ಕಾಂಗ್ರೆಸ್ಸಿಗರು ಮತ್ತೆ ಮತ್ತೆ ಎಡವಟ್ಟು ಮಾಡಿಕೊಳ್ತಾನೇ ಇದ್ದಾರೆ. ಅದ್ಯಾಕೋ ಏನೋ.. ಮಾತುಗಳು ಹಾದಿ ತಪ್ಪುತ್ತಿವೆ. ಕಂಟ್ರೋಲ್ ಇಲ್ಲ. ಹಿಂದೂಗಳನ್ನು ಟೀಕೆ ಮಾಡುವಾಗ ಏನ್ ಬೇಕಾದ್ರೂ ಸರಿ.. ಆಮೇಲೆ ಮ್ಯಾನೇಜ್ ಮಾಡಬಹುದು. ಸ್ಪಷ್ಟನೆ ಕೊಡಬಹುದು ಅಥವಾ ಕೊಡದೆಯೂ ಇರಬಹುದು ಎಂಬ ರೀತಿಯಲ್ಲೇ ಹೇಳಿಕೆ ಕೊಡ್ತಿದ್ದಾರೆ. ಈಗ ಆ ಲಿಸ್ಟಿಗೆ ಇನ್ನಿಬ್ಬರು ಸೇರ್ಪಡೆ. ಒಬ್ಬರು ಸಚಿವ ಸಂತೋಷ್ ಲಾಡ್. ಮತ್ತೊಬ್ಬರು ಮಾಜಿ ಸಚಿವ ಆಂಜನೇಯ. ಇಬ್ಬರೂ ಮಾತನಾಡಿರುವುದು ತಪ್ಪು. ಆದರೆ.. ಅವರು ತಮ್ಮ ಹೇಳಿಕೆಗೆ ಕ್ಷಮೆ ಕೇಳೋದಿಲ್ಲ. ಸ್ಪಷ್ಟನೆ, ವಿಷಾದವನ್ನೂ ಕೊಡಲ್ಲ. ಇಷ್ಟಕ್ಕೂ ಅವರು ಹೇಳಿದ್ದು ಇಷ್ಟೇ.
ಸಂತೋಷ್ ಲಾಡ್ ಹೇಳಿದ್ದು.. ಸಮಯ ಮತ್ತು ಸಂದರ್ಭ :
ದೆಹಲಿಯಲ್ಲಿ ನಡೆದ ಕಾರ್ ಬಾಂಬ್ ಸ್ಫೋಟಕ್ಕೆ ಪ್ರತಿಕ್ರಿಯೆ ನೀಡುವಾಗ..
ʻʻಈಗ ರಾಜಕೀಯ ಮಾತಾಡಲ್ಲ. ಕಳೆದ 10 ವರ್ಷದಲ್ಲಿ 25 ಬಾಂಬ್ ಸ್ಪೋಟ ಆಗಿದೆ. ಪುಲ್ವಾಮ, ಪೆಹಲ್ಗಾಮ್ ಸೇರಿದಂತೆ ಹಲವು ದೊಡ್ಡ ಸ್ಪೋಟಗಳಾಗಿದೆ. ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರದ ಜೊತೆಗಿದ್ದೇವೆ. ತಾಲಿಬಾನ್ ಸಚಿವ ಭಾರತದಲ್ಲಿ ಸುದ್ದಿಗೋಷ್ಠಿ ನಡೆಸುವಾಗ ಹೆಣ್ಣು ಮಕ್ಕಳು ಇರಬಾರದು ಅಂತಾನೆ. ಅದನ್ನ ಕೇಂದ್ರ ಸರ್ಕಾರ ಒಪ್ಪುತ್ತದೆ. ಸಿಂಧೂರ್, ಹೆಣ್ಣುಮಕ್ಕಳ ಗೌರವ ಅಂದವರು ಎಲ್ಲಿ ಹೋದರು? ನಿಮ್ಮ ಅಕ್ಕತಂಗಿಯರು ಪ್ರೆಸ್‌ಮೀಟ್‌ಗೆ ಬರಬಾರದು ಎಂದರಲ್ಲ ಆಗ ದೇಶಕ್ಕೆ ಅವಮಾನ ಆಗಲಿಲ್ವಾ? ಹತ್ತು ವರ್ಷದಲ್ಲಿ ಯಾವ ಹಿಂದೂಗಳನ್ನು ಉದ್ದಾರ ಮಾಡಿದ್ದೀರಿ? ಸಗಣಿ, ಉಚ್ಚೆ ಅನ್ನೋದನ್ನ ಬಿಟ್ಟು ಇನ್ನೇನು ಮಾತನಾಡಿದ್ದೀರ? ಕಾಫಿ, ಟೀ ಯಾಕೆ ಕುಡಿಸುತ್ತೀರಾ ಉಚ್ಚೆ ಕುಡಿಸಿʼʼ ಎಂದಿದ್ದಾರೆ.
ವಾಸ್ತವ ಕಥೆ ಏನು..
2014ರ ನಂತರ ನಡೆದಿರುವ ಎಲ್ಲ ಪ್ರಕರಣಗಳೂ ಸೇರಿ 11 ಸ್ಫೋಟ ಅಥವಾ ಭಯೋತ್ಪಾದಕ ದಾಳಿಗಳಾಗಿವೆ. 25 ಅಲ್ಲ.
ಪ್ರಶ್ನೆ : ಸಂತೋಷ್ ಲಾಡ್ ಅವರನ್ನು ಯಾವುದೇ ವಿಷಯ ಪ್ರಶ್ನೆ ಕೇಳಿದರೂ.. ಅವರು ಉತ್ತರ ಕೊಡೋದಿಲ್ಲ. ಬದಲಿಗೆ ಪ್ರಶ್ನೆಯನ್ನೇ ಕೇಳ್ತಾರೆ. ತಿರುಗಿಸಿ ಪ್ರಶ್ನೆ ಕೇಳಿದರೆ ಪತ್ರಕರ್ತರು ಪತ್ರಿಕಾ ಧರ್ಮದ ಪ್ರಕಾರ ವಾದ ಮಾಡೋಕೆ ಆಗುವುದಿಲ್ಲ. ಹೇಳಿದ್ದನ್ನಷ್ಟೇ ಬರೆದುಕೊಂಡು ಅಥವಾ ರೆಕಾರ್ಡ್ ಮಾಡಿಕೊಂಡು ಬರಬೇಕು.
ಇನ್ನು ಮಾಜಿ ಸಚಿವ ಆಂಜನೇಯ ವಿಷಯಕ್ಕೆ ಬಂದರೆ..
ಸಂದರ್ಭ : ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟಿನಲ್ಲಿ ಮುಸ್ಲಿಮರು ಸಾಮೂಹಿಕವಾಗಿ ನಮಾಜ್ ಮಾಡಿದ್ದು ಸರೀನಾ ಎಂಬ ಪ್ರಶ್ನೆಗೆ ಉತ್ತರ ನೀಡುವಾಗ..
ʻʻ ಏರ್ಪೋರ್ಟ್ನಲ್ಲಿ ನಮಾಜ್ ಮಾಡಿದ್ದಾರೆ ತಪ್ಪೇನು. ವ್ರು ಮಾಡಿದ್ದು ಪ್ರಾರ್ಥನೆ, ಅವರೇನು ಕೋಲು ಹಿಡಿದುಕೊಂಡು ಹೋಗಿಲ್ಲ. ಪಾಪ ಅವರು ನಮಾಜ್ ಕೂಡ ಮಾಡಬಾರದಾ? ಅವರ ಶ್ರದ್ಧೆ ನೋಡಿ ನೀವೆಲ್ಲಾ ಕಲಿತುಕೊಳ್ಳಿ. ಅವರು ಎಲ್ಲಿದ್ರೂ, ಅವರ ಮನದ ನೆಮ್ಮದಿಗೆ ಪ್ರಾರ್ಥನೆ ಮಾಡ್ತಾರೆ. ಬಸ್ ಸ್ಟ್ಯಾಂಡ್ ನಲ್ಲೂ ಮಾಡ್ತಾರೆ. ವಿಮಾನ ನಿಲ್ದಾಣದಲ್ಲೂ ಸಾಮೂಹಿಕ ಪ್ರಾರ್ಥನೆಯನ್ನ ಕರೆಕ್ಟ್ ಆಗಿ ಮಾಡಿಕೊಂಡಿದ್ದಾರೆ. ಅವರೇನು, ಇವರಂತೆ ನಾಮ ಹಾಕಿಕೊಂಡು, ಪೂಜೆ ಇಟ್ಕೊಂಡು ತಟ್ಟೆಗೆ ಹಾಕಯ್ಯ ಅಂತ ಕೇಳಿಲ್ಲ. ಅವರು ಮೂರ್ಖರಲ್ಲ ಮಸೀದಿ ಇಲ್ಲ ಅಂತೇಳಿ ಅಲ್ಲಿ ಮಾಡಿರಬಹುದು. ಗಣೇಶ್ ನ ಹಬ್ಬದಲ್ಲಿ ಎಣ್ಣೆ ಅಂಗಡಿಗಳು ರಶೋ ರಶಾಗುತ್ತೆ. ಎಲ್ಲಿದೆ ನಿಮ್ಮ ಶ್ರದ್ಧೆ ಎಂದು ಮಾಜಿ ಸಚಿವರು ಪ್ರಶ್ನೆ ಮಾಡಿದ್ರು. ಈಗ ಯಾವುದೋ ಒಂದು ವರ್ಗದ ವಿರುದ್ಧ ಶಕ್ತಿ ಪ್ರದರ್ಶನ ಮಾಡ್ತಿದ್ದಾರೆ. ಗಣೇಶ್ ಹಬ್ಬದಲ್ಲಿ ಯಾವ ಹೂ, ಹಣ್ಣಿನ ವ್ಯಾಪಾರ ಆಗಲ್ಲ. ಹೈಕ್ಲಾಸ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳು ಹೌಸ್ ಪುಲ್ ಆಗಿರುತ್ತವೆʼʼ
ವಾಸ್ತವ ಏನು..?
ಗಣೇಶ ಹಬ್ಬ ಅಷ್ಟೇ ಅಲ್ಲ. ಯಾವ ಹಬ್ಬವೂ ಹೊರತಾಗಿಲ್ಲ. ಎಲ್ಲ ಹಬ್ಬದ ದಿನವೂ ಬಾರ್ & ರೆಸ್ಟೋರೆಂಟ್ ಹೌಸ್ ಫುಲ್ ಆಗಿರುತ್ತವೆ. ಎಲ್ಲ ಧರ್ಮದವರೂ ಇರುತ್ತಾರೆ. ಮಾತು ಆಡುವಾಗ ನಾಲಗೆ ಸರಿಯಾಗಿರಬೇಕು. ಏನ್ ಬೇಕಾದರೂ ಹೇಳಬಹುದು. ಮ್ಯಾನೇಜ್ ಮಾಡಬಹುದು ಎಂಬ ಆರೋಗೆನ್ಸಿ ಉತ್ತಮ ಅಲ್ಲ.



