ದರ್ಶನ್ ಊಟ ಮತ್ತು ವ್ಯಾಯಾಮಕ್ಕೆ ತೊಂದರೆಯಾಗಿದೆ. ದರ್ಶನ್ ಅವರ ವಿಗ್ ತೆಗೆಸಲಾಗಿದೆ. ದರ್ಶನ್ ಅವರು ವಿಐಪಿ ಸೆಲ್ʻನಲ್ಲಿದ್ದು, ಒಂಟಿಯಾಗಿಯೇ ಇದ್ದಾರೆ. ಪವಿತ್ರ ಗೌಡ ಅವರನ್ನು ಭೇಟಿಯಾಗುವ ಅವಕಾಶ ಇದ್ದರೂ ಭೇಟಿ ಮಾಡುತ್ತಿಲ್ಲ. ಇದೆಲ್ಲದರ ಮಧ್ಯೆ ದರ್ಶನ್ ಅವರ ವರ್ತನೆ ಹೇಗಿದೆ, ಮಾತುಕತೆ ಹೇಗಿದೆ ಅನ್ನೋದನ್ನ ನೋಡಿದ್ರೆ, ದರ್ಶನ್ ಜೈಲಿಗೆ ಬಂದ ಕೆಲವು ದಿನಗಳು ಬೇಸರದಲ್ಲಿದ್ದರು. ಅದಾದ ಮೇಲೆ ದರ್ಶನ್ ಚಟುವಟಿಕೆಯಿಂದಿದ್ದಾರೆ ಎನ್ನುತ್ತಿವೆ ಮೂಲಗಳು.
ದರ್ಶನ್ʻಗೆ ಊಟ ತಿಂಡಿಗೆ ಸಮಸ್ಯೆ ಇದ್ದರೂ, ಅದು ದೊಡ್ಡದೇನಲ್ಲ. ಊಟ, ವ್ಯಾಯಾಮಗಳನ್ನೆಲ್ಲ ಮಾಡುತ್ತಿರುವ ದರ್ಶನ್ ಸಹ ಖೈದಿಗಳ ಜೊತೆ ಆರಾಮ್ ಆಗಿದ್ದಾರೆ. ಹೊರಗಿದ್ದಾಗ ಹೇಗೆ ಬಿಂದಾಸ್ ಆಗಿದ್ದರೋ.. ಹಾಗೆಯೇ ವರ್ತಿಸುತ್ತಾರೆ. ಮಕ್ಳಾ.. ಹೊರಕ್ ಬಂದೇ ಬರ್ತೀನಿ. ರಾಜಕೀಯಕ್ಕೆ ಇಳಿದು ಗೆದ್ದು ಮಂತ್ರಿ ಆಗ್ತೀನಿ ಅಂತಿದ್ದಾರಂತೆ ದರ್ಶನ್. ಇರಬಹುದೇನೋ.. ದರ್ಶನ್ ಅವರಿಗೆ ರಾಜಕೀಯ ಹೊಸದಲ್ಲ. ಆದರೆ, ಅಧಿಕೃತವಾಗಿ ದರ್ಶನ್ ಇದೂವರೆಗೆ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿಲ್ಲ. ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಯಾವ ಪಕ್ಷ ಸೇರಿಸಿಕೊಳ್ಳಬಹುದು ಎಂಬ ಅಂದಾಜು ಮಾಡುವುದು ತುಂಬಾ ದೂರದ ಮಾತಾಯಿತು.
ಈ ಮಧ್ಯೆ ಜೈಲಲ್ಲಿ ಮನೆಯೂಟ, ಹಾಸಿಗೆ ಬಟ್ಟೆ, ಪುಸ್ತಕಗಳಿಗೆ ದರ್ಶನ್ ಹೊಸ ಅರ್ಜಿ ಸಲ್ಲಿಸಿದ್ದಾರೆ. ಜೈಲಲ್ಲಿ ಮನೆಯೂಟ, ಹಾಸಿಗೆ, ಬಟ್ಟೆ, ಪುಸ್ತಕಗಳಿಗಾಗಿ ಹೈಕೋರ್ಟ್ ಎದುರು ಹೊಸ ಅರ್ಜಿ ಸಲ್ಲಿಸಿದ್ದಾರೆ. ದರ್ಶನ್ ಅವರಿಗೆ ಜೈಲಿನ ಊಟ ದೇಹಕ್ಕೆ ಒಗ್ಗುತ್ತಿಲ್ಲ. ಭೇದಿ, ಅತಿಸಾರ ಮತ್ತಿತ್ಯಾದಿ ಸಮಸ್ಯೆ ಉಂಟಾಗುತ್ತಿದೆ, ಜೊತೆಗೆ ದೇಹದ ತೂಕ ಇಳಿಕೆ ಆಗುತ್ತಿದೆ ಎಂದು ಅವರ ಪರ ವಕೀಲರು. ಹೀಗಾಗಿ ಅವರಿಗೆ ಮನೆ ಊಟ, ಬಟ್ಟೆಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ದರ್ಶನ್ ವಕೀಲರ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ವರ್ಗಾಯಿಸಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಅರ್ಜಿಯನ್ನು ರಿಜೆಕ್ಟ್ ಮಾಡಿತ್ತು. ನಂತರ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ದರ್ಶನ್ ಪರ ವಕೀಲರು ಹಿಂಪಡೆದಿದ್ದರು.
ಈಗ ಮನೆ ಊಟ, ಬಟ್ಟೆ, ಹಾಸಿಗೆಗಾಗಿ ಮತ್ತೆ ಹೈಕೋರ್ಟ್ಗೆ ನಟ ದರ್ಶನ್ ಮೇಲ್ಮನವಿ ಸಲ್ಲಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಪ್ರಶ್ನಿಸಿ ನಟ ದರ್ಶನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್ ಎದುರು ದರ್ಶನ್ (ಖೈದಿ ನಂ.6101) ಅವರು ಕಳೆದ ಮೂರು ತಿಂಗಳ ಹಿಂದೆ ನನಗೆ ಮೂಳೆ ಸಂಬಂಧ ಶಸ್ತ್ರ ಚಿಕಿತ್ಸೆಯಾಗಿದ್ದು, ತಮಗೆ ದಿನನಿತ್ಯ ವ್ಯಾಯಾಮ ಮಾಡಬೇಕಿದೆ. ಹೀಗಾಗಿ ದೇಹಕ್ಕೆ ಪ್ರೋಟಿನ್ ಡಯಟ್ ಆಹಾರ ಅಗತ್ಯ ಇದೆ. ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ತಮಗೆ ಕಾರಾಗೃಹದಲ್ಲಿ ದೊರೆಯುವ ಆಹಾರದ ಜೊತೆ ಎಕ್ಸ್ಟ್ರಾ ಪ್ರೋಟಿನ್ ಡಯಟ್ ಆಹಾರ ಕೊಡಬೇಕು ಎಂದು ಮನವಿ ನೀಡಿದ್ದಾರೆ.



