ಯಾರೀತ ಅಪರಿಚಿತ.. ಆ ಅಪರಿಚಿತರ ಗುಂಡಿನ ದಾಳಿಗೆ ಜಗತ್ತಿನ ಎಲ್ಲ ಕಡೆ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು (Most Wanted terrorist) ಹತ್ಯೆಯಾಗುತ್ತಲೇ ಇದ್ಧಾರೆ. ಈತ ಮೋಸ್ಟ್ ವಾಂಟೆಡ್. ಹೀಗೆ ಕೊಲೆಯಾದ 15ನೇ ಮೋಸ್ಟ್ ವಾಂಟೆಡ್ ಉಗ್ರಗಾಮಿ. ಹೆಸರು ಶಾಹೀದ್ ಲತೀಫ್ (Shahid Latif). ಕೊಲೆಯಾಗಿದ್ದು ಪಾಕಿಸ್ತಾನದ ಸಿಯಾಲ್ ಕೋಟ್ʻನಲ್ಲಿ. ಶಾಹೀದ್ ಲತೀಫ್ ಮಸೀದಿಗೆ ನಮಾಜು ಮಾಡಲು ಹೋಗಿದ್ದನಂತೆ. ವಾಪಸ್ ಬರುವಾಗ ಎದುರಿನಿಂದ ಬೈಕಿನಲ್ಲಿ ಬಂದ ಅಪರಿಚಿತರು ಲತೀಫ್ ಅಲಿಯಾಸ್ ಬಿಲಾಲ್, ಮತ್ತವನ ಜೊತೆಗಿದ್ದ ಇಬ್ಬರನ್ನು ಗುಂಡಿಟ್ಟು ಕೊಂದು ಪರಾರಿಯಾಗಿದ್ಧಾರೆ.
ಶಾಹಿದ್ ಲತೀಫ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಪ್ರಮುಖ ಸದಸ್ಯ ಮತ್ತು ಜನವರಿ 2, 2016 ರಂದು ನಡೆದ ಪಟಾನ್ಕೋಟ್ ದಾಳಿಯ ಪ್ರಮುಖ ಸಂಚುಕೋರನಾಗಿದ್ದ. ದಾಳಿಯನ್ನು ಕರ‍್ಯಗತಗೊಳಿಸಲು ಆತ ಸಿಯಾಲ್ಕೋಟ್ನಿಂದ ದಾಳಿಯನ್ನು ಸಂಘಟಿಸಿದ್ದ ಮತ್ತು ನಾಲ್ಕು ಜೆಎಂ ಭಯೋತ್ಪಾದಕರನ್ನು ಪಠಾಣ್ಕೋಟ್ಗೆ ಕಳುಹಿಸಿದ್ದ.
1994ರಲ್ಲಿ ಅರೆಸ್ಟ್ ಆಗಿದ್ದ..ಯುಪಿಎ ಸರ್ಕಾರ (UPA Government) ರಿಲೀಸ್ ಮಾಡಿತ್ತು..!
ಕಾನೂನುಬಾಹಿರ (ಚಟುವಟಿಕೆಗಳು) ಕಾಯಿದೆ (ಯುಎಪಿಎ) ಯ ಅಡಿಯಲ್ಲಿ ಭಯೋತ್ಪಾದನೆಯ ಆರೋಪದ ಮೇಲೆ ನವೆಂಬರ್ 1994 ರಲ್ಲಿ ಆತನನ್ನು ಭಾರತದಲ್ಲಿ ಬಂಧಿಸಲಾಯಿತು ಮತ್ತು ವಿಚಾರಣೆಗೆ ಒಳಪಡಿಸಲಾಯಿತು. 1996 ರಲ್ಲಿ, ಲತೀಫ್ನನ್ನು ಮಾದಕ ದ್ರವ್ಯ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಮ್ಮುವಿನಿಂದ ಬಂಧಿಸಲಾಯಿತು.
1999ರ ಡಿಸೆಂರ‍್ನಲ್ಲಿ 154 ಪ್ರಯಾಣಿಕರಿದ್ದ ವಿಮಾನವನ್ನು ಜೈಶ್ ಎ ಮೊಹಮ್ಮದ್ ಉಗ್ರರು ಅಫ್ಘಾನಿಸ್ತಾನದ ಕಂದಹರ‍್ನಲ್ಲಿ ಹೈಜಾಕ್ ಮಾಡಿದ್ದರು. ಇಂಡಿಯನ್ ರ‍್ಲೈನ್ಸ್ ಐಸಿ- 814 ವಿಮಾನದ ಪ್ರಯಾಣಿಕರನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಇತರೆ ಇಬ್ಬರನ್ನು ಭಾರತದ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದರೆ ಲತೀಫ್ ಹಾಗೂ ಇತರೆ 31 ಮಂದಿಯನ್ನು ಬಿಡುಗಡೆ ಮಾಡುವಂತೆ ಜೈಶ್ ಮುಂದಿಟ್ಟಿದ್ದ ಬೇಡಿಕೆಯನ್ನು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ನಿರಾಕರಿಸಿದ್ದರು.
2010ರಲ್ಲಿ ಈತನನ್ನು ಪಾಕಿಸ್ತಾನದ ಜೊತೆ ಸದ್ಭಾವನೆ ಸಾಧಿಸುವ ಸಲುವಾಗಿ ಬಿಡುಗಡೆ ಮಾಡಲಾಗಿತ್ತು. ಹಾಗೆ ಬಿಡುಗಡೆ ಮಾಡಲಾಗಿದ್ದ 25 ಉಗ್ರರಲ್ಲಿ ಲತೀಫ್ ಕೂಡಾ ಒಬ್ಬನಾಗಿದ್ದ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧವನ್ನು ಸರಿಪಡಿಸುವ ಅಂದಿನ ಯುಪಿಎ ಸರ್ಕಾರದ ಉದ್ದೇಶದ ಭಾಗವಾಗಿ 2010ರಲ್ಲಿ ಲತೀಫ್ ಮತ್ತು ಇತರೆ 24 ಉಗ್ರರನ್ನು ಬಿಡುಗಡೆ ಮಾಡಲಾಗಿತ್ತು. ಬಳಿಕ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು.



