ಬೆಂಗಳೂರು ಮತ್ತೊಮ್ಮೆ ಶಾಕ್ ಆಗಿದೆ. ಹಾಡಹಗಲೇ ನಡೆದ ಕೃತ್ಯವಿದು. ಹಾಡಹಗಲಲ್ಲೇ ಯುವಕನೊಬ್ಬನನ್ನು ಕಿಡ್ನಾಪ್ ಮಾಡಿ, ಬೆಂಕಿ ಹಚ್ಚಲಾಗಿದೆ. ಬೆಂಕಿಯಲ್ಲಿ ಅರ್ಧಕ್ಕರ್ಧ ದೇಹ ಸುಟ್ಟು ಹೋಗಿದೆ. ಬೆಂಕಿಗೆ ತುತ್ತಾಗಿರುವ ಹುಡುಗನ ಹೆಸರು ಶಶಾಂಕ್. ಈತನಿಗೆ ಬೆಂಕಿ ಹಚ್ಚಿದ್ದು ಈತನ ದೊಡ್ಡಪ್ಪ. ಕಾರಣ, ಲವ್ ಸ್ಟೋರಿ.
ಶಶಾಂಕ್ (Shashank) ಎಂಬ ಹುಡುಗ ಬೆಂಗಳೂರಿನ ರಾಜರಾಜೇಶ್ವರಿ (RR Nagar) ನಗರದ ಹುಡುಗ. ರಂಗನಾಥ್ ಮತ್ತು ಪ್ರೇಮಾ ದಂಪತಿಯ ಪುತ್ರ. ಎಸಿಎಸ್ ಕಾಲೇಜಿನಲ್ಲಿ ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ದ. ಈತನಿಗೆ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಮನು ಅವರ ಮಗಳ ಜೊತೆ ಪ್ರೀತಿ ಹುಟ್ಟಿತ್ತು. ಹುಡುಗಿ ಮೈಸೂರಿನಲ್ಲಿ ಓದುತ್ತಿದ್ದಳು. ಶಶಾಂಕ್`ಗೆ ಆ ಹುಡುಗಿ ವರಸೆಯಲ್ಲಿ ತಂಗಿಯಾಗಬೇಕಿತ್ತು. ಹೀಗಾಗಿಯೇ ಇವರಿಬ್ಬರ ಪ್ರೀತಿ, ಮದುವೆಯ ಆಸೆಗೆ ಹೆತ್ತವರು ಒಪ್ಪಿರಲಿಲ್ಲ.
ಹುಡುಗಿಯ ತಂದೆ ಮನು, ಶಶಾಂಕ್ ಮನೆಗೆ ಬಂದು ಬುದ್ದಿ ಹೇಳಿದ್ದ. ಹುಡುಗನ ತಂದೆ ತಾಯಿಯೂ ಬುದ್ದಿ ಹೇಳಿದ್ದರು. ಆದರೆ ಹುಡುಗ ಹುಡುಗಿ ಒಪ್ಪಿರಲಿಲ್ಲ. ಪ್ರೀತಿ ಕಂಟಿನ್ಯೂ ಆಗಿತ್ತು. ಇತ್ತೀಚೆಗೆ ಮನು ಅವರ ಮಗಳು ಪವಿತ್ರ (ಹೆಸರು ಬದಲಿಸಲಾಗಿದೆ) ಬೆಂಗಳೂರಿಗೆ ಬಂದಿದ್ದಾಗ ಶಶಾಂಕ್, ಆಕೆಯನ್ನು ಮನೆಗೇ ಕರೆದುಕೊಂಡು ಹೋಗಿದ್ದ. ಆಗಂತೂ ಮನು ಇನ್ನಷ್ಟು ಸಿಟ್ಟಿಗೆದ್ದು, ಕೊಂದೆ ಹಾಕುತ್ತೇನೆ. ಬೆಂಕಿ ಹಚ್ಚಿಬಿಡ್ತೇನೆ ಎಂದು ಕೂಗಾಡಿದ್ದರು. ಹೊಡೆದೂ ಇದ್ದರು.
ಎಷ್ಟೆಂದರೂ ಮಗ. ಏನೋ ಸಿಟ್ಟಿನಲ್ಲಿ ಬೈದಿದ್ದಾರೆ ಎಂದುಕೊಂಡಿದ್ದರಂತೆ ಶಶಾಂಕ್ ತಂದೆ ರಂಗನಾಥ್ ಮತ್ತು ತಾಯಿ ಪ್ರೇಮಾ. ಏಕೆಂದರೆ ಶಶಾಂಕ್, ಮನು ಅವರಿಗೂ ಮಗನೇ ಆಗಬೇಕಲ್ಲ. ಬೈದು ಬುದ್ದಿ ಹೇಳಿದ್ದಾರೆ ಎಂದುಕೊಂಡಿದ್ದವರಿಗೆ ಶಾಕ್ ಕೊಟ್ಟಿದ್ದಾರೆ ಆರೋಪಿ ಮನು.
ಮನು ಎಂದಿನಂತೆ ಕಾಲೇಜಿಗೆ ತೆರಳಿದ್ದು, ಆತನ ತಂದೆ ತಂದೆ ರಂಗನಾಥ ಬೆಳಗ್ಗೆ ಡ್ರಾಪ್ ಮಾಡಿದ್ದರು. ಬಳಿಕ ವಾಪಾಸ್ಸಾಗುವ ವೇಳೆ ಬಸ್ ನಿಲ್ದಾಣದಲ್ಲಿ ಬಸ್ಗೆ ಕಾಯುತಿದ್ದ ಮನುವನ್ನು ಕಿಡ್ನಾಪ್ (Kidnap) ಮಾಡಿದ ದುಷ್ಕರ್ಮಿಗಳು. ಯುವಕನ ಕೈ ಕಾಲು ಕಟ್ಟಿಹಾಕಿ ಬೆಂಕಿ ಇಟ್ಟಿದ್ದಾರೆ. ಇನ್ನೋವಾ ಕಾರಿನಲ್ಲಿ ಒಟ್ಟಾರೆ 6 ಮಂದಿ ಬಂದಿದ್ದಾರೆ. ಥಳಿಸಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾರೆ. ನಿನಗೆ ಎಷ್ಟು ಬಾರಿ ಹೇಳೋದು. ಲಹರಿಯನ್ನು ಪ್ರೀತಿಸ್ತೀಯಾ.. ಎಂದು ಹೆದರಿಸಿದ್ದಾರೆ. ಕಾರಿನಲ್ಲಿಯೇ ಶಶಾಂಕ್ ಕೂಡಾ ಪ್ರೀತಿಯನ್ನು ಬಿಡೋದಿಲ್ಲ. ಲಹರಿಯೇ ಲವರ್ ಎಂದು ಉತ್ತರ ಕೊಟ್ಟಿದ್ದಾನೆ. ಇದರಿಂದ ಇನ್ನಷ್ಟು ಕೆರಳಿದ ದೊಡ್ಡಪ್ಪ ರಸ್ತೆಗೆ ತಳ್ಳಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಹೇಗೋ ಬೆಂಕಿ ಆರಿಸಿಕೊಂಡ ಶಶಾಂಕ್, ಗೆಳತಿ ಹೀರಾ ಎಂಬುವವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಹೀರಾ, ಶಶಾಂಕ್ ಕುಟುಂಬದವರಿಗೆ ಮಾಹಿತಿ ನೀಡಿ ಆಂಬುಲೆನ್ಸ್ ಸಮೇತ ಬಂದು ಆಸ್ಪತ್ರೆಗೆ ಸೇರಿಸಿದ್ದಾರೆ.
ಯುವಕ ಶಶಾಂಕ್ ದೇಹ ಅರ್ಧಕ್ಕರ್ಧ ಸುಟ್ಟು ಹೋಗಿದೆ. ಶೇ.50ಕ್ಕಿಂತ ಹೆಚ್ಚು ಗಾಯವಾಗಿರುವ ಶಶಾಂಕ್, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾನೆ.
ಸದ್ಯ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ವಿದ್ಯಾರ್ಥಿ ಮನುಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿ ಕುಟುಂಬದವರು ಮನೆ ಖಾಲಿ ಮಾಡಿದ್ದಾರೆ.



