೆ. ಹೀಗಾಗಿ, ಕಾರ್ಡ್ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅರ್ಹರಲ್ಲದವರೂ ಕಾರ್ಡ್ಗಳನ್ನು ಮಾಡಿಸಿರುವ ಹಿನ್ನೆಲೆಯಲ್ಲಿಅಂತಹವುಗಳನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.
ಅನರ್ಹರು ಯಾರು?
1.ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು.
2. ಸರಕಾರಿ ನೌಕರರು.
3. ಇತರ ಆದಾಯ ತೆರಿಗೆ ಪಾವತಿದಾರರು.
4. ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್ಯು) ಅಥವಾ ಸರಕಾರಿ ನೆರವಿನ ಸ್ವಾಯತ್ತ ಸಂಸ್ಥೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿಕೆಲಸ ಮಾಡುವವರು.
5. ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್ಗಿಂತ ಹೆಚ್ಚು ಭೂಮಿ ಹೊಂದಿರುವ ಕುಟುಂಬಗಳು.
6. ವಾರ್ಷಿಕ ಆದಾಯ 1.2 ಲಕ್ಷಕ್ಕಿಂತ ಹೆಚ್ಚು ಹೊಂದಿರುವ ಕುಟುಂಬಗಳು.
ಮಿತಿ ಜಾಸ್ತಿ ಆದರೂ ಕೂಡ ಸದ್ಯ ಮೂರು ಲಕ್ಷ ಅರ್ಜಿಗಳು ಹೊಸ ರೇಷನ್ ಕಾರ್ಡ್ಗಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನರ್ಹರನ್ನು ಗುರುತಿಸಿ ಅವರನ್ನು ಕೈಬಿಡಲು ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಕೈ ಬಿಟ್ಟರೆ, ನಿಜವಾಗಿಯೂ ಬಡತನ ಎದುರಿಸುತ್ತಿರುವ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂಬುವುದು ಸರ್ಕಾರದ ಮುಖ್ಯ ಉದ್ದೇಶವಾಗಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಮೂಲಕ ಸರ್ವೆಯನ್ನು ಮಾಡಲು ಮುಂದಾಗಿದೆ.



